ಈ ಚಿತ್ರದಲ್ಲಿ ಖ್ಯಾತ ನೃತ್ಯ ನಿರ್ದೇಶಕ ಮೂಗೂರು ಸುಂದರಂ ಡ್ಯಾನ್ಸರ್‌ ಪಾತ್ರ ಮಾಡುತ್ತಿದ್ದಾರೆ. ಅವರನ್ನು ಈ ಚಿತ್ರಕ್ಕೆ ಕರೆತರಲು ನಾಲ್ಕು ತಿಂಗಳು ಕಾಯಬೇಕಾಯಿತಂತೆ. ಕೊನೆಗೂ ಕತೆ ಒಪ್ಪಿಕೊಂಡು ಈ ಚಿತ್ರದಲ್ಲಿ ನಟಿಸಲು ಬಂದಿದ್ದಾರೆ ಎಂಬುದು ನಿರ್ದೇಶಕರು ಕೊಡುವ ವಿವರಣೆ.

ಈ ಚಿತ್ರದ ನಿರ್ದೇಶಕ ರಮೇಶ್‌ ವೆಂಕಟೇಶ್‌ ಬಾಬು. ಚಿತ್ರದ ನಿರ್ಮಾಪಕ ಮೈಲಾರಿ. ‘ಕಳೆದ ಎರಡು ವರ್ಷಗಳಿಂದ ಈ ಸಿನಿಮಾ ಬಗ್ಗೆ ಇಡೀ ತಂಡ ತಲೆ ಕೆಡಿಸಿಕೊಂಡಿದೆ. ನಿರ್ದೇಶಕರು, ನಿರ್ಮಾಪಕರು, ಹೀರೋ ಶಕ್ತಿ ಮೀರಿ ಶ್ರಮ ಹಾಕುತ್ತಿದ್ದಾರೆ. ನಿರಂಜನ್‌ ಕೂಡ ಎಲ್ಲ ರೀತಿಯ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ಈ ಚಿತ್ರದಲ್ಲಿ ನಟಿಸಲು 87ರ ಪ್ರಾಯದ ಮೂಗೂರು ಸುಂದರಂ ಬಂದಿರುವುದು ಖುಷಿ ಆಗುತ್ತಿದೆ’ ಎಂದು ಹೇಳುವ ಚಿತ್ರತಂಡಕ್ಕೆ ಶುಭ ಕೋರಿದ್ದು ನಟ ಉಪೇಂದ್ರ. ಇನ್ನೂ ‘ಸೂಪರ್‌ಸ್ಟಾರ್‌’ ಚಿತ್ರಕ್ಕೆ ಉಪೇಂದ್ರ ಅವರ ಇಡೀ ಕುಟುಂಬ ಬೆಂಬಲವಾಗಿ ನಿಂತಿದೆ. ನಟರಾದ ಶಿವರಾಜ್‌ಕುಮಾರ್‌, ಯಶ್‌, ಶ್ರೀಮುರಳಿ, ಪ್ರೇಮ್‌ ಬೆಂಬಲ ಇದೆ. ಹೀಗಾಗಿ ಸಿನಿಮಾ ಅದ್ದೂರಿಯಾಗಿ ನಿರ್ಮಾಣ ಆಗಲಿದೆ ಎಂಬುದು ನಿರ್ಮಾಪಕರ ಮಾತು.

ಸ್ಯಾಂಡಲ್‌ವುಡ್‌ಗೆ ಉಪ್ಪಿ ಮನೆಯಿಂದ ಹೊಸ ನಾಯಕನ ಎಂಟ್ರಿ; ಹೀಗಿತ್ತು ಮುಹೂರ್ತ! 

ನಟ ನಿರಂಜನ್‌, ‘ನನಗೆ ಸಿನಿಮಾವೊಂದೇ ಗೊತ್ತಿರುವುದು. ಇದರಲ್ಲಿಯೇ ಏನಾದರು ಮಾಡಬೇಕೆಂಬ ತುಡಿತ ಇದೆ. ತುಂಬಾ ವರ್ಷಗಳಿಂದ ಒಳ್ಳೇ ಸ್ಕಿ್ರಪ್ಟ್‌ ಸಲುವಾಗಿ ಕಾಯುತ್ತಿದ್ದೆ. ಅದು ಈ ಚಿತ್ರದ ಮೂಲಕ ಸಿಕ್ಕಿದೆ.. ಡಾನ್ಸಿಂಗ್‌ ಸಿನಿಮಾ ಆಗಿರುವುದರಿಂದ ನನಗೂ ಡಾನ್ಸ್‌ ಇಷ್ಟ. ಒಂದೊಳ್ಳೆ ಸಂದೇಶ ಕೂಡ ಸಹ ಇದರಲ್ಲಿದೆ’ ಎಂದರು.