ಹಿರಿಯ ರಂಗಕರ್ಮಿ ಕೊಡಗನೂರು ಜಯಕುಮಾರ್ (70) ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಜೂನಿಯರ್ ರಾಜಕುಮಾರ್ ಅಂತಲೇ ಪ್ರಸಿದ್ಧಿಯಾಗಿದ್ದರು.

ಕಿರುತೆರೆಯಲ್ಲಿ ಪಾಪ ಪಾಂಡು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ವೃತ್ತಿ ರಂಗಭೂಮಿಯಲ್ಲಿ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿದ್ದರು. ಹಿರಿಯ ಕಲಾವಿದ ಜಯಕುಮಾರ್ ಅವರ ಹುಟ್ಟೂರು ದಾವಣಗೆರೆ ತಾಲೂಕಿನ ಕೊಡಗನೂರು. ಹತ್ತನೇ ವಯಸ್ಸಿನಲ್ಲೇ ಬಣ್ಣದ ನಂಟು. ಅಭಿನಯಿಸಿದ ರಂಗನಾಟಕಗಳ ಲೆಕ್ಕ ಇಟ್ಟವರಲ್ಲ.

ವಿಕ್ರಮ-ಬೇತಾಳ ಖ್ಯಾತಿಯ ಕಾರ್ಟೂನಿಸ್ಟ್‌ ಶಿವಶಂಕರ್‌ ನಿಧನ!

ಅವರು ಅಭಿನಯಿಸಿದ ಕಿರುತೆರೆ ಧಾರಾವಾಹಿಗಳ ಲೆಕ್ಕ ಇಟ್ಟವರೂ ಅಲ್ಲ. ಆರಂಭಕ್ಕೆ ಟಿ.ಎಸ್.ನಾಗಾಭರಣ ಅವರ ಸಂಕ್ರಾಂತಿ,  ಮಾಹಾಮಾಯೆ, ಅಪ್ಪ, ಕೆಳದಿ ಚೆನ್ನಮ್ಮ, ಎಸ್.ನಾರಾಯಣ ಅವರ ಭಾಗೀರಥಿ, ಕನ್ನಡ ಕಿರುತೆರೆಯಲ್ಲಿ ಹಿರಿದಾದ ಹೆಸರು ಮಾಡಿದ  ಪಾಪ ಪಾಂಡು.. ಹೀಗೆ ಅರವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹೆಸರು ಮಾಡಿದ್ದಾರೆ.

ಐವತ್ತಕ್ಕೂ ಹೆಚ್ಚು ಸಿನೆಮಾಗಳಲ್ಲೂ ಅಭಿನಯಿಸಿದ್ದಾರೆ. ಶಿವರಾಜಕುಮಾರ ಅವರೊಂದಿಗೆ ಜನುಮದ ಜೋಡಿ ಚಲನಚಿತ್ರ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ನಾಲ್ಕು ಪ್ರಮುಖ ಚಿತ್ರಗಳಲ್ಲಿ‌ ಅಭಿನಯಿಸಿದ್ದಾರೆ.