ಕನ್ನಡದ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ಮಾಸ್ಟರ್ ಮಂಜುನಾಥ್ ಅವರು ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟರೊಡನೆ, ಸ್ಟಾರ್ ನಟರೊಡನೆ ನಟಿಸಿರುವ ಮಾಸ್ಟರ್ ಮಂಜುನಾಥ್ ಅವರು ಸೋಷಿಯಲ್ ಮೀಡಿಯಾ ಇಲ್ಲದ..

ಮಾಸ್ಟರ್ ಮಂಜುನಾಥ್ (Master Manjunath) ಹೆಸರು ಕನ್ನಡ ಚಿತ್ರರಂಗದಲ್ಲಿ ಕೇಳದವರು ಕಡಿಮೆ. ಅದರಲ್ಲೂ ಮೂವತ್ತು ವರ್ಷಗಳ ಹಿಂದಿದ್ದ ಜನರೇಶನ್‌ಗೆ ಈ ಮಾಸ್ಟರ್ ಮಂಜುನಾಥ್ ಎಂಬ ಬಾಲನಟ ತುಂಬಾ ಪರಿಚಿತ. ಕಾರಣ, ಅಂದು ಅವರು ಬಹಳಷ್ಟು ಸೆನ್ಸೇಷನ್ ಸೃಷ್ಟಿಸಿದ್ದರು. ಇಂದಿನ ಜನರೇಶನ್ ಸಿನಿಪ್ರೇಮಿಗಳೂ ಸಹ ಅವರ ಹಳೆಯ ಸಿನಿಮಾ ನೋಡಿ ಅವರನ್ನು ಬಲ್ಲರು. ಅಥವಾ ಕೆಲವರು ಅವರಿವರ ಮಾತನ್ನು ಕೇಳಿ ಕೂಡ ಮಾಸ್ಟರ್ ಮಂಜುನಾಥ್ ಬಗ್ಗೆ ತಿಳಿದಿದ್ದಾರೆ. 

ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ರಣಧೀರ' ಚಿತ್ರದ 'ಏನ್ ಹುಡ್ಗಿರೋ, ಇದ್ಯಾಕಿಂಗ್ ಆಡ್ತಾರೋ..ಲವ್ವು ಲವ್ವು ಲವ್ವು ಅಂತ ಕಣ್ಣೀರಿಡ್ತಾರೋ..' ಹಾಡನ್ನು ಆ ಕಾಲದಲ್ಲಿ ಕೇಳದವರೇ ಇಲ್ಲ. ಆಕಾಶವಾಣಿಯಲ್ಲಿ ಅದೇ ಹಾಡು ದಿನವೂ ಕೇಳಿಬರುತ್ತಿತ್ತು. ಅಂದು ಮಾಸ್ವರ್ ಮಂಜುನಾಥ್‌ ಅವರಿಗೆ ಬಹಳಷ್ಟು ಫ್ಯಾನ್ಸ್ ಕೂಡ ಇದ್ದರು. ಅಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ 'ರಣಧೀರ' ಚಿತ್ರದಲ್ಲೂ ಈ ಮಾಸ್ಟರ್ ಮಂಜುನಾಥ್ ಅವರು ಅಮೋಘ ಅಭಿನಯ ನೀಡಿದ್ದರು. 

ಮಾಸ್ಟರ್ ಮಂಜುನಾಥ್ ಚೆನ್ನೈನಲ್ಲಿ ಸಿಕ್ಕಾಗ ಡಾ ರಾಜ್‌ಕುಮಾರ್ ಮಾಡಿದ್ದೇನು? ಏನದು ಒನ್‌, ಟೂ, ತ್ರಿ...?!

