Asianet Suvarna News Asianet Suvarna News

Cheating, ಬೆದರಿಕೆ: ಚೆನ್ನೈನಲ್ಲಿ ದೂರು ದಾಖಲಿಸಿದ ನಟಿ ಸ್ನೇಹಾ

 ಲಕ್ಷಾಂತರ ಹಣ ವಂಚನೆ ಬಗ್ಗೆ ನಟಿ ಸ್ನೇಹಾ ದೂರು ದಾಖಲಿಸಿದ್ದಾರೆ. ಸ್ನೇಹಾ ಉದ್ಯೋಗ ಶುರು ಮಾಡಿದ್ದು ಯಾವಾಗ? 

Kannada actress Sneha files complaint against businessman in Chennai  vcs
Author
Bangalore, First Published Nov 19, 2021, 2:17 PM IST
  • Facebook
  • Twitter
  • Whatsapp

ಬಹುಭಾಷಾ ನಟಿ ಸ್ನೇಹಾ (Sneha) ಮದರ್‌ವುಡ್ ಎಂಜಾಯ್ ಮಾಡುತ್ತಾ ಲೈಮ್‌ಲೈಟ್‌ನಿಂದ ಕೊಂಚ ದೂರ ಉಳಿದಿದ್ದಾರೆ ಆದರೆ ಸೋಷಿಯಲ್ ಮೀಡಿಯಾ (Social Media) ಮೂಲಕ ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ಬೆಳವಣೆಗೆಗಳ ಬಗ್ಗೆ ಅಭಿಮಾನಿಗಳ ಜೊತೆ ದುಃಖ ತೋಡಿಕೊಂಡಿದ್ದಾರೆ. ಆದರೆ ಈ ನಡುವೆ ಸ್ನೇಹಾ ಉದ್ಯಮವೊಂದನ್ನು (Bussines) ಆರಂಭಿಸಿದ್ದರೆಂಬ ವಿಚಾರ ಯಾರಿಗೂ ಗೊತ್ತಿರಲಿಲ್ಲ.... 

ಕೆಲವು ದಿನಗಳ ಹಿಂದೆ ಸ್ನೇಹಾ ಅವರು ಚೆನ್ನೈನ (Chennai) ಕಾಣತ್ತೂರು ಪೊಲೀಸ್‌ ರಾಣೆಯಲ್ಲಿ (Police Station) ದೂರೊಂದನ್ನು ದಾಖಲಿಸಿದ್ದಾರೆ. ಇಬ್ಬರು ಉದ್ಯಮಿಗಳಿಂದ ಮೋಸ ಆಗಿದೆ, ಎಂದು ಆರೋಪಿಸಿದ್ದಾರೆ. ಸ್ನೇಹಾ ನೀಡಿರುವ ದೂರಿನ ಪ್ರಕಾರ ಇಬ್ಬರು ಖ್ಯಾತ ಉದ್ಯಮಿಗಳು 26 ಲಕ್ಷವನ್ನು ಬಂಡವಾಳವಾಗಿ ಹಾಕಿ ಅದರಿಂದ ಬರುವ ಇಂಟ್ರೆಸ್ಟ್‌ (Interest amount) ಮೊತ್ತವನ್ನು ಸ್ನೇಹಾಗೆ ನೀಡುವುದಾಗಿ ಮಾತುಕತೆ ಮಾಡಿಕೊಂಡಿದ್ದರಂತೆ. ಆದರೆ ಹಲವು ತಿಂಗಳಿಂದ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿತ್ತಿಲ್ಲ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ 26 ಲಕ್ಷ ರೂ. ಹಿಂದಿರುಗಿಸುವಂತೆ ಸ್ನೇಹಾ ಕೇಳಿಕೊಂಡರೂ, ಪ್ರತಿಕ್ರಿಯೆ ನೀಡದೇ ವಂಚಿಸಿದ್ದಾರೆಂದು ಸ್ನೇಹಾ ಆರೋಪಿಸಿದ್ದಾರೆ.

