ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ನಿರ್ದೇಶಕ ಪವನ್‌ ಒಡೆಯರ್‌ ಸಾರಥ್ಯದಲ್ಲಿ ಬದಲಾಗು ನೀನು ಬದಲಾಯಿಸು ನೀನು ಹೆಸರಿನ ದೃಶ್ಯ ರೂಪಕದ ಹಾಡನ್ನು ರೂಪಿಸಿದ್ದಾರೆ.  ಡಿ ಬೀಟ್ಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡು ಬಿಡುಗಡೆ ಮಾಡಲಾಗುತ್ತದೆ.

ವಿಶೇಷ ಅಂದರೆ ಕನ್ನಡದ ಟಾಪ್‌ ನಟ, ನಟಿಯರು ಈ ಹಾಡಿನಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿರುವುದು. ಇಮ್ರಾನ್‌ ಸರ್ದಾರಿಯಾ ನೃತ್ಯ ಸಂಯೋಜನೆ ಮಾಡಿದ್ದು, ಕ್ರಿಕೆಟಿಗ ಅನಿಲ್‌ ಕುಂಬ್ಳೆ, ನಟರಾದ ರವಿಚಂದ್ರನ್‌, ಉಪೇಂದ್ರ, ಶಿವರಾಜ್‌ಕುಮಾರ್‌, ಸುದೀಪ್‌, ಪುನೀತ್‌ ರಾಜ್‌ ಕುಮಾರ್‌, ದರ್ಶನ್‌, ಯಶ್‌, ರಮೇಶ್‌ ಅರವಿಂದ್‌, ರಕ್ಷಿತ್‌ ಶೆಟ್ಟಿ, ಗಣೇಶ್‌, ಅಭಿಷೇಕ್‌ ಅಂಬರೀಶ್‌, ಇಶಾನ್‌, ನಟಿಯರಾದ ರಶ್ಮಿಕಾ ಮಂದಣ್ಣ, ಸಾನ್ವಿ ಶ್ರೀವಾಸ್ತವ್‌, ಸಂಸದೆ ಸುಮಲತಾ ಅಂಬರೀಶ್‌, ಹರ್ಷಿಕಾ ಪೂಣಚ್ಚ, ಗಾಯಕ ವಿಜಯ್‌ಪ್ರಕಾಶ್‌ ಸೇರಿದಂತೆ 50ಕ್ಕೂ ಹೆಚ್ಚು ತಾರೆಗಳು ಈ ಹಾಡಿನಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ.

View post on Instagram

‘ಇದೊಂದು ವಿಶಿಷ್ಟಬಗೆಯ ಹಾಡು. ಮಾತು, ಹಾಡು ಎರಡು ಒಟ್ಟಿಗೆ ಇದೆ. ಹೀಗಾಗಿ ಇದು ದೃಶ್ಯ ರೂಪಕ ಎನ್ನಬಹುದು. ಕೊರೋನಾ ಬಂದ ಮೇಲೆ, ಬಂದ ನಂತರದ ಪರಿಸ್ಥಿತಿಯನ್ನು ಹೇಳುತ್ತಲೇ ಕೊರೋನಾ ನಂತರದ ದಿನಗಳ ಜೀವನದ ಬಗ್ಗೆ ಹೇಳುವ ಹಾಡು ಇದು. ಕೊರೋನಾದಂತಹ ವಿಪ್ಪತುಗಳ ಜತೆಗೆ ಬದುಕು ರೂಪಿಸಿಕೊಳ್ಳುವ ಮಹತ್ವ ಸಾರುವುದು ಈ ಹಾಡಿನ ಉದ್ದೇಶ. 15 ದಿನಗಳ ಕಾಲ ಸಮಯ ತೆಗೆದುಕೊಂಡು ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ’ ಎನ್ನುತ್ತಾರೆ ನಿರ್ದೇಶಕ ಪವನ್‌ ಒಡೆಯರ್‌.

ಪವನ್‌ ಒಡೆಯರ್‌ ನಿರ್ದೇಶನದ, ವಿ ಹರಿಕೃಷ್ಣ ಸಂಗೀತಾ ನೀಡಿರುವ ಈ ಹಾಡಿಗೆ ಪ್ರದ್ಯುಮ್ನಾ ಸಾಹಿತ್ಯ ನೀಡಿದ್ದಾರೆ. ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ಈ ಹಾಡಿನ ತಯಾರಿಕೆಗೆ ಬೆಂಬಲವಾಗಿ ನಿಂತಿದೆ.