ಬಿಗ್ ಬಾಸ್‌ ಸೀಸನ್‌ 6 ರನ್ನರ್‌ ಅಪ್‌ ನವೀನ್‌ ಸಜ್ಜು ಗಾಯಕನಾಗಿ ಮಾತ್ರವಲ್ಲ, ನಾಯಕನಾಗಿಯೂ ಗುರುತಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂಬ ವಿಚಾರ ಹಲವು ವರ್ಷಗಳಿಂದ ಕೇಳುತ್ತಲೇ ಬಂದಿತ್ತು.  ನ್ಯೂ ಇಯರ್‌ಗೆ ಎಣ್ಣೆ ಬಿಟ್ಬುಡ್ತೀನಿ ಅಂತ ಹೇಳಿದ್ದವರು ಈಗ ಸೈಲೆಂಟ್ ಆಗಿ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ.

ರಮಿಸೋ ಹುಡುಗ, ಮುನಿಸೋ ಹುಡುಗಿ ನೋಡ್ಲೇಬೇಕಾದ ಸಾಂಗ್ ಇದು!

ಡಬಲ್ ಮೀನಿಂಗ್ ಕಾಮಿಡಿ ಇದ್ರೂ ಪಕ್ಕಾ, ಫ್ಯಾಮಿಲಿ ಓರಿಯಂಟೆಡ್‌ ಸಿನಿಮಾ 'ಕೆಮಿಸ್ಟ್ರಿ ಆಫ್‌ ಕರಿಯಪ್ಪ' ನಿರ್ದೇಶಕ ಕುಮಾರ್ ಈಗ ನವೀನ್ ಅವರ ಚಿತ್ರಕ್ಕೂ ಆ್ಯಕ್ಷನ್‌ ಕಟ್ ಹೇಳಲಿದ್ದಾರೆ. ಹಲವು ತಿಂಗಳ ಹಿಂದೆಯೇ ಈ ಚಿತ್ರಕಥೆ ಶುರುವಾಗಬೇಕಿತ್ತು ಆದರೆ ಕಾರಣಾಂತರಗಳಿಂದ ಮುಂದೆ ಹೋಗಿ ಈಗ ಒಳ್ಳೆ ಮುಹೂರ್ತ ಕೂಡಿ ಬಂದಿದೆ.

ಕೆಲವು ದಿನಗಳ ಹಿಂದೆ ಆದಿಚುಂಚನಗಿರಿ ಕ್ಷೇತ್ರದಲ್ಲಿ ಚಿತ್ರಕಥೆಗೆ ಪೂಜೆ ಮಾಡಿಸಲಾಗಿತ್ತು. ಚಿತ್ರ ತಂಡದ ಕೆಲ ಪ್ರಮುಖ ಕಲಾವಿದರು ಒಟ್ಟಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ರದ ಶೀರ್ಷಿಕೆ ಹಾಗೂ ಟೀಸರ್‌ ಬಗ್ಗೆ ಶೀಘ್ರದಲ್ಲಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ನಾಳೆಯಿಂದ ಎಣ್ಣೆ ಬುಟ್ ಬುಡ್ತೀನಿ... ಒಳಿತು ಮಾಡು ಮನುಷ..ನವೀನ ಗಾನ 

ಇನ್ನು ಇತ್ತೀಚಿಗೆ ರಿಲೀಸ್ ಆದ ಐಪಿಎಲ್ ಬೆಟ್ಟಿಂಗ್ ಲವರ್ಸ್‌ ಲಿರಿಕಲ್ ಸಾಂಗ್ ಯುಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಇದು ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಹಾಡು ಎನ್ನಲಾಗಿದೆ.