1972ರಲ್ಲಿ ಬಿಡುಗಡೆಯಾದ 'ನಾಗರಹಾವು' ಸಿನಿಮಾ ಕನ್ನಡ ಚಿತ್ರರಂಗದ ಮೈಲಿಗಲ್ಲು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರದಲ್ಲಿ ವಿಷ್ಣುವರ್ಧನ್ ರಾಮಾಚಾರಿ ಪಾತ್ರದಿಂದ ಮತ್ತು ಅಂಬರೀಶ್ ಜಲೀಲನ ಪಾತ್ರದಿಂದ ಪರಿಚಿತರಾದರು. ಈ ಚಿತ್ರದ ಕಲಾವಿದರ ಆಯ್ಕೆಯು ರೋಚಕವಾಗಿತ್ತು. ಇತ್ತೀಚೆಗೆ, ಚಿತ್ರತಂಡದ ಅಪರೂಪದ ಫೋಟೋ ದೊರೆತಿದ್ದು, ಅದರಲ್ಲಿ ಅನೇಕ ಕಲಾವಿದರಿದ್ದಾರೆ. ಈ ಸಿನಿಮಾ ಇಬ್ಬರು ನಟರನ್ನು ಸೂಪರ್ ಸ್ಟಾರ್‌ಗಳನ್ನಾಗಿ ಮಾಡಿತು.

ಕನ್ನಡ ಚಿತ್ರರಂಗದ ಪ್ರಖ್ಯಾತ ನಟರಾದ ವಿಷ್ಣುವರ್ಧನ್ ಹಾಗೂ ಅಂಬರೀಷ್ ನಟಿಸಿದ 'ನಾಗರಹಾವು' ಅಂದಕೂಡಲೇ ಹಲವರಿಗೆ ಹಲವು ನೆನಪುಗಳು ಒಟ್ಟೊಟ್ಟಿಗೇ ಬರುತ್ತವೆ. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಈ ಚಿತ್ರ 1972, ಡಿಸೆಂಬರ್​ 29ರಂದು ರಿಲೀಸ್ ಆಗಿತ್ತು. ಈ ಸಿನಿಮಾ ರಿಲೀಸ್ ಆಗಿ ಆಗಲೇ 53 ವರ್ಷಗಳಾಗಿವೆ. ಪುಟ್ಟಣ್ಣ ಕಣಗಾಲ್‌ ಅವರ ಈ ಮಾಸ್ಟರ್ ಪೀಸ್ ರಿಲೀಸ್ ಆಗಿ ಅರ್ಧ ಶತಮಾನವೇ ಕಳದರೂ, 'ರಾಮಾಚಾರಿ' ಪಾತ್ರ ಮಾತ್ರ ಜನಮಾನಸದಿಂದ ಮಾಸಿಲ್ಲ. ಹಾಗೆ ನೋಡಿದರೆ ಕನ್ನಡ ಚಿತ್ರರಂಗದ ಕ್ಲಾಸಿಕ್ ಚಿತ್ರಗಳಲ್ಲಿ ನಾಗರಹಾವು ಸಿನಿಮಾ ಬಹುಮುಖ್ಯವಾದುದು. ಈ ಚಿತ್ರದ ಕಲಾವಿದರ ಆಯ್ಕೆಯೂ ಅಷ್ಟೇ ರೋಚಕವಾಗಿತ್ತು. ಈ ಚಿತ್ರದ ಮೂಲಕವೇ ಇಬ್ಬರು ಸ್ಟಾರ್​​ಗಳು ಪರಿಚಯವೂ ಆಯಿತು. ಆ ಇಬ್ಬರ ಭವಿಷ್ಯವನ್ನ ಚಿತ್ರದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಆಗಲೇ ಹೇಳಿ ಬಿಟ್ಟಿದ್ದರು. ಅವರು ಹೇಳಿದಂತೆ, ಆ ಇಬ್ಬರು ಕಲಾವಿದರು ಸೂಪರ್ ಸ್ಟಾರ್​​ಗಳಾದರು. ಹಾಗೇ ನಾಗರಹಾವು ಸಿನಿಮಾವೂ ಕನ್ನಡ ಚಿತ್ರರಂಗದಲ್ಲಿ ಮೈಲುಗಲ್ಲು ಷ್ಟಿಸಿತು.

