ಬಿಗ್ ಬಾಸ್ ಮನೆಗೆ ಸಂಚಾರಿ ವಿಜಯ್ ಹೋಗಿದ್ರೆ ಬದುಕಿರುತ್ತಿದ್ದರು : ಚಕ್ರವರ್ತಿ ಚಂದ್ರಚೂಡ್
ಸಂಚಾರಿ ವಿಜಯ್ ಜೊತೆಗಿರುವ ಸ್ನೇಹ ಮತ್ತು ಅವರಿಗೆ ಬಂದಿದ್ದ ಬಿಬಿ ಆಫರ್‌ಗಳ ಬಗ್ಗೆ ಚಕ್ರವರ್ತಿ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಅತ್ಯದ್ಭುತ ಕಲಾವಿದೆ, ವಿಭಿನ್ನ ಪಾತ್ರಗಳ ಮೂಲಕ ಸಿನಿ ರಸಿಕರನ್ನು ಮನೋರಂಜಿಸಿದ ನಟ ಸಂಚಾರಿ ವಿಜಯ್ (Sanchari Vijay) ನಟಿಸಿರುವ ಕೊನೆಯ ಸಿನಿಮಾ ಮೇಲೊಬ್ಬ ಮಾಯಾವಿ (Melobba Mayavi) ಸಿನಿಮಾ ಏಪ್ರಿಲ್ 29ರಂದು ಬಿಡುಗಡೆಗೆ ಸಜ್ಜಾಗಿದೆ. ಪತ್ರಕರ್ತ ನವೀನ್ ಕೃಷ್ಣ (Journalist Naveen Krishna) ಚೊಚ್ಚಲ ನಿರ್ದೇಶನ ಸಿನಿಮಾ ಇದಾಗಿದ್ದು ಚಕ್ರವರ್ತಿ ಚಂದ್ರಚೂಡ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದೆ ಶ್ರೀನಗರ ಕಿಟ್ಟಿ (Srinagar Kitty) ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಚಕ್ರವರ್ತಿ ಚಂದ್ರಚೂಡ್ (Chakravarthy Chandrachu) ವಿಜಯ್ ಜೊತೆಗಿರುವ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. 'ಕೊರೊನಾ ಎರಡನೇ ಅಲೆ ಎದ್ದಾಗ ನಾನು ಬಿಗ್ ಬಾಸ್ ಸೀಸನ್ 8 ಮನೆಗೆ ಹೋಗಿದ್ದೆ. ಇಷ್ಟು ವರ್ಷ ಜರ್ನಿಯಲ್ಲಿ ನನಗೂ ವಿಜಯ್‌ಗೂ ಏನಾದರೂ ಸ್ವಲ್ಪ ಗ್ಯಾಪ್ ಆಗಿದ್ದರೆ ಕೊರೊನಾ ಸಮಯದಲ್ಲಿ. ಎರಡನೇ ಅಲೆ ಸಮಯಲ್ಲಿ ನಾನು ಬಿಗ್ ಬಾಸ್ ಮನೆಯೊಳಗೆ ಇದ್ದೆ. ನಿಜ ಹೇಳಬೇಕು ಅಂದ್ರೆ ಸೀಸನ್ 8ಕ್ಕೆ ವಿಜಯ್ ಬರಬೇಕಿತ್ತು. ಬಿಗ್ ಬಾಸ್‌ಗೆ ಕರೆಯುತ್ತಿದ್ದಾರೆ ಏನು ಮಾಡಲಿ ಎಂದು ಕೇಳಿದರು ನಾನು ಹೀಗಿ ಚೆನ್ನಾಗಿರುತ್ತೆ ಅಂದು ಹೇಳಿದ್ದೆ' ಎಂದು ಚಕ್ರವರ್ತಿ ಕನ್ನಡ ಖಾಸಗಿ ವೆಬ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಅವರು ಭಯಪಡುವ ವ್ಯಕ್ತಿ. ಏನಾಗುತ್ತೆ ಏನೋ ನಾನು ಹೀಗಲ್ಲ ನೀವು ಹೀಗಿ ಬಂಡು ಬಿಡಿ, ಒಂದು ಸಲ ನೀವು ಹೇಳಿ ಏನಿರುತ್ತೆ ಅಂತ ನನಗೆ ಅನಿಸಿದರೆ ನಾನು ಹೋಗುತ್ತೇನೆ ಅಂದ್ರು. ಒಂದು ವೇಳೆ ಅವರು ಬಿಗ್ ಬಾಸ್‌ಗೆ ಬಂದು ಬಿಟ್ಟದ್ದರೆ ಬದುಕುಳಿಯುತ್ತಿದ್ದರು. ಇಲ್ಲಾ ನಾನು ಬಿಗ್ ಬಾಸ್ ಒಳಗೆ ಹೋಗದೆ ಇದ್ದಿದ್ದೆ ಅವರು ಬದುಕುಳಿಯುತ್ತಿದ್ದರು. ಯಾಕಂದ್ರೆ ಎಲ್ಲಾ ಸಂದರ್ಭದಲ್ಲೂಅವರು ನನ್ನ ಜೊತೆ ಇರುತ್ತಿದ್ದರು. ವಿಜಯ್ ಅವರ ಯಾವುದೇ ಸಂದರ್ಭದಲ್ಲೂ ನಾನು ಜೊತೆಗಿರುತ್ತಿದ್ದೆ' ಎಂದು ಚಕ್ರವರ್ತಿ ಹೇಳಿದ್ದಾರೆ.
