Asianet Suvarna News Asianet Suvarna News

'ರೇಮೊ' ನಡುವೆಯೂ ಚೊಚ್ಚಲ ಹಿಂದಿ ಸಿನಿಮಾದ ಶೂಟಿಂಗ್ ಮುಗಿಸಿದ ಪವನ್ ಒಡೆಯರ್

ಕನ್ನಡದ ಯಶಸ್ವಿ ನಿರ್ದೇಶಕ ಪವನ್ ಒಡೆಯರ್ ಹಿಂದಿಯ ನೋಟರಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಸಿನಿಮಾ ಪ್ರಾರಂಭ ಮಾಡಿ 40 ದಿನಗಳಲ್ಲೇ ಶೂಟಿಂಗ್ ಮುಗಿಸಿದ್ದಾರೆ.   

Kannada director Pawan wadeyar completes Hindi film shooting of notary sgk
Author
First Published Nov 19, 2022, 4:14 PM IST

ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕ ಹಾಗೂ ನಿರ್ಮಾಪಕ ಪವನ್ ಒಡೆಯರ್ 'ನೋಟರಿ' ಎಂಬ ಹಿಂದಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಬಾಲಿವುಡ್ ಅಂಗಳದಲ್ಲೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿರುವ ಪವನ್ ಒಡೆಯರ್ ಖ್ಯಾತ ನಟ ಪರಂಬ್ರತ ಚಟ್ಟೋಪಾಧ್ಯಾಯ ಅವರಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪಕ್ಕಾ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾ ಇದಾಗಿದ್ದು ಕಳೆದ ತಿಂಗಳಷ್ಟೇ ಸೆಟ್ಟೇರಿತ್ತು. ಇದೀಗ ಯಶಸ್ವಿ 40 ದಿನಗಳ ಶೂಟಿಂಗ್ ಮುಗಿಸಿ ಕುಂಬಳಕಾಯಿ ಒಡೆದಿದೆ ಸಿನಿಮಾ ತಂಡ. ಅಕ್ಟೋಬರ್ ಆರಂಭದಲ್ಲಿ ಸೆಟ್ಟೇರಿದ್ದ 'ನೋಟರಿ' ಸಿನಿಮಾವನ್ನು ಭೋಪಾಲ್ ಹಾಗೂ ಮುಂಬೈನಲ್ಲಿ ಸೆರೆ ಹಿಡಿಯಲಾಗಿದೆ. ಸೆಟ್ಟೇರಿದ ದಿನದಿಂದ ಶೂಟಿಂಗ್ ನಲ್ಲಿ ತೊಡಗಿದ್ದ ಚಿತ್ರತಂಡ ನಲವತ್ತು ದಿನಗಳ ಯಶಸ್ವಿ ಚಿತ್ರೀಕರಣಕ್ಕೆ ಶುಭಂ ಹೇಳಿದೆ.   

ಪವನ್ ಒಡೆಯರ್ ಚೊಚ್ಚಲ ಚಿತ್ರಕ್ಕೆ ಬೆಂಗಾಲಿ ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಪರಂಬ್ರತಾ ಚಟ್ಟೋಪಾಧ್ಯಾಯ ನಾಯಕನಾಗಿ ನಟಿಸಿದ್ದಾರೆ. ‘ಕಹಾನಿ’, ‘ಪರಿ’ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲಿ ಪರಂಬ್ರತ ಚಟ್ಟೋಪಾಧ್ಯಾಯ ನಟಿಸಿ ಖ್ಯಾತಿ ಗಳಿಸಿದ್ದಾರೆ. ನಾಯಕಿಯಾಗಿ ಗೀತಾ ಬಸ್ರಾ ನಟಿಸುತ್ತಿದ್ದಾರೆ. ಬಹುದೊಡ್ಡ ತಾರಾಗಣ ಒಳಗೊಂಡ ಈ ಚಿತ್ರದಲ್ಲಿ ಬಾಲಿವುಡ್ ಹಿರಿಯ ಹಾಗೂ ಖ್ಯಾತ ನಟರ ಸಮಾಗಮವಿದೆ. ದಿಲೀಪ್ ತಾಹಿಲ್, ಮನೋಜ್ ಜೋಶಿ, ಮೋಹನ್ ಅಗಾಶಿ, ಝರೀನಾ ವಹಾಬ್, ಶಿವು ಪಂಡಿತ್, ಸುರೇಂದ್ರ ರಾಜನ್, ಸಹರ್ಷ್ ಶುಕ್ಲ ಒಳಗೊಂಡ ಬಹುದೊಡ್ಡ ಸ್ಟಾರ್ ತಾರಾಗಣ ಚಿತ್ರದಲ್ಲಿದೆ.