ಇಂಥ ಇತಿಹಾಸ ಸೃಷ್ಟಿಸಿದ ಚಿತ್ರದ ಟೀಮ್‌ನ ಬಹಳ ಅಪರೂಪದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ನಿಜಕ್ಕೂ ಸಿನಿಮಾ ವ್ಯಾಮೋಹಿಗಳಾಗಿದ್ದು, ಕ್ಲಾಸಿಕ್ ಸಿನಿಮಾ ಪ್ರಿಯರಾಗಿದ್ದರೆ ಈ ಫೋಟೋದಲ್ಲಿರುವವರನ್ನು ಗುರುತಿಸಿ. ಹಾಗೆ ನೋಡಿದರೆ ಈ ಸಿನಿಮಾದಲ್ಲಿ ವಿಷ್ಣು ದಾದ ಮತ್ತು ಅಂಬಿ ಸಾರ್ ನಟಿಸಿದುದರ ಹಿಂದೆಯೂ ಇಂಟರೆಸ್ಟಿಂಗ್ ಕಥೆಯೂ ಇದೆ. ನಿರ್ದೇಶಕ ಪುಟ್ಟಣ್ಣ ಅವರು ನಾಗರಹಾವು ಚಿತ್ರಕ್ಕೆ ಕಲಾವಿದರ ಆಯ್ಕೆಗೆ ಆಡಿಷನ್ ಮಾಡುತ್ತಿದ್ದರು. ಆ ಆಡಿಷನ್​ ನಲ್ಲಿ ವಿಷ್ಣು ಕೂಡ ರಾಮಾಚಾರಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದರು. ಅವರ ಅಭಿನಯ ನೋಡಿ ಪುಟ್ಟಣ್ಣ ಅವರನ್ನು ಈ ಪಾತ್ರಕ್ಕೆ ಸೇರಿಸಿಕೊಂಡರು. ಈ ಸಿನಿಮಾ ಮೂಲಕ ವಿಷ್ಣು ಸರ್ ರಾಮಾಚಾರಿಯಾಗಿಯೇ ಗುರುತಿಸಿಕೊಂಡರು.

ರಾತ್ರಿ 11 ಗಂಟೆ ಅಂಬರೀಶ್‌ ಅಂಕಲ್ ಕಾರನ್ನು ಸ್ಪೀಡಾಗಿ ಓಡುಸ್ಕೊಂಡು ಬರ್ತಿದ್ರು ನಾನು ನಿಂತು ನೋಡುತ್ತಿದ್ದೆ: ಧರ್ಮಾ ಕೀರ್ತಿರಾಜ್

ಇನ್ನೊಂದು ಜಲೀಲನ ಪಾತ್ರ. ಚಿತ್ರದಲ್ಲಿ ಜಲೀಲ ಪಾತ್ರ ಮಾಡೋ ಮೂಲಕ ಅಂಬರೀಶ್ ಅವರು ಎಲ್ಲರ ಹೃದಯ ಕದ್ದರು. ಚಿಕ್ಕ ಪಾತ್ರವಾದರೂ, ಅಂಬರೀಶ್ ಮೊದಲ ಚಿತ್ರದಲ್ಲಿಯೇ ಭಾರೀ ಮಿಂಚಿದ್ದರು. ಈ ಜಲೀಲನ ಪಾತ್ರಕ್ಕೆ ಅನೇಕ ಕಲಾವಿದರು ಟ್ರೈ ಮಾಡಿದ್ದರು. ಆದರೆ ಯಾರೂ ಆಯ್ಕೆ ಆಗಿರಲಿಲ್ಲ. ಗೆಳೆಯರ ಪ್ರೀತಿಯ ಒತ್ತಾಯಕ್ಕೆ ನಾಗರಹಾವು ಚಿತ್ರಕ್ಕೆ ಅಂಬರೀಶ್ ಆಡಿಷನ್ ಕೊಟ್ರು. ಆ ಕೂಡಲೇ ಅಂಬರೀಶ್ ಸ್ಟೈಲ್​ ನೋಡಿಯೇ ಪುಟ್ಟಣ್ಣ ಅವರು ನೀನೇ ನನ್ನ ಜಲೀಲ ಅಂತಲೇ ಹೇಳಿದ್ರು.

