ನಿರ್ದೇಶಕ ಎ ಟಿ ರಘು ಹೆಸರು ಗೊತ್ತಿಲ್ಲದವರು ಇಲ್ಲ. ಹತ್ತಾರು ಆ್ಯಕ್ಷನ್ ಚಿತ್ರಗಳನ್ನು ನೀಡಿದವರು. ಅಂಬರೀಶ್ ಅವರು ಎಲ್ಲೇ ಹೋದರು ‘ಮಂಡ್ಯದ ಗಂಡು’ ಎನ್ನುತ್ತಾರೆ. ಆ ಬಿರುದು ಬಂದಿದ್ದು ಇದೇ ಎಟಿ ರಘು ನಿರ್ದೇಶನದ ಸಿನಿಮಾ ಮೂಲಕ. ಈ ಚಿತ್ರದ ಟೈಟಲ್ ಸಾಂಗ್ ಈಗಲೂ ಸಿಕ್ಕಾಪಟ್ಟೆಫೇಮಸ್. ಆದರೆ, ಈ ಹಿರಿಯ ನಿರ್ದೇಶಕನ ಸ್ಥಿತಿ ಈಗ ಆ ಶತ್ರುವಿಗೂ ಬೇಡ ಎನಿಸಿದೆ.
ವಯಸ್ಸು 70 ದಾಟಿದೆ. ಕೈಯಲ್ಲಿ ಬಿಡಿಗಾಸು ಇಲ್ಲ. ನಿತ್ಯ ಜೀವನ ಮಾಡುವುದೇ ಕಷ್ಟವಾಗಿದೆ. ಜತೆಗೆ ಕಿಡ್ನಿ ಫೇಲ್ಯೂರ್, ಹೃದಯ ಚಿಕಿತ್ಸೆ, ಎರಡು ಕಾಲು ಹಾಗೂ ಕಣ್ಣುಗಳ ಆಪರೇಷನ್ ಆಗಿ ಅನಾರೋಗ್ಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ವೀಲ್ ಚೇರ್‌ನಲ್ಲೇ ಜೀವನ...
ನಿರ್ಮಾಪಕರು ಸ್ಟಾರ್‌ಗಳ ಹಿಂದೆ ಹೋಗುವುದು ಬಿಡಬೇಕು; ರವಿಚಂದ್ರನ್ ಹೇಳಿದ 6 ನೇರ ಮಾತುಗಳು
- ಇದು ಹಿರಿಯ ನಿರ್ದೇಶಕ ಎ ಟಿ ರಘು ಅವರ ಸದ್ಯದ ಸ್ಥಿತಿ. ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೇ 27 ಚಿತ್ರಗಳನ್ನು ನಿರ್ದೇಶನ ಮಾಡಿದವರು. ಹಿಂದಿಯಲ್ಲಿ ರಜನಿಕಾಂತ್ ಅವರಿಗೆ ‘ಮೇರಿ ಅದಾಲತ್’ ಸಿನಿಮಾ ಮಾಡಿದವರು. ಈಗ ಅನಾರೋಗ್ಯಕ್ಕೆ ತುತ್ತಾಗಿ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಚಿತ್ರರಂಗ ಹಾಗೂ ಸರ್ಕಾರ ಒಂದಿಷ್ಟುಆರ್ಥಿಕ ನೆರವು ನೀಡಿದ್ದರೂ ಅದು ಎಟಿ ರಘು ಅವರ ಆರೋಗ್ಯ ಸುಧಾರಣೆಗೆ ಸಾಲುತ್ತಿಲ್ಲ. ಹೀಗಾಗಿ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ರಘು ಅವರ ಕೈ ಹಿಡಿಯುವ ಅಗತ್ಯ ಇದೆ ಎಂಬುದು ಅವರ ಆಪ್ತರ ಮಾತು.

ಸದ್ಯಕ್ಕೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಎ ಟಿ ರಘು ಅವರಿಗೆ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕಿದೆ. ಹೀಗಾಗಿ ಅವರಿಗೆ ಆರ್ಥಿಕ ನೆರವಿನ ಅಗತ್ಯವಿದೆ ಎನ್ನಲಾಗಿದ್ದು, ಚಿತ್ರೋದ್ಯಮದ ಗಣ್ಯರು ಹಾಗೂ ಸರ್ಕಾರ ಅವರ ಕೈ ಹಿಡಿಯಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನಿರಂಜನ್ ಸುಧೀಂದ್ರ ನಟನೆಯ 'ಸೂಪರ್‌ಸ್ಟಾರ್' ಮುಹೂರ್ತ;ಚಿತ್ರದಲ್ಲಿ ಮೂಗೂರು ಸುಂದರಂ!
ನೆರವು ನೀಡಲು ಆಸಕ್ತರು: ಎಟಿ ರಘು, ಅಕೌಂಟ್ ನಂ.144010031268, ಐಎಫ್‌ಎಸ್‌ಸಿ ಕೋಡ್: ಕೆಕೆಬಿಕೆ0008272, ಕೋಟಕ್ ಮಹೇಂದ್ರ ಬ್ಯಾಂಕ್
