KR Murali Krishna Death: ಸ್ಯಾಂಡಲ್‌ವುಡ್ ನಿರ್ದೇಶಕ ಮುರಳಿ ಕೃಷ್ಣ ಸೋಮವಾರ (ನವೆಂಬರ್ 14) ನಿಧನ ಹೊಂದಿದ್ದಾರೆ. ಸೋಮವಾರ ರಾತ್ರಿ 7.30ರ ಸುಮಾರಿಗೆ ನಿಧನರಾದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಸ್ಯಾಂಡಲ್‌ವುಡ್ ನಿರ್ದೇಶಕ ಮುರಳಿ ಕೃಷ್ಣ ಸೋಮವಾರ (ನವೆಂಬರ್ 14) ನಿಧನ ಹೊಂದಿದ್ದಾರೆ. ಸೋಮವಾರ ರಾತ್ರಿ 7.30ರ ಸುಮಾರಿಗೆ ನಿಧನರಾದರು. ಕನ್ನಡದಲ್ಲಿ ಗರ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಿಗೆ ಮುರಳಿ ಕೃಷ್ಣ ಆಕ್ಷನ್ ಕಟ್ ಹೇಳಿದ್ದರು. ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ದೇಶಕ ಮುರಳಿ ಕೃಷ್ಣ ಅವರು ಬ್ರೈನ್ ಟ್ಯೂಮರ್‌ ಶಸ್ತ್ರಚಿಕಿತ್ಸೆ ಬಳಿಕ ಹೃದಯಾಘಾತದಿಂದ ನಿಧನಹೊಂದಿದ್ದಾರೆ ಎಂದು ಕುಟುಂಬದವರು ಮಾಹಿತಿ ತಿಳಿಸಿದ್ದಾರೆ. 

Add Asianetnews Kannada as a Preferred SourcegooglePreferred

ಕೆ.ಆರ್​. ಮುರಳಿ ಕೃಷ್ಣ ಅವರಿಗೆ ಬ್ರೈನ್​ ಟ್ಯೂಮರ್​ ಆಗಿತ್ತು. ಅದರ ಸಲುವಾಗಿ ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಸರ್ಜರಿ ಬಳಿಕ ಅವರಿಗೆ ಹೃದಯಾಘಾತ ಸಂಭವಿಸಿದ ಪರಿಣಾಮವಾಗಿ ನಿಧನರಾಗಿದ್ದಾರೆ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಹೇಳುತ್ತಿದ್ದಾರೆ. 

ಕೃಷ್ಣ ಅವರಿಗೆ ಮೊದಲು ಬ್ರೈನ್ ಟೂಮರ್ ಇರುವುದು ಗೊತ್ತಾಗಿರಲಿಲ್ಲ. ಸಿಟಿ ಸ್ಕ್ಯಾನ್ ಬಳಿಕ ತಡವಾಗಿ ಟ್ಯೂಮರ್ ಪತ್ತೆಯಾಗಿದೆ. ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆ ಫಲಕಾರಿಯಾದರೂ ಹೃದಯಾಘಾತದಿಂದ ನಿಧನಹೊಂದಿರು. ಮುರಳಿ ಕೃಷ್ಣ ಅವರು ಇಬ್ಬರೂ ಹೆಣ್ಣು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. 

Actor Krishna Death: ಟಾಲಿವುಡ್‌ ಸೂಪರ್‌ಸ್ಟಾರ್‌ ಮಹೇಶ್‌ ಬಾಬು ತಂದೆ ಇನ್ನಿಲ್ಲ

ಮುರಳಿ ಕೃಷ್ಣ ತಮ್ಮ ಸಿನಿಮಾಗಾಗಿ ಬಾಲಿವುಡ್ ನಿಂದ ಖ್ಯಾತ ಕಾಮಿಡಿ ಸ್ಟಾರ್ ಜಾನಿ ಲಿವರ್ ಅವರನ್ನು ಕನ್ನಡಕ್ಕೆ ಕರೆತಂದಿದ್ದರು. ಮುರಳಿ ನಿರ್ದೇಶಕ ಗರ ಸಿನಿಮಾದಲ್ಲಿ ಜಾನಿ ಲಿವರ್ ನಟಿಸಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದರೂ ಸಿನಿಮಾ ಪ್ರವೃತ್ತಿಯಾಗಿಸಿಕೊಂಡಿದ್ದರು. ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸಿನಿಮಾಗಳನ್ನ ನಿರ್ಮಿಸಿದ್ದರು. 

ಫಲಿಸದ ಚಿಕಿತ್ಸೆ; ಹಿರಿಯ ನಟ ಲೋಹಿತಾಶ್ವ ವಿಧಿವಶ

ಮುರಳಿ ಕೃಷ್ಣ ಅವರ ಪಾರ್ಥಿವ ಶರೀರವನ್ನು ಸಹಕಾರ ನಗರದ ತಮ್ಮ ನಿವಾಸದಲ್ಲಿ ಇರಿಸಲಾಗಿದೆ. ಅಲ್ಲೇ ಅಂತಿಮ ದರ್ಶನಕ್ಕೆ ಅವಕಾಶ ಅವಕಾಶ ಮಾಡಿಕೊಡಲಾಗಿದೆ. ಇಂದು ಮಧ್ಯಾಹ್ನ 12:30ರ ಸುಮಾರಿಗೆ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.