ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಾಗೇಶ್ ಬಾಬು ವಯೋ ಸಹಜ ಕಾಯಿಲೆಯಿಂದ ಅ.6ರಂದು ಬೆಳಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

1957ರಲ್ಲಿ ಪ್ರೇಮದ ಪುತ್ರಿ, ಬೆಟ್ಟದ ಕಳ್ಳ ಹಾಗೂ ಪ್ರತಿಮಾ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಅವರು ಕಾಲಿಟ್ಟಿದ್ದರು. ಕೋಟಿ ಚನ್ನಯ್ಯ ಎಂಬ ತುಳು ಚಿತ್ರಕ್ಕೆ ತಾಂತ್ರಿಕ ನಿರ್ದೇಶಕನಾಗಿದ್ದರು.  ತೂಗುದೀಪ, ನನ್ನ ಕರ್ತವ್ಯ ಚಿತ್ರಗಳಿಗೆ ಸಂಭಾಷಣೆಯನ್ನೂ ಬರೆದಿದ್ದಾರೆ. 'ಅನಿರೀಕ್ಷಿತ' ಇವರು ಮೊದಲು ನಿರ್ಮಿಸಿ ನಿರ್ದೇಶಿಸಿದ ಸಿನಿಮಾ. 

ಪಾಪ ಪಾಂಡು ಖ್ಯಾತಿಯ ಕೊಡಗನೂರು ಜಯಕುಮಾರ್ ಇನ್ನಿಲ್ಲ 

ಮದರಾಸಿನಲ್ಲಿ ವೆಂಕಟೇಶ್ವರನ್ ಜೊತೆ ತ್ರಿ ಸ್ಟಾರ್ಸ್‌ ಸ್ಥಿರಚಿತ್ರಕ್ಕ ಛಾಯಾಗ್ರಹಣ ಸಂಸ್ಥೆ ನಿರ್ಮಿಸಿದ ನಂತರ ಬೆಂಗಳೂರಿನ ಗಾಂಧಿ ನಗರದಲ್ಲಿ ಪ್ರಗತಿ ಸ್ಟುಡಿಯೋ ಆರಂಭಿಸಿದ್ದರು.  1972ರಲ್ಲಿ ಆರಂಭವಾದ ಪ್ರಗತಿ ಸ್ಟುಡಿಯೋ 350ಕ್ಕೂ ಹೆಚ್ಚು ಸಿನಿಮಾಗಳನ್ನು ಛಾಯಾಗ್ರಹಣ ಮಾಡಿದ್ದು, ಅನೇಕ ಸಿನಿಮಾ ನಿರ್ದೇಶಕರ ಮೀಟಿಂಗ್ ಪಾಯಿಂಟ್ ಆಗಿತ್ತು.

ಪತ್ನಿ ಶ್ಯಾಮಲಾ ಹಾಗೂ ಮೂವರು ಮಕ್ಕಳನ್ನು ಅಗಲಿರುವ ನಾಗೇಶ್ ಬಾಬ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ.