ಸ್ಯಾಂಡಲ್‌ವುಡ್‌ ಸುಂದರಿ ಪಾರಿಜಾತ ಐಂದ್ರಿತಾ ರೇಗೆ ಸಿನಿಮಾನೂ ಬೇಕು, ವೆಬ್ ಸೀರಿಸೂ ಬೇಕು. ಈಗ ಟಿಕ್‌ಟಾಕ್ ಹಿಂದೆಯೂ ಬಿದ್ದಿದ್ದಾರೆ!

ಇತ್ತೀಚಿಗೆ ಇಂಗ್ಲಿಷ್‌ ಮಾದಕ ಹಾಡೊಂದಕ್ಕೆ ಹೆಜ್ಜೆ ಹಾಕುವ ಮೂಲಕ ಟಿಕ್‌ಟಾಕ್‌ಗೆ ಕಾಲಿಟ್ಟ ಐಂದ್ರಿತಾ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ವಿಡಿಯೋಗೆ ಬಹುತೇಕ ಅಭಿಮಾನಿಗಳು ಆಕ್ಷೇಪವನ್ನೂ ವ್ಯಕ್ತ ಪಡಿಸಿದ್ದರು. 

 
 
 
 
 
 
 
 
 
 
 
 
 

Finally on TikTok come groove with me on #tiktok n let’s get silly together 🤪 #followmeontiktok

A post shared by Aindrita Ray (@aindrita_ray) on Mar 4, 2020 at 10:14am PST

'ಇದೇನ್‌ ಮೇಡಂ ಸ್ಯಾಂಡಲ್‌ವುಡ್‌ ಮೂಲಕ ವೃತ್ತಿ ಆರಂಭಿಸಿ, ಇದೀಗ ಇಂಗ್ಲಿಷ್‌ ಹಾಡಿಗೆ ಹೆಚ್ಚೆ ಹಾಕುತ್ತಿದ್ದೀರಾ? ನಿಮ್ಮ ಪತಿ ದಿಗಂತ್‌ ಜೊತೆ ಕನ್ನಡ ಹಾಡಿಗೆ ಹೆಚ್ಚೆ ಹಾಕಿ' ಎಂದು ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದರು. ಇದಕ್ಕೂ ಐಂದ್ರಿತಾ ರೆಸ್ಪಾಂಡ್ ಮಾಡಿದ್ದಾರೆ.

'ಅಭಿಮಾನಿಗಳು ಬೇಡಿಕೆಯಂತೆ ಕನ್ನಡ ಹಾಡಿಗೆ ಟಿಕ್‌ಟಾಕ್‌ ಮಾಡಿರುವೆ, ಅದು ನನ್ನದೇ ಜಂಗ್ಲಿ ಚಿತ್ರದ ಹಾಡು. ಕರ್ಣವೀರ್ ಬೋಹ್ರಾ ಜೊತೆಗೆ...' ಎಂದು ಮತ್ತೊಂದು ಟಿಕ್‌ಟಾಕ್‌ ಅಪ್ಲೋಡ್‌ ಮಾಡಿದ್ದಾರೆ. ಆದರೆ ಅಭಿಮಾನಿಗಳು ಈ ವಿಡಿಯೋಗೂ ಕ್ಲಾಸ್‌ ತೆಗದುಕೊಂಡಿದ್ದಾರೆ.

ಪಬ್ಲಿಕ್‌ನಲ್ಲಿ ಪತ್ನಿ ಸೀರೆ ನೆರಿಗೆ ಸರಿ ಮಾಡಿದ ದಿಗಂತ್!

'ಏನ್‌ ಮೇಡಂ ಕನ್ನಡ ಹಾಡಿಗೆ ಮಾಡಿ ಅಂದ್ವಿ, ನೀವು ಮಾಡಿದ್ರಿ. ಆದ್ರೆ ಪಾಪ ದಿಗಂತ್ ಏನ್‌ ಮಾಡಿದ್ರು? ಅವರ ಜೊತೆ ನೀವೇಕೆ ಟಿಕ್‌ಟಾಕ್  ಮಾಡುತ್ತಿಲ್ಲ' ಎಂದೂ ಮತ್ತೆ ಐಂದ್ರಿತಾ ರೇ ಕಾಲೆಳೆಯಲು ಆರಂಭಿಸಿದ್ದಾರೆ. ಆದರೆ, ಅಭಿಮಾನಿಗಳ ಈ ಪ್ರಶ್ನೆಗಿನ್ನೂ ಐಂದ್ರಿತಾ ಉತ್ತರಿಸಿಲ್ಲ. ನೋಡೋಣ ಏನು ಹೇಳ್ತಾರೆಂದು?

ಕರಣವೀರ್‌ ಬೋಹ್ರಾ ವೃತ್ತಿಯಲ್ಲಿ ನಿರ್ಮಾಣ ಹಾಗೂ ಇಂಟೀರಿಯರ್‌ ವಿನ್ಯಾಸ ಮಾಡುತ್ತಾರೆ. ಅಷ್ಟೇ ಅಲ್ಲದೇ ಹಿಂದಿ ಕಿರುತೆರೆಯಲ್ಲೂ ಜನಪ್ರಿಯ ನಟನಾಗಿ ಗುರುತಿಸಿಕೊಂಡಿದ್ದಾರೆ.