ಕನ್ನಡದ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ನಟ ಮಾಸ್ಟರ್ ಮಂಜುನಾಥ್ ಅವರು ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟರೊಡನೆ, ಸ್ಟಾರ್ ನಟರೊಡನೆ ನಟಿಸಿರುವ ಮಾಸ್ಟರ್ ಮಂಜುನಾಥ್ ಅವರು ಸೋಷಿಯಲ್ ಮೀಡಿಯಾ ಇಲ್ಲದ ಕಾಲದಲ್ಲೂ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ನಟ-ನಿರ್ದೇಶಕ ಶಂಕರ್‌ ನಾಗ್ ಅವರು ಕನ್ನಡಕ್ಕೆ ಕೊಟ್ಟ ಅಮೋಘ ಪ್ರತಿಭೆ. ಇಂಥ ಮಾಸ್ಟರ್ ಮಂಜುನಾಥ್ ಅವರು ದೊಡ್ಮನೆ ಬ್ಯಾನರ್‌ನಲ್ಲಿ ನಟಿಸಿ ಆ ಕಾಲದಲ್ಲೇ ಸಾಧನೆ ಮಾಡಿದ್ದರು. ಅಷ್ಟೇ ಅಲ್ಲ, ಅವರಿಗೆ ಡಾ ರಾಜ್‌ಕುಮಾರ್ ಆಶೀರ್ವಾದ ಸಹ ಸಿಕ್ಕಿತ್ತು. ಈ ಬಗ್ಗೆ ಸ್ವತಃ ಮಾಸ್ಟರ್ ಮಂಜುನಾಥ್ ಅವರೇ ಹಲವು ಕಡೆ ಹೇಳಿಕೊಂಡಿದ್ದಾರೆ. 

'ಡಾ ರಾಜ್‌ಕುಮಾರ್ ಜೊತೆ ನನ್ನ ಒಡನಾಟ ತುಂಬಾ ಏನೂ ಇರಲಿಲ್ಲ. ನಾನು ಬಹುಶಃ ನಾಲ್ಕೈದು ಬಾರಿ ಅವರನ್ನು ಭೇಟಿ ಆಗಿದ್ದೆ. ನಾನು ಖುಷಿ ಪಡೋ ಒಂದು ಭೇಟಿ ಅಂದ್ರೆ ಅದು 'ಏನ್ ಹುಡ್ಗಿರೋ ಅದ್ಯಾಕಿಂಗ್ ಆಡ್ತಾರೋ.. ' ಹಾಡಿನ ರೆಕಾರ್ಡಿಂಗ್ ಸಮಯವದು. ಚೆನ್ನೈನಲ್ಲಿ ಆ ಹಾಡಿನ ರೆಕಾರ್ಡಿಂಗ್‌ಗಾಗಿ ಹಂಸಲೇಖಾ ಅವರು ಕರೆದುಕೊಂಡು ಹೋಗಿದ್ದರು. ನನ್ನ ಪುಣ್ಯ ಎಂಬಂತೆ, ಅದೇ ದಿನ ಡಾ ರಾಜ್‌ಕುಮಾರ್ ಅವರು ಅಯ್ಯಪ್ಪ ಸ್ವಾಮಿ ಸಾಂಗ್ಸ್ ರೆಕಾರ್ಡಿಂಗ್ ಮಾಡುತ್ತಿದ್ದರು.

ರಾಕಿಂಗ್ ಸ್ಟಾರ್ ಯಶ್ ಆಪ್ತಮಿತ್ರನ ಸಾವು.. ದಡ ಮುಟ್ಟುವ ಮೊದಲೇ ಮುಳಗಿಹೋದ ಅರ್ಜುನ್ ಕೃಷ್ಣ!

ಅವರು ಊಟಕ್ಕೆ ಹೋಗುವ ಸಮಯದಲ್ಲಿ ಮಾತನಾಡಿಸಿದೆ. ಹಾಗೂ ಅವರು ಕೇಳಿದ್ದಕ್ಕೆ ಹಾಡು ಹೇಳಲು ಬಂದಿರುವುದಾಗಿ ತಿಳಿಸಿದೆ. ಆಗ 'ತುಂಬಾ ಖುಷಿಯಾಯ್ತು' ಎಂದರು, ಜೊತೆಗೆ, ನನ್ನನ್ನೂ ಊಟಕ್ಕೆಕರೆದುಕೊಂಡು ಹೋದರು. ತಮಗೆ ಬಂದಿದ್ದ ಊಟವನ್ನು ಎಲ್ಲರಿಗೂ ಹಂಚಿದರು. ನಮಗೆ ಅದು ದೇವರ ಪ್ರಸಾದ ಎಂಬಂತೆ ಆಗಿತ್ತು. ಅದೇ ಸಮಯದಲ್ಲಿ 'ನೀನು ಈ ಮೊದಲು ಹಾಡಿಲ್ಲ ಅಲ್ವಾ?' ಎಂದ್ರು. ನಾನು ಇಲ್ಲ ಎನ್ನಲು 'ಅವರು ಒನ್‌, ಟೂ, ತ್ರಿ ಅಂತ ಹೇಳ್ತಾರೆ.. ನೀನು ಹಾಡಿಬಿಡು, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡ..

