ಅಂಧಾಭಿಮಾನಿಗಳೇ Social Mediaದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ?: ಪ್ರಥಮ್

‘ಬಿಗ್ ಬಾಸ್’ ವಿನ್ನರ್ ಪ್ರಥಮ್‌ಗೆ ಇತ್ತೀಚೆಗೆ ದರ್ಶನ್ ಫ್ಯಾನ್ಸ್‌ಗಳಿಂದ  ಬೆದರಿಕೆ ಕರೆ ಬಂದ ಬೆನ್ನಲ್ಲೇ ನಟ ಠಾಣೆ ಮೆಟ್ಟಿಲೇರಿದ್ದರು. ಈಗ ಈ ಪ್ರಕರಣದ ವಿಚಾರವಾಗಿ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ.

Kannada Bigg Boss Fame Actor Pratham warns legal action to darshan fans once again gvd

ಬೆಂಗಳೂರು (ಜು.03): ‘ಬಿಗ್ ಬಾಸ್’ ವಿನ್ನರ್ ಪ್ರಥಮ್‌ಗೆ ಇತ್ತೀಚೆಗೆ ದರ್ಶನ್ ಫ್ಯಾನ್ಸ್‌ಗಳಿಂದ  ಬೆದರಿಕೆ ಕರೆ ಬಂದ ಬೆನ್ನಲ್ಲೇ ನಟ ಠಾಣೆ ಮೆಟ್ಟಿಲೇರಿದ್ದರು. ಈಗ ಈ ಪ್ರಕರಣದ ವಿಚಾರವಾಗಿ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಾರೆ. ಹೌದು! ನಟ ದರ್ಶನ್ ಬಂಧನ ಬೆನ್ನಲ್ಲೇ ಪ್ರಥಮ್ ನೀಡಿದ ಹೇಳಿಕೆಯೊಂದು ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೆಲ ಅಂಧಾಭಿಮಾನಿಗಳು ಕೆಂಡಾಮಂಡಲವಾಗಿ ಪ್ರಥಮ್ ವಿರುದ್ಧ ತಿರುಗಿ ಬಿದ್ದಿದ್ದರು. 

ಪ್ರಥಮ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ದರ್ಶನ್ ಅವರನ್ನು ಬಂಧಿಸಿಟ್ಟಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಎದುರು ನಿಂತಿರುವ ಕೆಲ ಅಂಧಾಭಿಮಾನಿಗಳನ್ನು ಲಾಠಿ ತೆಗೆದುಕೊಂಡು ಹೊಡೆಯಬೇಕು ಅನಿಸುತ್ತದೆ. ಅಲ್ಲಿರುವ ಒಬ್ಬರೂ ಸಹ ಅವರ ಅಪ್ಪ-ಅಮ್ಮನಿಗೆ ಒಂದೊತ್ತು ಊಟ ಹಾಕುವ ಯೋಗ್ಯತೆ ಇಲ್ಲದವರು. ಮೊದಲು ಅವರನ್ನು ಬಾರಿಸಿ ಓಡಿಸಬೇಕು ಎಂದು ಹೇಳಿದ್ದರು. 

ರೇಣುಕಾಸ್ವಾಮಿ ಮುಗ್ಧನಲ್ಲ, ವಿಕೃತಕಾಮಿ, ದರ್ಶನ್ ಪ್ರಕರಣ ವಿಧಿಯಾಟ: ಸಂಗೀತ ನಿರ್ದೇಶಕ ವಿ.ಮನೋಹರ್

ಈ ಬಗ್ಗೆ ದರ್ಶನ್ ಅಭಿಮಾನಿಗಳು ಕೆಂಡಕಾರಿದ್ದರು. ಕೆಲವರು ಫೋನ್ ಕರೆಗಳನ್ನು ಮಾಡಿ ಬೆದರಿಸುತ್ತಿರುವುದಾಗಿ ಪ್ರಥಮ್ ಜ್ಞಾನಭಾರತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಮಾತನಾಡಿದ್ದ ಪ್ರಥಮ್ ಕಳೆದ 2-3 ದಿನಗಳಿಂದ ಬೆದರಿಕೆ ಕರೆಗಳು ಬರ್ತಿದ್ದವು. ಪೊಲೀಸ್ ಠಾಣೆಗೆ ಕಂಪ್ಲೀಟ್ ಮಾಡಿದ್ದೇನೆ. ಎನ್‌ಸಿಆರ್ ಆಗಿದೆ. ಪೊಲೀಸರು ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅರೆಸ್ಟ್ ಮಾಡೋದು ಬೇಡ ವಾರ್ನ್ ಮಾಡಿ ಎಂದು ಹೇಳಿದ್ದೇನೆ ಎಂದು ಮಾಹಿತಿ ನೀಡಿದ್ದರು.
 