ಅಣ್ಣಾವ್ರು ಬೇರೆಯವ್ರ ಸಿನಿಮಾ ನೋಡ್ತಿದ್ರಾ?.. ಯಾರ ಸಿನಿಮಾನ ಯಾಕೆ ನೋಡ್ತಾ ಇದ್ರು? ಗುಟ್ಟು ರಟ್ಟಾಯ್ತು...!

ಸದ್ಯಕ್ಕೀಗ ಈ ಫೋಟೋದಲ್ಲಿರುವ ಒಂದಿಷ್ಟು ಕಲಾವಿದರನ್ನು(Artist) ನೀವು ಗುರುತಿಸಿರಬಹುದು. ಒಂದು ವೇಳೆ ಗೊತ್ತಾಗದಿದ್ದರೆ ಇಲ್ಲಿದೆ ಆ ವಿವರ. ಮುಂಭಾಗದಲ್ಲಿ ನಿರ್ಮಾಪಕ ಎನ್ ವೀರಸ್ವಾಮಿ ಹಾಗೂ ಪುಟ್ಟಣ್ಣ ಕಣಗಾಲ್, ಶಿವರಾಮ್ ಮೊದಲಾದವರು ಇದ್ದಾರೆ. ಇವರ ಹಿಂದೆ ನಿಂತಿರೋ ಕ್ಯೂಟ್ ಟಾಣಿ ರವಿಚಂದ್ರನ್. ಉಳಿದಂತೆ ಮೇಷ್ಟ್ರಾಗಿ ಮನೆ ಮಾತಾದ ಕೆ ಎಸ್ ಅಶ್ವತ್ಥ್‌, ಲೋಕನಾಥ್, ರಾಘವೇಂದ್ರ ರಾವ್, ಅಂಬರೀಶ್, ವಿಷ್ಣುವರ್ಧನ್, ಆರತಿ, ಲೀಲಾವತಿ, ಲಕ್ಷ್ಮೀದೇವಿ, ಶುಭಾ, ಧೀರೇಂದ್ರ ಗೋಪಾಲ್, ವಜ್ರಮುನಿ, ರಂಗ ಮೊದಲಾದವರಿದ್ದಾರೆ. ಇದರಲ್ಲಿ ವಿಷ್ಣುವರ್ಧನ್, ಅವರ ಸಹೋದರ, ಲೀಲಾವತಿ, ಲಕ್ಷ್ಮೀ ದೇವಿ ಮೊದಲಾದ ಕೆಲವರನ್ನು ಬಿಟ್ಟರೆ ಉಳಿದವರೆಲ್ಲ ಆಗಸದ ತಾರೆಯರಾಗಿದ್ದಾರೆ. ಆದರೂ ಅವರ ಕೆಲಸಗಳು ಅವರನ್ನು ಸಿನಿಪ್ರಿಯರ ಮನಸ್ಸಿಂದ ದೂರ ಮಾಡಿಲ್ಲ. ಈ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಬಂದ ವಿಷ್ಣುವರ್ಧನ್‌, ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಇತಿಹಾಸ (History) ನಿರ್ಮಿಸಿ ನಿರ್ಗಮಿಸಿದ್ದಾರೆ.