ಪವನ್ ಒಡೆಯರ್ ಹಿಂದಿ ಚಿತ್ರಕ್ಕೆ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ನಾಯಕಿ!

ಚಿತ್ರಕ್ಕೆ ಪವನ್ ಒಡೆಯರ್ ಕಥೆ ಬರೆದಿದ್ದು, ಪವನ್ ಒಡೆಯರ್ ಮತ್ತು ಮುಂಬೈ ಮೂಲದ ತಶಾ ಭಂಬ್ರಾ, ಸ್ಪರ್ಶ್ ಖೆಟರ್ ಪಾಲ್ ಚಿತ್ರಕಥೆ ಬರೆದಿದ್ದಾರೆ. ವೈದಿ.ಎಸ್ ಕ್ಯಾಮೆರಾ ನಿರ್ದೇಶನ, ರೋಹಿತ್ ಕುಲಕರ್ಣಿ, ಮೌಸಿನ್ ಜಾವೇದ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಕಾಶ್ ಎಂಟಟೈನ್ಮೆಂಟ್ ಪ್ರೊಡಕ್ಷನ್, ಒಡೆಯರ್ ಮೂವೀಸ್ ಮತ್ತು ಬೌಂಡ್ ಲೆಸ್ ಮೀಡಿಯಾ ಸಹಯೋಗದೊಂದಿಗೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಕುಡಿದು ತೂರಾಡಿದ ವಿಡಿಯೋ ವೈರಲ್; ಆಶಿಕಾಗೆ ಬಹಿರಂಗ ಕ್ಷಮೆ ಕೇಳಿದ ನಿರ್ದೇಶಕ ಪವನ್ ಒಡೆಯರ್

ವಪನ್ ಒಡೆಯರ್ ಸದ್ಯ ಕನ್ನಡದ ರೇಮೊ ಸಿನಿಮಾದ ರಿಲೀಸ‌್‌ಗೆ ಎದುರು ನೋಡುತ್ತಿದ್ದಾರೆ. ರೇಮೊ ಬ್ಯುಸಿಯ ನಡುವೆಯೂ ಪವನ್ ಒಡೆಯರ್ ಹಿಂದಿ ಸಿನಿಮಾದ ಚಿತ್ರೀಕರಣ ಮುಗಿಸಿರುವುದು ಅಚ್ಚರಿ ಮೂಡಿಸಿದೆ. ಪವನ್ ಒಡೆಯರ್ ನಿರಂತರವಾಗಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಸದ್ಯ ರೇಮೊ ರಿಲೀಸ್‌ನ ಬ್ಯುಸಿಯಲ್ಲಿರುವ ಪವನ್ ಪ್ರಮೋಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ರೇಮೊ ಸಿನಿಮಾದಲ್ಲಿ ನಟ ಇಶಾನ್ ಮತ್ತು ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರೋಮೋ ರಿಲೀಸ್ ಆದ ಬಳಿಕ ಪವನ್  ಚೊಚ್ಚಲ ಹಿಂದಿ ಸಿನಿಮಾ ನೋಟರಿ ರಿಲೀಸ್‌ಗೆ ತಯಾರಿ ನಡೆಸಲಿದ್ದಾರೆ.          

Follow Us:
Download App:
  • android
  • ios