ಆಸ್ಪತ್ರೆಗೆ ದಾಖಲಾಗಿರುವ ಅವರು ಬೇಗನೆ ಮರಳುತ್ತಾರೆಂಬ ನಿರೀಕ್ಷೆ ಚಿತ್ರತಂಡದ್ದಾಗಿತ್ತು. ಮನೆಮಂದಿ ಮತ್ತು ಸ್ನೇಹಿತರೂ ಕೂಡಾ ಹಾಗೆಯೇ ಅಂದುಕೊಂಡಿದ್ದರು. ಅವರು ಹುಷಾರಾಗಿ ಬರೋದರೊಳಗೆ ಉಳಿದ ಕೆಲಸ ಮುಗಿಸಬೇಕೆಂದು ಚಿತ್ರತಂಡ ಹಗಲಿರುಳೂ ಕೆಲಸ ಮಾಡುತ್ತಿತ್ತು. ಆದರೆ, ಶಿವರಾತ್ರಿಯ ಹಿಂದಿನ ದಿನ..
ಇದೊಂದು ಅನ್ಯಾಯ ಎನ್ನಬಹುದಾದ ಸಾವು..! ಅವರ ಹೆಸರನ್ನು ಹಲವರು ಕೇಳಿರಲಿಕ್ಕಿಲ್ಲ.. ಆದರೆ ಯಶ್-ರಾಧಿಕಾ ಪಂಡಿತ್ ಜೋಡಿಗೆ ಹಾಗೂ ಅವರ ಆಪ್ತ ವಲಯಕ್ಕೆ ಈ ಹೆಸರು ಚಿರಪರಿಚಿತ. ಅಷ್ಟೇ ಅಲ್ಲ, ಇವರು ಕೆಜಿಎಫ್ ಖ್ಯಾತಿಯ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಬಾಲ್ಯ ಸ್ನೇಹಿತ. ಯಶ್ ನಟರಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದರೆ ಈ ವ್ಯಕ್ತಿ ನಿರ್ದೇಶಕರಾಗಲು ಹೊರಟಿದ್ದರು. ಒಂದೊಂದೇ ಹಂತ ದಾಟಿ ಇದೀಗ ತಮ್ಮ ಮೊಟ್ಟಮೊದಲ ಚಿತ್ರದ ಶೂಟಿಂಗ್ ಕೂಡ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅನಾರೋಗ್ಯದಿಂದ ಕಳೆದ ತಿಂಗಳು ಇಹಲೋಕ ತ್ಯಜಿಸಿದ್ದಾರೆ. ಅವರ ಹೆಸರು ಅರ್ಜುನ್ ಕೃಷ್ಣ.

ಹೌದು, ಅರ್ಜುನ್ ಕೃಷ್ಣ ಮೈಸೂರಿನವರು, ಯಶ್ ಆಪ್ತ ಸ್ನೇಹಿತ. ಇನ್ನೂ ನಲವತ್ತು ವಯಸ್ಸು ನೋಡದ ಅರ್ಜುನ್ ಕೃಷ್ಣ ಅವರು 'ಡ್ಯಾಡ್' ಎಂಬ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ಇನ್ನೇನು 2-3 ತಿಂಗಳೊಳಗೆ ಈ ಚಿತ್ರವು ಬಿಡುಗಡೆಯಾಗಿ ಜಗತ್ತಿಗೆ ಅವರ ಹೆಸರು ಗೊತ್ತಾಗಲಿತ್ತು.. ಸಿನಿಮಾ ಹಿಟ್ ಆದರೆ ಬಹುಶಃ ಜಗತ್ತಿನ ತುಂಬಾ ಫೇಮಸ್ ಕೂಡ ಆಗುತ್ತಿದ್ದರೇನೋ! ಆದರೆ, ತನ್ನ ನಿರ್ದೇಶನದ ಈ 'ಡ್ಯಾಡ್- ದೇವರಾಜ್ ಅಲಿಯಾಸ್ ಡೇವಿಡ್) ಫಸ್ಟ್ ಕಾಪಿ ನೋಡುವ ಭಾಗ್ಯವೂ ಸಿಗದ ಈ ನತದೃಷ್ಟ ನಿರ್ದೇಶಕ ಅರ್ಜುನ್ ಕೃಷ್ಣ, ಕನಸು ಕಟ್ಟಿಕೊಂಡೇ ಮರಳಿ ಬಾರದ ಲೋಕಕ್ಕೆ ಹೋಗಿಬಿಟ್ಟರು. ಅಷ್ಟಕ್ಕೂ ಅವರಿಗೆ ಆಗಿದ್ದೇನು? ಮುಂದೆ ನೋಡಿ..
