ಜಟ್ಟ , ಮೈತ್ರಿ ಹೀಗೆ ಸಾಕಷ್ಟು ಸಾಮಾಜಿಕ ಕಳಕಳಿಯುಳ್ಳ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸ್ಯಾಂಡಲ್‌ವುಡ್‌ ಹೆಸರಾಂತ ನಿರ್ದೇಶಕ ಗಿರಿರಾಜ್‌ ವಿಶೇಷ ವಿಡಿಯೋವೊಂದನ್ನು ತಮ್ಮ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪವರ್ ಸ್ಟಾರ್ ಅಭಿಮಾನಿಗಳು ಪುಟ್ಟ ಕಂದಮ್ಮನನ್ನು ಮೆಚ್ಚಿಕೊಂಡಿದ್ದಾರೆ..

ಪುಟ್ಟ ಕಂದಮ್ಮನ ಜತೆ 'ಬುಟ್ಟ ಬೊಮ್ಮ' ಹಾಡಿಗೆ ಹೆಜ್ಜೆ ಹಾಕಿದ ಪುನೀತ್‌ ವಿಡಿಯೋ ವೈರಲ್!

ಪುನೀತ್ ರಾಜ್‌ಕುಮಾರ್ ಅಭಿನಯದ 'ಮೈತ್ರಿ' ಸಿನಿಮಾ ನಿರ್ದೇಶಕ ಗಿರಿರಾಜ್‌ ನಾಲ್ಕು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ಈಗ ಶೇರ್ ಮಾಡಿಕೊಂಡಿದ್ದಾರೆ. 'ನಾಲ್ಕು ವರ್ಷದ ಹಿಂದೆ ಅಪ್ಪು ಸರ್ ನ ಭೇಟಿಯಾಗಲು ಹೋಗಿದ್ವಿ. ಅಲ್ಲಿದ್ದ ಫೋಟೊ ತೋರಿಸಿ ಇವರು ಯಾರು ಹೇಳು ಅಂತ ಕೇಳಿದಾಗ ಇವನಿಗೇನನಿಸ್ತೋ  ಸುಮ್ಮನೆ ಹೋಗಿ ಮುತ್ತು ಕೊಡಲು ಶುರು ಮಾಡಿದ. ಮಕ್ಕಳು ದೇವರು. ದೇವರೂ ಒಂದು ಮಗುವಾದ ಘಳಿಗೆ.' ಎಂದು ಬರೆದುಕೊಂಡಿದ್ದಾರೆ.

 

ಅದಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಸೆಳೆದದ್ದು ಆ ಬ್ಲಾಕ್‌ ಆಂಡ್ ವೈಟ್ ಫೋಟೋ. ಚಿಕ್ಕ ವಯಸ್ಸಿನಲ್ಲಿ ಪುನೀತ್‌ ರಾಜ್‌ಕುಮಾರ್ ಅಣ್ಣಾವ್ರ ಮಡಿಲಲ್ಲಿ ಕುಳಿತಿದ್ದಾರೆ. ಅದು ಪುನೀತ್‌ ಹೌದೋ ಅಲ್ವೋ ಎಂದು ತಿಳಿಯದೆ ಮಗು ಆ ಫೋಟೋಗೆ ಮುತ್ತಿಟ್ಟಿದ್ದು ಎಲ್ಲರಿಗೂ ವಿಶೇಷವೆನಿಸಿದೆ. 

ಇತ್ತೀಚಿಗೆ ಗಿರಿರಾಜ್‌ ಅವರ ಪುತ್ರ ಕಬೀರ್‌ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಈ ವೇಳೆ ಮನೆಯಲ್ಲಿಯೇ ತಯಾರಿಸಿದ ಕಾರ್‌ ಕೇಕ್‌ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Giriraj BM (@girirajbm) on Jul 9, 2020 at 10:01pm PDT