ಹೊಸ ವರ್ಷ ಪಾರ್ಟಿ ಮಾಡೋಲ್ಲ, ನನ್ನ ಲೈಫಲ್ಲಿ ಅದೊಂದು ಮಿಸ್ಸಿಂಗ್: Dhruva Sarja

ಅಣ್ಣನಿಲ್ಲದ ಹೊಸ ವರ್ಷ ಹೇಗಿದೆ? ಧ್ರುವ ಏನೆಲ್ಲಾ ಅಡುಗೆ ಮಾಡುತ್ತಾರೆಂದು ಮಾತನಾಡಿದ್ದಾರೆ. 
 

Kannada Dhruva Sarja talks about New year 2022 film project plans vcs

ಸ್ಯಾಂಡಲ್‌ವುಡ್‌ (Sandalwood) ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ತಮ್ಮ ಹೊಸ ಸಿನಿ ಪ್ರಾಜೆಕ್ಟ್‌ಗೆಂದು ವರ್ಕೌಟ್ ಶುರು ಮಾಡಿದ್ದಾರೆ. ಎರಡು ಮೂರು ವರ್ಷಕ್ಕೆ ಒಂದು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದ ನಟ ಈಗ ವರ್ಷಕ್ಕೆ ಎರಡು ಸಿನಿಮಾ ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಮಾರ್ಟಿನ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ಧ್ರುವ ಮಾರ್ಚ್ ನಂತರ ಜೋಗಿ ಪ್ರೇಮ್‌ ಸಿನಿಮಾ ಚಿತ್ರೀಕರಣ ಆರಂಭಿಸಲಿದ್ದಾರೆ. 

ಪ್ರತಿ ಭಾನುವಾರ (SundaY)  4 ರಿಂದ 5 ಗಂಟೆಗಳ ಸಮಯವನ್ನು ನಟ ಧ್ರುವ ಸರ್ಜಾ ಅಭಿಮಾನಿಗಳಿಗೆಂದು ಮೀಸಲಿಡುತ್ತಿದ್ದರು. ಕೊರೋನಾ ಹೆಚ್ಚಾಗುತ್ತಿದೆ ಪ್ರೋಟೋಕಾಲ್‌ ಎಂದು ಸ್ಟಾಪ್ ಮಾಡಿದ್ದರು. ಮಾಸ್ಕ್ ಮತ್ತು ಸ್ಯಾನಿಟೈಜರ್ ಬಳಸಿಕೊಂಡು ಜನರು ಓಡಾಡುತ್ತಿರುವಾಗ ಯಾಕೆ ಭೇಟಿ ಆಗಬಾರದು ಎಂದು ಹಲವು ತಿಂಗಳುಗಳ ನಂತರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಧ್ರುವ ಮಾಡಿರುವ ಬಿರಿಯಾನಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

Kannada Dhruva Sarja talks about New year 2022 film project plans vcs 

ಧ್ರುವ ಬಹುನಿರೀಕ್ಷಿತ ಮಾರ್ಟಿನ್ (Martin) ಸಿನಿಮಾ 45-50% ಚಿತ್ರೀಕರಣ ಮುಗಿಸಿದೆ. 'ನನ್ನ ಹೆಂಡತಿ (Wife Prerana) ಬಾಳೆ ಹುನ್ನೂರಿನವರು. ಮೊದಲ ಬಾರಿ ಅವರ ಊರಿಗೆ ಹೋಗಿದ್ವಿ . ನಾನು ನಮ್ಮ ಹಳ್ಳಿಗೆ ಹೋದಾಗ ಇದೆಲ್ಲಾ ಮಾಡ್ತಿದ್ದೆ. ಅದನ್ನ ವಿಡಿಯೋ ಮಾಡಿದ್ದಾರೆ ಅಷ್ಟೆ. ಇದು ಡಿಫರೆಂಟ್ ಅನುಭವ ಅಂತ ಹೇಳುವುದಕ್ಕಿಂತ ಮುಂಚೆನೇ ಈ ಅನುಭವ ಇತ್ತು ನನಗೆ ಆದರೆ ವಿಡಿಯೋ ಮಾಡಿದ ಮೇಲೆ ವೈರಲ್ ಆಯ್ತು. ಬಿರಿಯಾನಿ ಚೆನ್ನಾಗಿತ್ತು. ಸತ್ಯವಾಗ್ಲೂ ನಾನು ಏನೂ ಮಾಡಿಲ್ಲ ಪಾತ್ರೆ ಇಟ್ಟು ಮಾಡ್ತಿದ್ದವರು ಬೇರೆ ಅವರು ನಾನು ಸುಮ್ಮನೆ ಹಿಂಗೆ ಮಾಡ್ತಿದ್ದೆ ಅಷ್ಟೆ. ಬಿರಿಯಾನಿ (Biryani) ಎಲ್ಲಾ ನಾನು ಮಾಡಿಲ್ಲ. ನಾನು ಅಡುಗೆ ಮಾಡಿರುವುದು ಅಂದ್ರೆ ಚಿತ್ರಾನ್ನ ಅಷ್ಟೆ' ಎಂದು ಧ್ರುವ ಸರ್ಜಾ ಹೇಳಿದ್ದಾರೆ. 