Kannada actress Sneha files complaint against businessman in Chennai  vcs

ಇದೇ ಮೊದಲ ಬಾರಿ ಸ್ನೇಹಾ ಪೊಲೀಸ್‌ ಠಾಣೆ ಮಟ್ಟಿಲೇರಿ ದೂರು ದಾಖಲು ಮಾಡಿರುವುದು. ಹೀಗಾಗಿ ಅಭಿಮಾನಿಗಳು (Fans) ಗಾಬರಿಗೊಂಡಿದ್ದಾರೆ. ಉದ್ಯಮಿಗಳ ವಿರುದ್ಧ ಪ್ರತಿಭಟನೆಯೂ ಮಾಡುವಂತೆ ಸ್ನೇಹಾ ಅವರ ಪರ ನಿಂತಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. 

"

ದರ್ಶನ್ 'ಕುರುಕ್ಷೇತ್ರ'ದ ದ್ರೌಪದಿ ಸ್ನೇಹಾಳಿಗೆ ಸೀಮಂತದ ಸಂಭ್ರಮ!

ತಮಿಳು ಕುಟುಂಬದ ಸುಂದರಿ ಸ್ನೇಹಾ ಹುಟ್ಟಿದ್ದು ಮುಂಬೈನಲ್ಲಿ (Mumbai), ಬೆಳೆದ್ದು ದುಬೈನಲ್ಲಿ (Dubai). 2009ರಿಂದ ಸ್ನೇಹಾ ಮತ್ತು ಪ್ರಸನ್ನ (Prasanna) ರಿಲೇಷನ್‌ಶಿಪ್‌ನಲ್ಲಿ ಇರುವುದಾಗಿ ಸುದ್ದಿಯೊಂದು ಹರಿದಾಡುತ್ತಿತ್ತು, ಆದರೆ ಇಬ್ಬರು ಇದನ್ನು ಒಪ್ಪಿಕೊಳ್ಳದೆ ಸುಮ್ಮನಿದ್ದರು. ಮಾಧ್ಯಮ ಮತ್ತು ಅಭಿಮಾನಿಗಳ ಒತ್ತಾಯ ಹೆಚ್ಚಾಗುತ್ತಿದ್ದಂತೆ, ಪ್ರಸನ್ನ ಅವರು 2011ರಲ್ಲಿ ಹೌದು ಸ್ನೇಹಾ ನಾನು ಮದುವೆ ಅಗಲು ನಿರ್ಧರಿಸಿದ್ದೀವಿ. ನಮ್ಮ ಪೋಷಕರ ಆಶೀರ್ವಾದವಿದೆ ಈ ಸಂಬಂಧಕ್ಕೆ, ಎಂದು ಬರೆದುಕೊಂಡಿದ್ದರು. 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿಗೀಗ ಇಬ್ಬರು ಮುದ್ದಾದ ಮಕ್ಕಳಿವೆ. 

ಸ್ವಾತಂತ್ರ್ಯ ಕುರಿತು ವಿವಾದಾತ್ಮಕ ಹೇಳಿಕೆ: ಕಂಗನಾ ವಿರುದ್ಧ 7 ಪುಟಗಳ ದೂರು ದಾಖಲು!

ಇನ್ನು ಮಾಡಲಿಂಗ್ (Modeling) ಮೂಲಕ ಬಣ್ಣದ ಜರ್ನಿ ಆರಂಭಿಸಿದ ಸ್ನೇಹಾ ಅವರು ಕನ್ನಡದ ರವಿ ಶಾಸ್ತ್ರಿ (Ravi Shastry), ಒಗ್ಗರಣೆ ಮತ್ತು ಕುರುಕ್ಷೇತ್ರ (Kurukshetra) ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸ್ನೇಹಾ ಅವರು ಕನ್ನಡದ ಕಥೆ ಬಂದರೆ ಮಿಸ್ ಮಾಡದೆ ಕೇಳುತ್ತಾರಂತೆ.
 

Follow Us:
Download App:
  • android
  • ios