ಸ್ಯಾಂಡಲ್‌ವುಡ್‌ ರಾಕಿಂಗ್ ಸ್ಟಾರ್ ಯಶ್‌ ಹಾಗೂ ಸಿಂಪಲ್ ಬ್ಯೂಟಿ ಕೃತಿ ಕರಬಂಧ ಅಭಿನಯದ 'ಗೂಗ್ಲಿ' ಸಿನಿಮಾ ಈಗಲೂ ತೆರೆ ಕಂಡರೆ ಮತ್ತೊಮ್ಮೆ ಸೂಪರ್ ಹಿಟ್ ಆಗುವುದರಲ್ಲಿ ಅನುಮಾವಿಲ್ಲ. ಯಶ್‌ ವೃತ್ತಿ ಜೀವನದಲ್ಲಿ ಮೊದಲ ರೆಕಾರ್ಡ್ ಬ್ರೇಕಿಂಗ್ ಸಿನಿಮಾ ಬಗ್ಗೆ ನಿರ್ದೇಶಕ ಪವನ್ ಒಡೆಯರ್‌ ಇತ್ತೀಚೆಗೆ ಮಾತನಾಡಿದ್ದಾರೆ.  ಚಿತ್ರದ ಬಗ್ಗೆ ಕೆಲವೊಂದು ಇಂಟರೆಸ್ಟಿಂಗ್ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ಕೊರೊನಾ ವಿರುದ್ಧ ಪವನ್ ಒಡೆಯರ್ ಓದಿನ ಮಂತ್ರ..!

ಒಡೆಯರ್ ಮಾತುಗಳು:
ಜಯಣ್ಣ ನಿರ್ಮಾಣ ಹಾಗೂ ಪವನ್ ಒಡೆಯರ್ ಆ್ಯಕ್ಷನ್‌ ಕಟ್‌ನಲ್ಲಿ ಮೂಡಿ ಬಂದ ಗೂಗ್ಲಿ ಸಿನಿಮಾ ಟೈಟಲ್‌ ಹಿಂದಿರುವ ರೋಚಕ ಕಥೆಯನ್ನು ರಿವೀಲ್ ಮಾಡಿದ್ದಾರೆ. 'ಗೂಗ್ಲಿ' ಎಂಬ ಟೈಟಲ್‌ ಬಳಸಲು ನಿರ್ಮಾಪಕರಿಗೆ ಇಷ್ಟ ಇರಲಿಲ್ಲ. ಬೇರೆ ಏನಾದರೂ ಇಡಬೇಕು ಎಂದು ಚಿಂತಿಸುತ್ತಿದ್ದರು. ಆದರೆ ಪವನ್ ಅವರಿಗೆ ಇದೇ ಟೈಟಲ್ ಇಡಬೇಕು ಎಂದು ನಿರ್ಧರಿಸಿದ್ದರಂತೆ.. 

ಸಾಕಷ್ಟು ಜನರನ್ನು ಸಂಪರ್ಕಿಸಿ 'ಗೂಗ್ಲಿ' ಪದದ ಅರ್ಥ ತಿಳಿದು ಕೊಂಡರು. ಜನರಿಗೆ 'ಗೂಗ್ಲಿ' ಪದ ಕೇಳಿದ ತಕ್ಷಣ ಏನು ಅನಿಸುತ್ತದೆ ಎಂದು ಅಭಿಪ್ರಾಯ ಪಡೆದುಕೊಂಡು, ನಟ ಯಶ್‌ ಅವರನ್ನೂ ಸಂಪರ್ಕಿಸಿದ್ದರು. ಅಲ್ಲಿಂದ ಶುರುವಾದ ಕಥೆ ಸಿನಿಮಾವಾಗಿ, ಎಲ್ಲರ ಪ್ರೀತಿ ಗಳಿಸಿ, 150ಕ್ಕೂ ಹೆಚ್ಚು ದಿನಗಳನ್ನು ಪೂರೈಸಿತು ಎಂದು ಹಿಂದಿನ ಘಟನೆಯನ್ನು ಪವನ್ ನೆನಪಿಸಿಕೊಂಡಿದ್ದಾರೆ.

ಬದಲಾದುವು ರೆಮೋ ಹಾಡುಗಳು;ಪವನ್‌ ಒಡೆಯರ್‌ ಕೊಟ್ಟ 5 ಕಾರಣಗಳು!
 
ಈಗಲೂ ಗೂಗ್ಲಿ ಚಿತ್ರದ ಹಾಡುಗಳನ್ನು ಕೇಳಿದರೆ ಯಾರೇ ಆದರೂ ಹೆಜ್ಜೆ ಹಾಕುತ್ತಾರೆ. 'ಗೋವಿಂದಾಯ ನಮಃ' ಚಿತ್ರದ ನಂತರ ಪವನ್ ಒಡೆಯರ್‌ಗೆ ಇದೊಂದು ಸೂಪರ್‌ ಹಿಟ್‌ ತಂದುಕೊಟ್ಟ ಸಿನಿಮಾ ಆಗಿತ್ತು.