ಮೇಲೊಬ್ಬ ಮಾಯಾವಿ ಟ್ರೇಲರ್ ರಿಲೀಸ್!'ಬ್ಯಾಡ್ಮಿಂಟನ್ ಆಡುವಂತಹ ಒಂದು ಟೀಮ್ ಇದೆ ಕವಿರಾಜ್ (Kaviraj) ಅವರೆಲ್ಲಾ ತುಂಬಾನೇ ಆಕ್ಟೀವ್ ಆಗಿದ್ದಾರೆ. ಸಾಯುವ ಎರಡು ದಿನದ ಮುನ್ನ ಅವರು ಕಾರು ಮಾರಾಟ ಮಾಡಿದ್ದಾರೆ, ಅದೆಲ್ಲೋ ರೇಷನ್ ಹಂಚಬೇಕಿತ್ತಂತೆ. ಜನರಿಗೆ ಸಹಾಯ ಮಾಡುವುದಕ್ಕೆ ನನ್ನ ಬಳಿ ದುಡ್ಡಿಲ್ಲ ಅದಿಕ್ಕೆ ಇರೋ ಕಾರುನ ಮಾರಿ ಸಹಾಯ ಮಾಡಿದ್ದರು. ಎಂಟು-ಒಂಬತ್ತು ಲಕ್ಷಕ್ಕೆ ಮಾರಿದ್ದಾರೆ ನಾನು ಬೈದು ಕಳುಹಿಸಿದ್ದೆ ಅವರು ಒಂದು ಕಡೆ ಊಟ ಮಾಡಿದ್ದಾರೆ ಅವರ ಅಭಿಮಾನಿಯೊಬ್ಬರು ಹೊಸ ಬೈಕ್ ಖರೀದಿಸಿದ್ದರು ಒಂದು ರೌಂಡ್ ಹಾಕಿ ಫೋಟೋ ತೆಗೆಸಿಕೊಳ್ಳಬೇಕು ಅಂತಿದ್ದರು ಆ ವೇಳೆ ಬೈಕ್ ಸ್ಪೀಡ್ ವೇರಿಯೇಷನ್ ಆಗಿ ಡಿವೈಡರ್‌ಗೆ ಹೊಡೆದಿದ್ದಾರೆ' ಎಂದು ಘಟನೆ ಬಗ್ಗೆ ಚಕ್ರವರ್ತಿ ಹೇಳಿದ್ದಾರೆ.
Puneeth RajKumar Death: ಒಂದೂವರೆ ವರ್ಷದಲ್ಲಿ ಮೂವರು ನಟರನ್ನು ಕಳೆದುಕೊಂಡ ಸ್ಯಾಂಡಲ್‌ವುಡ್'ವಿಜಯ್ ಸಾಮಾಜಿಕ ಕ್ಷೇತ್ರಕ್ಕೆ ಬಂದಿದ್ದೆ ನನ್ನಿಂದ. ನಾವು ಕೊಡಗಿನಲ್ಲಿ55 ದಿನ ಇದ್ದೆವು ನನ್ನ ಜೊತೆ ಮೂಟೆ ಹೊತ್ತಿದ್ದಾರೆ ಆಹಾರ ಹೊತ್ತಿದ್ದಾರೆ ಗಂಜಿ ಕೇಂದ್ರಗಳಲ್ಲಿ ಕೆಲಸ ಮಾಡಿದ್ದಾರೆ. ನಿರಾಶ್ರಿತರ ಶಿಬಿಗಳಲ್ಲಿ ಕೆಲಸ ಮಾಡಿದ್ದಾರೆ. ಅದಾದ ಮೇಲೆ ಕೊರೋನಾ ಅಲೆ ಶುರುವಾಯ್ತು. ಹೆಚ್ಚು ಕಮ್ಮಿ ನಾವು ಎಂಟು ತಿಂಗಳು ಒಂದೇ ಮನೆಯಲ್ಲಿ ಇದ್ದೀವಿ. ಬೆಳಗ್ಗೆ ಎದ್ದರೆ ವ್ಯಾಯಾಮ ಮಾಡುವುದು ಸ್ಪಮ್‌ಗಳಿಗೆ ಹೋಗುವುದು ರೇಷನ್ ಹಂಚುವುದೇ ಕೆಲಸ' ಎಂದು ಚಕ್ರವರ್ತಿ ಮಾತನಾಡಿದ್ದಾರೆ.
‘ಪಶ್ಚಿಮ ಘಟ್ಟಗಳಲ್ಲಿ ನಡೆಯುವ ಹರಳು ಮಾಫಿಯಾದ ಕುರಿತಾದ ಸಿನಿಮಾ ಇದು. ಸಕ್ಕರೆ, ಇರುವೆ ಹಾಗೂ ಸುಲೇಮಾನ್ ಹೀಗೆ ಚಿತ್ರದಲ್ಲಿ ಮೂರು ಪಾತ್ರಗಳು ಬರುತ್ತವೆ. ಸಕ್ಕರೆ ಪಾತ್ರದಲ್ಲಿ ಅನನ್ಯ ಶೆಟ್ಟಿ, ಇರುವೆ ಪಾತ್ರದಲ್ಲಿ ಸಂಚಾರಿ ವಿಜಯ… ಹಾಗೂ ಸುಲೇಮಾನ್ ಪತ್ರದಲ್ಲಿ ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಒಬ್ಬರಿಗಿಂತ ಒಬ್ಬರ ಅಭಿನಯ ಅದ್ಭುತ’ ಎಂದು ಮೇಲೊಬ್ಬ ಮಾಯಾವಿ ಚಿತ್ರದ ನಿರ್ದೇಶಕ ನವೀನ್ ಕೃಷ್ಣ ಹೇಳಿದ್ದಾರೆ.