Dhruva Sarja: ಚೇಸಿಂಗ್ ದೃಶ್ಯದಲ್ಲಿ ಸಖತ್ ಸ್ಟಂಟ್ ಮಾಡಿದ ಆಕ್ಷನ್ ಪ್ರಿನ್ಸ್!

'ಪ್ರತಿ ಭಾನುವಾರ ನಾನು ಅವರನ್ನು ಭೇಟಿ ಮಾಡುವೆ. ಅವರಿಂದಲೇ ಅಲ್ವಾ ನಾವು. ಒಂದುವರೆ ವರ್ಷ ಆಗಿದ್ದು ಅವರನ್ನು ಭೇಟಿ ಮಾಡಿ. ನಾವು ಕಲಾವಿದರು ಟಿವಿಯಲ್ಲಿ ಮಾತನಾಡುವುದಕ್ಕೆ ಶುರು ಮಾಡಿದ್ದೀವಿ. ಅವರೇ ಮೀಟ್ ಮಾಡೋಕೆ ರೆಡಿ ಇದ್ದಾರೆ ಅಂದ್ಮೇಲೆ ನಾನು ಯಾಕೆ ಭೇಟಿ ಮಾಡಬಾರದು ಅಂತ ಅಂದುಕೊಂಡೆ. ಲವ್ ಯು ರಚ್ಚು (Love You Racchu) ಸಿನಿಮಾ ಸಮಯದಲ್ಲಿ ಅಭಿಮಾನಿಗಳು ಮಾತು ಕೇಳಿ ಖುಷಿ ಆಯ್ತು. ಪದಗಳಲ್ಲಿ ವರ್ಣಿಸಲು ಆಗಲ್ಲ' ಎಂದು ಧ್ರುವ ಮಾತನಾಡಿದ್ದಾರೆ. 

Dhruva Sarja Cooking Video: ಸೌದೆ ಒಲೆಯಲ್ಲಿ ಬಿರಿಯಾನಿ ಮಾಡಿದ Action Prince!

'ನನಗೆ ಮರೆಯಲಾಗದ ಹೊಸ ವರ್ಷ ಅಂದ್ರೆ ನಾನು ಅಣ್ಣ ಮತ್ತು ಅಂಕಲ್ (Arjun Sarja) ಭೇಟಿ ಆಗುವುದು. ಪ್ರತಿ ವರ್ಷ ಭೇಟಿ ಆಗ್ತಿದ್ದೆ ಅದು ಕಳೆದ ವರ್ಷ ಮತ್ತು ಈ ವರ್ಷ ಮಿಸ್ಸಿಂಗ್.  ಅದು ಬಿಟ್ಟರೆ ನಾನು ಯಾವತ್ತೂ ಹೊಸ ವರ್ಷ ಆಚರಣೆ ಮಾಡಿಲ್ಲ. ಫ್ಯಾಮಿಲಿ ಜೊತೆ ಮನೆಯಲ್ಲಿಯೇ ಇರುತ್ತೇನ.ಈ ವರ್ಷ ಏನ್ ಮಾಡ್ಬೇಕು ಅಂತ ಪ್ಲಾನ್ ಇದೆ ಆದ್ರೆ ಅದಕ್ಕೆ resloution ಅಂತ ಟ್ಯಾಗ್ ಕೊಡೋದು ಬೇಡ.  ಈಗ ಜಬಾವ್ದಾರಿ ಹೆಚ್ಚಾಗಿದೆ ಹಾಗಾಗಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ಬೇಕು. ಮಾರ್ಚ್ ಸಮಯದಲ್ಲಿ ಮಾರ್ಟಿನ್ ಸಿನಿಮಾ ಮುಗಿಯುತ್ತೆ ಅದು ಆದ್ಮೇಲೆ ನಾನು ಜೋಗಿ ಸರ್ ಜೊತೆ ಸಿನಿಮಾ ಶುರು ಮಾಡಬೇಕು. ಒಟ್ಟಿನಲ್ಲಿ ಮುಂದಿನ ವರ್ಷ ಎರಡು ಸಿನಿಮಾ ಬರಲಿದೆ. ಈಗ ವರ್ಕೌಟ್ ಎಲ್ಲಾ ಶುರು ಮಾಡಿದ್ದೀನಿ ನೋಡೋಣ' ಎಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Latest Videos
Follow Us:
Download App:
  • android
  • ios