ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರೊಂದಿಗೆ ನಟಿಸುತ್ತಾ ಕಾಲ್ ಶೀಟ್ ಫ್ರೀ ಇಲ್ಲದಷ್ಟು ಬ್ಯುಸಿಯಾಗಿರುವ ನಟಿ, ರಚಿತಾ ರಾಮ್‌ ಮನೆ ಬಾಗಿಲಿಗೆ ಅದೃಷ್ಟವೇ ಹುಡುಕಿಕೊಂಡು ಬಂದಿದೆ ಅನಿಸುತ್ತದೆ.

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ 'ಆಯುಷ್ಮಾನ್ ಭವ' ಚಿತ್ರದಲ್ಲಿ ನಟಿಯಾಗಿ ಮಿಂಚಿರುವ ರಚಿತಾ ರಾಮ್ ತಮ್ಮ ಅಭಿನಯದ ಮೂಲಕ ಮನ ಗೆದ್ದಿದ್ದಾರೆ. ಈ ಚಿತ್ರದಲ್ಲಿ ಸಂಗೀತ ಶಿಕ್ಷಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಹಿರಿಯ ನಟಿ ಸುಹಾಸಿನಿ ರಚ್ಚುಗೆ ಹೊಸ ಆಫರ್ ನೀಡಿದ್ದಾರೆ.

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

'ನಿನೋಬ್ಬಳು ಉತ್ತಮ ನಟಿ. ಈ ವಯಸ್ಸಿನಲ್ಲಿ ನಿನಗೆ ಸಿಗುತ್ತಿರುವ ಪಾತ್ರಗಳು ತುಂಬಾ ಚೆನ್ನಾಗಿದೆ. ನಿನಗೆ ಇರುವ ಪ್ರತಿಭೆಗೆ ನೀನು ಕಾಲಿವುಡ್‌ನಲ್ಲಿಯೂ ನಟಿಸಬೇಕು' ಎಂದು ಹೇಳಿದ್ದಾರಂತೆ. ಸುಹಾಸಿನಿ ಪತಿ ಮಣಿರತ್ನಂ ಕಾಲಿವುಡ್ ಖ್ಯಾತ ನಿರ್ದೇಶಕರಾಗಿದ್ದು ರಚಿತಾ ರಾಮ್ ಸದವಕಾಶ ಗಿಟ್ಟಿಕೊಳ್ಳಬಹುದು ಎಂದು ಗಾಂಧಿ ನಗರದಲ್ಲಿ ಮಾತುಗಳು ಕೇಳಿ ಬರುತ್ತಿದೆ.