ಆತ್ಮೀಯರೊಂದಿಗೆ ವಿಶೇಷ ಔತಣ ಕೂಟದಲ್ಲಿ ಭಾಗಿಯಾಗಿದ್ದ ದರ್ಶನ್ ಫೋಟೋ ಮತ್ತು ವಿಡಿಯೋ ವೈರಲ್. ಅಷ್ಟಕ್ಕೂ ದರ್ಶನ್‌ ಜೊತೆ ಇರುವ ಆಕೆ ಯಾರೆಂಬ ಕುತೂಹಲ ಈಗ ಅಭಿಮಾನಿಗಳಲ್ಲಿ ಮೂಡಿದೆ.  

ಸ್ಯಾಂಡಲ್‌ವುಡ್‌ ಒಡೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರಳತೆ ಹಾಗೂ ಮಾನವೀಯತೆ ಗುಣಗಳಿಗೆ ಅಭಿಮಾನಿಗಳು ಮನಸೋತಿದ್ದಾರೆ. ಬ್ಯುಸಿ ಲೈಫಲ್ಲಿ ಬಿಡುವು ಸಿಕ್ಕಾಗಲೆಲ್ಲಾ ಆತ್ಮೀಯರ ಹಾಗೂ ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆದು ಆನಂದಿಸುತ್ತಾರೆ. ಹೀಗೆ ಅಪ್ತರೊಬ್ಬರ ಮನೆಯಲ್ಲಿ ಬರಿಯಾನಿ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ದರ್ಶನ್ ಅವರಿಗೆ ಇಷ್ಟೊಂದು ಆಪ್ತರಾಗಿರುವ ಇವರು ಯಾರು ಗೊತ್ತಾ ? 

'ರಾಜವೀರ ಮದಕರಿ ನಾಯಕ'ನ ಚಿತ್ರಕ್ಕೆ ಡಿ-ಬಾಸ್ ವರ್ಕೌಟ್‌ ಶುರು!

ಡಿ-ಬಾಸ್‌ ಚಿತ್ರರಂಗದಲ್ಲಿ ಎಷ್ಟು ಫೇಮಸ್ಸೋ ಅವರ ಕುಟುಂಬವರು ಅಷ್ಟೇ ಫೇಮಸ್‌. ಅಮ್ಮ, ಅಕ್ಕ, ಅಣ್ಣ, ಪತ್ನಿ ಹಾಗೂ ಅವರ ಮಕ್ಕಳು ಎಲ್ಲರೂ ಅಭಿಮಾನಿಗಳಿಗೆ ಚಿರಪರಿಚಿತರೆ ಆದರೆ ಈಗ ವೈರಲ್ ಆಗಿರುವ ಪೋಟೋದಲ್ಲಿ ಇರುವವರು ಯಾರೆಂದು ಮಾತ್ರ ಯಾರಿಗೂ ತಿಳಿದಿಲ್ಲ ಆದರೆ ಕೆಲವೊಂದು ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ದರ್ಶನ್ ವೀಕೆಂಡ್‌ನಲ್ಲಿ ನಿರ್ಮಾಪಕ ರಮೇಶ್‌ ಮಗಳ ಕುಟುಂಬದವರ ಜೊತೆ ಸಮಯ ಕಳೆದಿದ್ದಾರೆ ಎನ್ನಲಾಗಿದೆ.