ಡಾ ರಾಜ್‌ಕುಮಾರ್ ಅವರು ಅಂದು ಇನೋಸೆಂಟ್‌ ಅಗಿ,ಮುದ್ದುಮುದ್ದಾಗಿ ನನಗೆ ಸಲಹೆ ಕೊಟ್ಟರು. ಆ ಹಾಡನ್ನು ನಾನು ಅದೆಷ್ಟೋ ಕೆಟ್ಟದಾಗಿ ಹಾಡಿದ್ದರೂ ಆ ಹಾಡು ಸೂಪರ್ ಹಿಟ್ ಆಗಿದ್ದು ಅವರ ಆಶೀರ್ವಾದ ಎಂದೇ ನನ್ನ ಭಾವನೆ. ಹಂಸಲೇಕಾ ಅವರ ಹಾಡು ಸೂಪರ್ ಹಿಟ್ ಎಂಬುದು ಒಂದು ವಿಷಯ, ಆದ್ರೆ ನಾನು ಹಾಡಿದ್ದು ಡಾ ರಾಜ್‌ಕುಮಾರ್ ಅವರ ಆಶೀರ್ವಾದದ ಬಲದಿಂದ ಎಂಬುದು ನನ್ನ ನಂಬಿಕೆ. ಆ ಸಮಯವನ್ನು, ಸಂದರ್ಭವನ್ನು ನಾನೆಂದಿಗೂ ಮರೆಯಲಾರೆ. 

ಅಣ್ಣಾವ್ರು ಬೇರೆಯವ್ರ ಸಿನಿಮಾ ನೋಡ್ತಿದ್ರಾ?.. ಯಾರ ಸಿನಿಮಾನ ಯಾಕೆ ನೋಡ್ತಾ ಇದ್ರು? ಗುಟ್ಟು ರಟ್ಟಾಯ್ತು...!

ಅವರು ಕೊಟ್ಟ ಸಲಹೆ ನನ್ನ ತಲೆಗೆ ಎಷ್ಟರಮಟ್ಟಿಗೆ ಹೋಯ್ತೋ ಏನೋ ಗೊತ್ತಿಲ್ಲ. ಆದ್ರೆ, ಅಣ್ಣಾವ್ರು ಮನಸಾರೆ ನನ್ನ ಬೆನ್ನ ಮೇಲೆ ಕೈ ಇಟ್ಟು ಮಾತನ್ನಾಡಿಸಿದ್ದು, ಅವರೊಂದಿಗೆ ಊಟಕ್ಕೆ ಕುಳಿತದ್ದು ಎಲ್ಲವೂ ಇಂದಿಗೂ ನನಗೆ ಮೆಯಲಾಗದ ಖುಷಿಯ ವಿಚಾರ..' ಎಂದಿದ್ದಾರೆ ಮಾಜಿ ನಟ ಮಾಸ್ಟರ್ ಮಂಜುನಾಥ್. ಅವರೀಗ ನಟನೆ ಮಾಡುತ್ತಿಲ್ಲ, ಆದ್ದರಿಂದ ಅವರನ್ನು ಮಾಜಿ ಎಂದು ಕರೆದರೆ ತಪ್ಪಿಲ್ಲ. ಆದರೆ, ಈಗಲೂ ಅಲ್ಲಿ ಇಲ್ಲಿ ಎಂಬಂತೆ ಅವರ ಕೆಲವು ಸಂದರ್ಶನಗಳು ಓಡಾಡುತ್ತಿರುತ್ತವೆ. ಜನರು ಅವರನ್ನು ಮೆಚ್ಚಿದ್ದರು, ಈಗಲೂ ಮರೆತಿಲ್ಲ.