ಪುಟ್ಟ ಕಂದಮ್ಮನ ಜತೆ 'ಬುಟ್ಟ ಬೊಮ್ಮ' ಹಾಡಿಗೆ ಹೆಜ್ಜೆ ಹಾಕಿದ ಪುನೀತ್ ವಿಡಿಯೋ ವೈರಲ್!
ಪವರ್ ಸ್ಟಾರ್ ಕ್ರೇಜಿ ಲಿಟಲ್ ಫ್ಯಾನ್ ಜೊತೆ ಅಲ್ಲು ಅರ್ಜುನ್ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್, ಹೇಗಿದೆ ನೀವೂ ನೋಡಿದ್ರಾ?
ಸ್ಯಾಂಡಲ್‌ವುಡ್ ಯುವರತ್ನ ಪುನೀತ್ ರಾಜ್‌ಕುಮಾರ್ ಆನ್ ಸ್ಕ್ರೀನ್ ಮಾತ್ರವಲ್ಲದೆ ಆಫ್ ಸ್ಕ್ರೀನಲ್ಲೂ ಸಿಕ್ಕಾಪಟ್ಟೆ ಫ್ರೆಂಡ್ಲಿ ಹಾಗೂ ಫ್ಯಾಮಿಲಿ ಮ್ಯಾನ್. ಅಭಿಮಾನಿಗಳೇ ದೇವರು ಎಂಬ ತಂದೆ ಮಾತುಗಳನ್ನು ಚಾಚು ತಪ್ಪದೆ ಪಾಲಿಸುತ್ತಾರೆ. ತಮ್ಮ ಬ್ಯುಸಿ ಶೆಡ್ಯೂಲ್‌ನಲ್ಲಿಯೂ ಅಭಿಮಾನಿಗಳಿಗೋಸ್ಕರ ಟೈಮ್ ಮಾಡಿಕೊಳ್ಳುತ್ತಾರೆ, ಚಿತ್ರೀಕರಣ ವೇಳೆ ಗಂಟೆಗಟ್ಟಲೆ ನಿಂತು ಕಾಯುವ ಪ್ರತಿಯೊಬ್ಬ ಅಭಿಮಾನಿಯನ್ನು ಮಾತನಾಡಿಸುತ್ತಾರೆ. ನೆಚ್ಚಿನ ನಟನನ್ನು ನೋಡಲು ಮನೆ ಬಾಗಿಲಿಗೆ ಬಂದರೇ ತಪ್ಪದೆ ಊಟ ಉಪಚಾರ ಮಾಡುತ್ತಾರೆ.
ಕಷ್ಟ ಕಷ್ಟ! ಹೀಗೆಲ್ಲಾ ವರ್ಕೌಟ್ ಮಾಡೋದು ಸುಮ್ಮನೇನಾ?
ಏಜ್ ಲಿಮಿಟ್ ಇಲ್ಲದ ಆಭಿಮಾನಿ ನಳಗವನ್ನು ಹೊಂದಿರುವ ಫ್ಯಾಮಿಲಿ ಪ್ರೇಕ್ಷಕರ ನೆಚ್ಚಿನ ಹೀರೋ ಪುನೀತ್ ಇತ್ತೀಚಿಗೆ ಪುಟ್ಟ ಕಂದಮ್ಮ ಜೊತೆ ಡ್ಯಾನ್ಸ್ ಮಾಡಿರುವ ವಿಡಿಯೋ ತುಂಬಾನೇ ವೈರಲ್ ಆಗಿದೆ.
ಲಾಕ್‌ಡೌನ್ ವೇಳೆ ಮನೆಯಲ್ಲಿಯೇ ಫ್ಯಾಮಿಲಿ ಜೊತೆ ಕಾಲ ಕಳೆದ, ವರ್ಕೌಟ್ ಮಾಡುತ್ತಿದ್ದ ಪುನೀತ್‌ರಾಜ್‌ಕುಮಾರ್ ಸಡಿಲಿಕೆ ನಂತರ ಮಲೆನಾಡಿನ ಕಡೆ ಪ್ರಯಣ ಮಾಡಿದ್ದಾರೆ. ಈ ಸಮಯದಲ್ಲಿ ತಮಿಳು ಭಾಷೆ ಮಾತನಾಡುವ ಕುಟುಂಬವೊಂದನ್ನು ಭೇಟಿ ಮಾಡಿದ್ದಾರೆ, ಅಲ್ಲಿದ ಪುಟ್ಟ ಅಭಿಮಾನಿ ಪುನೀತ್ ರಾಜ್‌ಕುಮಾರ್ ಅವರ ಜೊತೆ 'ಬೊಟ್ಟ ಬೊಮ್ಮ' ಹಾಡಿಕೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದೆ.
ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ಅಲಾ ವೈಕುಂಟಪುರಮುಲೋ' ಸಿನಿಮಾದ 'ಬೊಟ್ಟ ಬೊಮ್ಮ' ಹಾಡಿನ ಐಕಾನಿಕ್ ಸ್ಟೆಪ್ ಮಾಡುತ್ತಿರುವ ಅಪ್ಪು ವಿಡಿಯೋ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಅಭಿಮಾನಿಗಳಿಗೆ ಕನ್ನಡ ಬಾರದು ಎಂದು ತಿಳಿದರೂ ಅವರ ಭಾಷೆ ಹಾಡನ್ನೇ ಆಯ್ಕೆ ಮಾಡಿಕೊಂಡು ಹಾಡಿ ಹೆಜ್ಜೆ ಹಾಕಿರುವುದು ಅವರ ದೊಡ್ಡ ಗುಣ ಎಂದು ಅಭಿಮಾನಿಗಳು ಟ್ಟೀಟ್‌ಗೆ ಕಾಮೆಂಟ್ ಮಾಡಿದ್ದಾರೆ.