ಹೌದು! ಕಾಮಿಡಿ ಕಿಂಗ್ ಶರಣ್ ಮತ್ತು ಶ್ರುತಿ ಹರಿಹರನ್ ನಟನೆಯ ಸಿನಿಮಾ 'ಜೈ ಮಾರುತಿ 800' ನಿರ್ಮಾಪಕ ರಮೇಶ್‌ ಅವರ ಪುತ್ರಿ ಮನೆಗೆ ದರ್ಶನ್ ಭೇಟಿ ನೀಡಿ ಸಮಯ ಕಳೆದಿದ್ದಾರೆ. ನಿರ್ಮಾಪಕ ರಮೇಶ್ ಹಾಗೂ ದರ್ಶನ್‌ ಬಹಳ ವರ್ಷಗಳಿಂದ ಆತ್ಮೀಯ ಸ್ನೇಹಿತರು. ಅವರ ಪುತ್ರಿಯನ್ನು ದರ್ಶನ್ ತಂಗಿಯಂತೆ ಭಾವಿಸುತ್ತಾರೆ. ದರ್ಶನ್‌ರನ್ನು ಆಕೆ ಅಣ್ಣನ ರೀತಿಯಲ್ಲಿ ಕಾಣುತ್ತಾರೆ.ರಮೇಶ್‌ ಅವರ ಅಳಿಯನೂ ಕೂಡ ಔತಣಕೂಟದಲ್ಲಿ ಭಾಗಿಯಾಗಿರುವುದನ್ನು ಫೋಟೋದಲ್ಲಿ ನೋಡಬಹುದು. 

ಮೈಸೂರು ಫಾರ್ಮ್‌ಹೌಸ್‌ನಲ್ಲಿ ಕಾಯಕ ಯೋಗಿಯಾದ ದಾಸ! 

ರಮೇಶ್‌ ಪುತ್ರಿ ಹಾಗೂ ಚೇತನ್‌ ಅವರಿಗೆ ಮುದ್ದಾದ ಮಗುವಿದ್ದು ದರ್ಶನ್‌ ತಮ್ಮ ಮಡಿಲಲ್ಲಿ ಕೂರಿಸಿಕೊಂಡು ತುತ್ತು ತಿನ್ನಿಸಿದ್ದಾರೆ. ಕೆಲ ದಿನಗಳ ಹಿಂದೆ ಚೇತನ್ ಮನೆಯಲ್ಲಿ ಸಿಂಪಲ್ ಶುಭ ಸಮಾರಂಭವೊಂದು ನಡೆದಿತ್ತು,ಅದರಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ ದರ್ಶನ್‌ ವೀಕೆಂಡ್‌ನಲ್ಲಿ ಊಟಕ್ಕೆ ಆಗಮಿಸಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ವೈರಲ್ ಆಗುತ್ತಿದೆ.

ಇನ್ನು ಲಾಕ್‌ಡೌನ್‌ ಪ್ರಾರಂಭವಾದ ದಿನದಿಂದಲೂ ವ್ಯವಸಾಯ ಹಾಗೂ ಪ್ರಾಣಿಗಳ ಆರೈಕೆಯಲ್ಲಿ ಬ್ಯುಸಿಯಾಗಿರುವ ದರ್ಶನ್‌ ಕೆಲ ದಿನಗಳ ಹಿಂದೆ ತಮ್ಮ ಕುದುರೆಗಳಿಗೆ ಕೂದಲು ಟ್ರಿಮಿಂಗ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದರು ಹಾಗೂ ತನ್ನ ಅಕ್ಕನ ಮಗನ ಜತೆ ಮೈಸೂರು ಫಾರ್ಮ್‌ಹೌಸ್‌ನಲ್ಲಿ ಕೆಲವೊಂದು ಕೆಲಸಗಳನ್ನು ಮಾಡುತ್ತಿರುವ ವಿಡಿಯೋ ಕೂಡ ಅಭಿಮಾನಿಗಳು ಶೇರ್ ಮಾಡಿದ್ದರು. ಚಿತ್ರೀಕರಣ ಪ್ರಾರಂಭಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ, ಸದ್ಯದಲ್ಲೇ ರಾಜವೀರ ಮದಕರಿ ನಾಯಕ ಸೆಟ್ಟೇರಲಿದೆ ಹಾಗೂ ದರ್ಶನ್ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರಮಂದಿರ ತೆರೆದ ತಕ್ಷಣವೇ 'ರಾಬರ್ಟ್' ರಿಲೀಸ್ ಮಾಡುತ್ತೇವೆ ಎಂದಿದೆ ಚಿತ್ರತಂಡ.

"