ಫಸ್ಟ್ ಟೈಂ ಯಶ್ ಮನೆಗೆ ರಾಧಿಕಾ ಪಂಡಿತ್ ಹೋದಾಗ ಏನು ಕೊಟ್ರು..? ಆಗೋ ಸೊಸೆ ಬಗ್ಗೆ ಹೇಳಿದ್ದೇನು?
ಅರ್ಜುನ್ ಕೃಷ್ಣ ಈ ವರ್ಷದ ಜನವರಿ ತಿಂಗಳಲ್ಲಿ ತಮ್ಮ ಡ್ಯಾಡ್ ಚಿತ್ರದ ಡಿಐ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗುವ ಖುಷಿಯಲ್ಲಿದ್ದರು. ಇದೇ ಹೊತ್ತಿನಲ್ಲಿ ಅವರಿಗೆ ಸಣ್ಣ ಸ್ವರೂಪದಲ್ಲಿ ಅನಾರೋಗ್ಯ ಸಮಸ್ಯೆ ಕಾಡತೊಡಗಿತ್ತು. ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ಸಿನಿಮಾ ಕೆಲಸ ಕಾರ್ಯಗಳಲ್ಲಿ ಮುಳುಗಿ ಹೋಗಿದ್ದ ಅರ್ಜುನ್ ಕೃಷ್ಣ, ಆಯುರ್ವೇದ ಔಷಧಿಯ ಮೊರೆ ಹೋಗಿದ್ದರು. ಸ್ವಲ್ಪ ದಿನಗಳ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಮತ್ತೆ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.

ಆದರೆ, ಬಳಿಕ ಅವರಿಗೆ ಮತ್ತೊಂದು ಸುತ್ತಿನ ಆಘಾತ ಕಾಡಿದೆ. ಇದೇ ಫೆಬ್ರವರಿ ತಿಂಗಳಿನಲ್ಲಿ ಮತ್ತೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳಿದಾಗ ಗಾಲ್ ಬ್ಲಾಡರ್ ಸ್ಟೋನ್ ಸಮಸ್ಯೆ ಉಲ್ಬಣಿಸಿ, ಅದರ ಸೋಂಕು ಫ್ಯಾಂಕ್ರಿಯಾಸ್ ಗೂ ಹಬ್ಬಿಕೊಂಡಿದೆ ಎಂಬ ಆಘಾತಕಾರಿ ವಿಚಾರವನ್ನು ವೈದ್ಯರು ಹೇಳಿದ್ದಾರೆ. ತಕ್ಷಣ ಅರ್ಜುನ್ ಕೃಷ್ಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರ ತಿಳಿದ ಡ್ಯಾಡ್ ಚಿತ್ರತಂಡ ಮನದಲ್ಲೆ ಬೇಸರಿಸಿಕೊಂಡು ಚಿತ್ರದ ಕೆಲಸ ಮುಂದುವರಿಸಿತ್ತು. ಕಾರಣ, ಅಗ ಮುಂಬರುವ ಕೆಡುಕಿನ ಯಾವುದೇ ಸೂಚನೆಯೂ ಇರಲಿಲ್ಲ. ಯಾಕೆಂದರೆ, ಕಿಡ್ನಿ ಸ್ಟೋನ್ ಮತ್ತು ಅದರ ಚಿಕಿತ್ಸೆ ಇತ್ತೀಚೆಗೆ ಮಾಮೂಲು.
ಮಾಸ್ಟರ್ ಮಂಜುನಾಥ್ ಚೆನ್ನೈನಲ್ಲಿ ಸಿಕ್ಕಾಗ ಡಾ ರಾಜ್‌ಕುಮಾರ್ ಮಾಡಿದ್ದೇನು? ಏನದು ಒನ್, ಟೂ, ತ್ರಿ...?!
ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಅರ್ಜುನ್ ಕೃಷ್ಣ ಬೇಗನೆ ಮರಳುತ್ತಾರೆಂಬ ನಿರೀಕ್ಷೆ ಚಿತ್ರತಂಡದ್ದಾಗಿತ್ತು. ಅವರ ಮನೆಮಂದಿ ಮತ್ತು ಸ್ನೇಹಿತರೂ ಕೂಡಾ ಹಾಗೆಯೇ ಅಂದುಕೊಂಡಿದ್ದರು. ಅರ್ಜುನ್ ಕೃಷ್ಣ ಹುಷಾರಾಗಿ ಬರೋದರೊಳಗೆ ಉಳಿದ ಕಾರ್ಯ ಮುಗಿಸಬೇಕೆಂದು ಇಡೀ ಚಿತ್ರತಂಡ ಹಗಲಿರುಳೂ ಕೆಲಸ ಮಾಡುತ್ತಿತ್ತು. ಆದರೆ, ಶಿವರಾತ್ರಿಯ ಹಿಂದಿನ ದಿನ ಅಂದರೆ, ಫೆಬ್ರವರಿ 25ರಂದು, ನಿರ್ದೇಶಕರಾಗಲಿದ್ದ ಅರ್ಜುನ್ ಕೃಷ್ಣ ಇನ್ನಿಲ್ಲವೆಂಬ ಸುದ್ದಿ ಬಂದೆರಗಿತ್ತು. ಗಾಲ್ ಬ್ಲಾಡರಿನಿಂದ ಫ್ಯಾಂಕ್ರಿಯಾಸ್ ಗೆ ಹಬ್ಬಿಕೊಂಡಿದ್ದ ಸೋಂಕು ತೀವ್ರ ಸ್ವರೂಪ ಪಡೆದ ಪರಿಣಾಮವಾಗಿ, ಕಾರ್ಡಿಯಾಕ್ ಅರೆಸ್ಟ್ ಸಂಭವಿಸಿ ಅರ್ಜುನ್ ಉಸಿರು ನಿಲ್ಲಿಸಿದ್ದರು.

ಅರ್ಜುನ್ ಕೃಷ್ಣ ಅವರ ಈ ರೀತಿಯ ಸಾವಿನ ಮೂಲಕ ಪಕ್ಕಾ ಸಿನಿಮಾ ಪ್ರೇಮಿಯೊಬ್ಬರ ಬದುಕು ಅರ್ಧ ಹಾದಿಯಲ್ಲಿಯೇ ನಿಂತಿತ್ತು. ಮುಖ್ಯವಾಗಿ ಮೈಸೂರು, ಬೆಂಗಳೂರು ಸೇರಿದಂತೆ ಬಹುತೇಕ ಎಲ್ಲಾ ಕಡೆ ಹಬ್ಬಿಕೊಂಡಿದ್ದ ಅವರ ಸ್ನೇಹಿತರ ಬಳಗ ಕಣ್ಣೀರು ಹಾಕಿತ್ತು.
ಭಾರತಿಯನ್ನು ನಾನು ಮದುವೆ ಆಗುವಂತೆ ಮಾಡಿದ್ದು ರಾಜನ್-ನಾಗೇಂದ್ರ; ನಟ ವಿಷ್ಣುವರ್ಧನ್!
'ನಮ್ ಸಿನಿಮಾ' ಖ್ಯಾತಿಯ ಶಿವರಾಜ್ ಕುಮಾರ್ ಸೇರಿದಂತೆ ಡ್ಯಾಡ್ ಚಿತ್ರತಂಡ, ಅರ್ಜುನ್ ಕೃಷ್ಣರೇ ಜಗತ್ತಾಗಿದ್ದ ಅವರ ಅಮ್ಮ, ಅಣ್ಣ, ಮಡದಿ ಮತ್ತು ಪುಟ್ಟ ಕಂದನ ತಬ್ಬಲಿಗಳಾದರು. ಆಪ್ತಸ್ನೆಹಿತ ಯಶ್ ಸೇರಿದಂತೆ ಅರ್ಜುನ್ ಕೃಷ್ಣ ಸ್ನೇಹ ವಲಯದಲ್ಲಿ ಎಲ್ಲರಿಗೂ ಸ್ನೇಹಜೀವಿ ಅರ್ಜುನ್ ಕೃಷ್ಣ ನಮ್ಮೊಡನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ.

