ಇಂಥ ಡಾ ರಾಜ್‌ಕುಮಾರ್ ಅವರನ್ನು ಕರ್ನಾಟಕದ ಸಿನಿಪ್ರೇಕ್ಷಕರು ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಯುತ್ತಾರೆ. ಅಣ್ಣಾವ್ರ ಚಿತ್ರಗಳನ್ನು ನೋಡುತ್ತ ತಾವು ಬೆಳೆದಿದ್ದಾಗಿ ಸ್ವತಃ ಕನ್ನಡದ ಇನ್ನೊಬ್ಬರು ಮೇರುನಟರಾದ ವಿಷ್ಣುವರ್ಧನ್ ಹೇಳಿಕೊಂಡಿದ್ದರು. ಅಂದಿನ ಪೀಳಿಗೆಯಲ್ಲಿ..
ಕನ್ನಡದ ಮೇರು ನಟ ಡಾ ರಾಜ್‌ಕುಮಾರ್ (Dr Rajkumar) ಬಗ್ಗೆ ಅದೆಷ್ಟು ಹೇಳಿದರೂ ಮುಗಿಯೋದಿಲ್ಲ. ಅವರು ಕನ್ನಡ ನೆಲ, ಜಲದ ವಿಷಯ ಬಂದಾಗ ಬೀದಿಗಿಳಿದು ಹೋರಾಟ ಮಾಡಿರೋದ್ರಿಂದ ಅವರನ್ನು ಕನ್ನಡದ ಆಸ್ತಿ ಎಂದೇ ಎಲ್ಲರೂ ಹೇಳುತ್ತಾರೆ. ಜೊತೆಗೆ, ತಮ್ಮ ಸಿನಿಮಾಗಳಲ್ಲಿ ಸಮಾಜಕ್ಕೆ ಅಗತ್ಯವಾಗಿ ಬೇಕಾದ ಮೌಲ್ಯವನ್ನು ಪ್ರತಿಪಾದಿಸುತ್ತಿದ್ದ ಕಾರಣಕ್ಕೆ ಅವರನ್ನು ಅದೆಷ್ಟೋ ಮಂದಿ ದೇವರಂತೆ ಪೂಜಿಸುತ್ತಾರೆ. ಕರ್ನಾಟಕ ರತ್ನ ಸೇರಿದಂತೆ ಅವರಿಗೆ ಬಹಳಷ್ಟು ಪ್ರಶಸ್ತಿಗಳು ಕೂಡ ಸಂದಿವೆ.
ಇಂಥ ಡಾ ರಾಜ್‌ಕುಮಾರ್ ಅವರನ್ನು ಕರ್ನಾಟಕದ ಸಿನಿಪ್ರೇಕ್ಷಕರು ಪ್ರೀತಿಯಿಂದ ಅಣ್ಣಾವ್ರು ಎಂದು ಕರೆಯುತ್ತಾರೆ. ಅಣ್ಣಾವ್ರ ಚಿತ್ರಗಳನ್ನು ನೋಡುತ್ತ ತಾವು ಬೆಳೆದಿದ್ದಾಗಿ ಸ್ವತಃ ಕನ್ನಡದ ಇನ್ನೊಬ್ಬರು ಮೇರುನಟರಾದ ವಿಷ್ಣುವರ್ಧನ್ ಹೇಳಿಕೊಂಡಿದ್ದರು. ಅಂದಿನ ಪೀಳಿಗೆಯಲ್ಲಿ ಡಾ ರಾಜ್‌ಕುಮಾರ್ ಅವರಿಗಿಂತ ಕಿರಿಯರೆಲ್ಲರೂ ಅಣ್ಣಾವ್ರ ಸಿನಿಮಾಗಳನ್ನು ನೋಡಿ ಬೆಳೆದವರೇ ಆಗಿದ್ದಾರೆ. ಹಾಗಂತ ಸ್ವತಃ ಅವರೇ ಅದೆಷ್ಟೋ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ.
ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್-ನಾಗೇಂದ್ರ; ನಟ ವಿಷ್ಣುವರ್ಧನ್!
ಹೌದು, ಡಾ ರಾಜ್‌ಕುಮಾರ್ ಚಿತ್ರಗಳನ್ನು ಕನ್ನಡದ ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ, ಕನ್ನಡದ ಕಿರಿಯ ನಟರೂ ಕೂಡ ನೋಡಿದ್ದಾರೆ, ನೋಡುತ್ತಾರೆ. ಆದರೆ, ಡಾ ರಾಜ್‌ಕುಮಾರ್ ಅವರು ಯಾವ ಚಿತ್ರಗಳನ್ನು, ಯಾರ ಚಿತ್ರಗಳನ್ನು ನೋಡುತ್ತಿದ್ದರು? ಈ ಪ್ರಶ್ನೆ ಖಂಡಿತ ಹಲವರನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.. ಅವರೇ ಒಮ್ಮೆ ಸ್ವತಃ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಯಾ ಮೂಲಕ ವೈರಲ್ ಆಗುತ್ತಿದೆ. ಹಾಗಿದ್ರೆ ಅದೇನು ಅಂತ ನೋಡಿ..
'ನಾನೂ ಕಲಾಭಿಮಾನಿ.. ಎಲ್ಲರೂ ನನ್ನ ಚಿತ್ರಗಳನ್ನು ನೋಡಿ ಖುಷಿ ಪಡ್ತಾರೆ... ಹಾಗೇ, ನಾನೂ ಕೂಡ ಬೇರೆಯವರ ಸಿನಿಮಾ ನೋಡಿ ಖುಷಿ ಪಡ್ತೀನಿ.. ಎಲ್ಲರೂ ಖುಷಿ ಪಡ್ತಾರೆ, ನಾನೂ ಖುಷಿ ಪಡೋದು ಬೇಡ್ವಾ?..' ಇದು ಡಾ ರಾಜ್‌ಕುಮಾರ್ ಮಾತು. ಹೌದು, ಡಾ ರಾಜ್‌ಕುಮಾರ್ ಕೂಡ ಬೇರೆಯವರ ಚಿತ್ರಗಳನ್ನು ನೋಡುತ್ತಿದ್ದರು. ಡಾ ವಿಷ್ಣುವರ್ಧನ್ ಸಿನಿಮಾಗಳನ್ನು ನೋಡಿ ಮೆಚ್ಚಿ ಆ ಬಗ್ಗೆ ಡಾ ರಾಜ್ ಹಲವಾರು ಬಾರಿ ಹೇಳಿದ್ದುಂಟು.. ವಿಷ್ಣು ಅವರ 'ಯಜಮಾನ' ಚಿತ್ರ ನೋಡಿ ಕಾಲ್ ಮಾಡಿ ಖುಷಿ ಹಂಚಿಕೊಂಡಿದ್ದರಂತೆ ಡಾ ರಾಜ್‌ಕುಮಾರ್.
'ದಿ ಡೆವಿಲ್' ಸೆಕೆಂಡ್ ಶೆಡ್ಯೂಲ್ ಶುರು, ಮುಂದಿನವಾರ ದರ್ಶನ್ ಶೂಟಿಂಗ್‌ನಲ್ಲಿ ಭಾಗಿ!