ಈ ಘಟನೆಗೆ ಪ್ರಥಮ್ ಪ್ರತಿಕ್ರಿಯಿಸಿ, ಅಂಧಾಭಿಮಾನಿಗಳೇ, ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ. ಮನೆಗೆ ಪೊಲೀಸ್ ನೋಟಿಸ್ ಬಂದ ಮೇಲೆ ಸ್ಟೇಷನ್‌ಗೆ ಬಂದು ನಾವು ಪ್ರಥಮ್ ಫ್ಯಾನ್, ಯಾರೋ ಫೇಕ್ ಪ್ರೊಫೈಲ್ ಮಾಡಿ ಬಿಟ್ಟಿದ್ದಾರೆ ಅಂತಾ ಕಾಲಿಗೆ ಬೀಳ್ತೀರಾ. ಸೋಶಿಯಲ್ ಮೀಡಿಯಾದಲ್ಲಿ ಹಾರಾಡುವಾಗ ಇದ್ದ ಪೌರುಷ ಪೊಲೀಸ್ ಸ್ಟೇಷನ್‌ಗೆ ಬಂದಾಗ ಯಾಕಿಲ್ಲ? ನೀವು ಬುದ್ದಿ ಕಲಿಯಲ್ಲ. ಇನ್ಮೇಲೆ ಲೀಗಲ್ ಆಗಿ ಹೋಗ್ತೀನಿ ಎಂದು ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ: ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ಮಾಲತಿ ಸುಧೀರ್

ಪ್ರಥಮ್ ಹಾಕಿರೋ ಪೋಸ್ಟ್‌ಗೆ ಅನೇಕ ಮೆಚ್ಚುಗೆಗಳು ಬಂದಿವೆ. ಒಳ್ಳೆ ಕೆಲಸ ಮಾಡಿದ್ದೀರಿ ಪ್ರಥಮ್ ಅಂತಲೇ ಹಲವರು ಹೇಳಿದ್ದಾರೆ. ತಮ್ಮದೇ ಶೈಲಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆ ಮೆಚ್ಚುಗೆ ಮಾತುಗಳಲ್ಲಿ ಇಲ್ಲಿ ಒಂದು ಎಕ್ಸಾಂಪಲ್ ಇದೆ ಓದಿ. ಮೂರು ಬಿಟ್ಟ ಜನರಿಗೇ ಬುದ್ದಿ ಮಾತು ಅರ್ಥ ಆಗೋದಿಲ್ಲ ದಂಡಂ ದಶಗುಣಂ ಅಷ್ಟೇ.. ಆಮೇಲೆ ಕಾಲಿಗೆ ಬೀಳ್ತವೆ. ಪ್ರಥಮ್ ಮಾಡಿರೋ ಕೆಲಸ ಎಲ್ಲರಿಗೂ ಇಷ್ಟ ಆಗಿದೆ. ಕಾಮೆಂಟ್ ಹೊಡೆದೊರಿಗೆ ಲೀಗಲ್ ನೋಟೀಸ್ ಗ್ಯಾರಂಟಿ ಅನ್ನೋ ಎಚ್ಚರಿಕೆಯನ್ನೂ, ಪ್ರಥಮ್ ಈ ಮೂಲಕ ಕೊಟ್ಟಿದ್ದಾರೆ ಅಂತಲೂ ಹೇಳಬಹುದು. ಅಂದಹಾಗೆ, ಜೂನ್ 19ರಂದು ದರ್ಶನ್ ಅಭಿಮಾನಿಗಳಿಂದ ಬೆದರಿಕೆ ಕರೆ ಬಂದ ಬೆನ್ನಲ್ಲೇ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಥಮ್ ದೂರು ದಾಖಲಿಸಿದ್ದರು.

Latest Videos
Follow Us:
Download App:
  • android
  • ios