ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ವೇಗವಾಗಿ ಕಾರು ಚಲಾಯಿಸಿದ ಶರ್ಮಿಳಾ ಮಾಂಡ್ರೆ ಹಾಗೂ ಸ್ನೇಹಿತರು ಅಪಘಾತಕ್ಕೀಡಾಗಿದ್ದಾರೆ. ಅವರ ಕಾರಿನ  ಮೇಲಿದ್ದ ಪಾಸ್ ಎಲ್ಲರ ಗಮನ ಸೆಳೆದಿದೆ . 

ಕೊರೋನಾ ವೈರಸ್‌ ಈಗಾಗಲೇ ಮೂರನೇ ಹಂತ ತಲುಪಿರುವ ಕಾರಣ ಭಾರತ ಸರ್ಕಾರವೇ ಏಪ್ರಿಲ್‌ 14ರ ವರೆಗೂ ಲಾಕ್‌ಡೌನ್‌ ಘೋಷಣೆ ಮಾಡಿದೆ. ಈ ಸಂದರ್ಭದಲ್ಲಿ ದಿನದ ಅಗತ್ಯ ವಸ್ತುಗಳು ಹಾಗೂ ದಿನಸಿ ಲಭ್ಯವಿದ್ದು ಸಾರ್ವಜನಿಕರು ಅನಿವಾರ್ಯ ಪರಿಸ್ಥಿತಿ ಇದ್ದರೆ ಮಾತ್ರ ಹೊರಬಂದು ಕೊಳ್ಳಬಹುದು. ಅನಗತ್ಯವಾಗಿ ಜನರು ಹೊರಗಡೆ ಓಡಾಡುತ್ತಿರುವುದನ್ನು ಕಂಡ ಕರ್ನಾಟಕ ಸರ್ಕಾರ ಪಾಸ್‌ ವ್ಯವಸ್ಥೆ ಜಾರಿಗೆ ತಂದಿದ್ದು ಅದರ ಮೇಲೆ ಯಾವ ಸೌಲಭ್ಯಕ್ಕೆ ಎಂದು ಬರೆದಿರುತ್ತದೆ.

ಮನೆಯಲ್ಲಿರೋದ ಬಿಟ್ಟು, ಜಾಲಿ ರೈಡ್ ಹೋಗಿದ್ದಕ್ಕೆ ನಟಿಯ ಕಾರು ಅವಸ್ಥೆ ನೋಡಿ...!

ಕರ್ನಾಟಕ ಸರ್ಕಾರ ಇಷ್ಟೆಲ್ಲಾ ಭದ್ರತೆ ನೀಡಿ ಸಾರ್ವಜನಿಕರನ್ನು ಕೊರೋನಾ ವೈರಸ್‌ನಿಂದ ರಕ್ಷಿಸಲು ಹಗಲು ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದರೆ ಇತ್ತ ಕೆಲ ಸೆಲೆಬ್ರಿಟಿಗಳು ಪಾರ್ಟಿ ಮಾಡಿಕೊಂಡು ಮೋಜು ಮಸ್ತಿ ಮಾಡುತ್ತಿದ್ದಾರೆ. 

ಹೌದು! ಕೆಲ ದಿನಗಳ ಹಿಂದೆ ಕೊರೋನಾ ವೈರಸ್‌ ಬಗ್ಗೆ ಜಾಗ್ರತೆ ಮೂಡಿಸುವ ವಿಡಿಯೋವನ್ನು ಶರ್ಮಿಳಾ ಮಾಂಡ್ರೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದರು ಆದರೆ ಈಗ ಅವರೇ ರಾತ್ರಿ ಸ್ನೇಹಿತ ಲೋಕೇಶ್‌ ಜೊತೆ ಜಾಲಿ ರೈಡ್‌ ಗೆ ತೆರಳಿ ಅಪಘಾತ ಮಾಡಿಕೊಂಡಿದ್ದಾರೆ. ತನ್ನ ಜಾಗ್ವಾರ್‌ ಕಾರಿನಲ್ಲಿ ವಸಂತನಗರದ ಫ್ಲೈಓವರ್‌ನ ಪಿಲ್ಲರಿಗೆ ಡಿಕ್ಕಿ ಹೊಡೆದ ಕಾರು ಮುಂಭಾಗ ಪುಡಿಯಾಗಿದೆ. ತಕ್ಷಣ ಚಿಕಿತ್ಸೆ ಪಡೆಯಲು ಶರ್ಮಿಳಾ ಹಾಗೂ ಲೋಕೇಶ್‌ ವಿಕ್ರಂ ಆಸ್ಪತ್ರೆ ತೆರಳಿ ಆ ನಂತರ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಪರಾರಿ ಅಗಿದ್ದಾರೆ. ಈ ಘಟನೆಯಲ್ಲಿ ಶರ್ಮಿಳಾ ಮಾಂಡ್ರೆ ಮುಖಕ್ಕೆ ಫ್ರ್ಯಾಕ್ಚರ್‌ ಆಗಿದ್ದು ಲೋಕೇಶ್‌ ಬಲಗೈಗೆ ಪೆಟ್ಟಾಗಿದೆ.

ಈ ವೇಳೆ ಅಪಘಾತಕ್ಕೀಡಾದ ಕಾರ್‌ ಪೋಟೋ ವೈರಲ್ ಆಗಿದ್ದು ಕಾರಿನ ಮೇಲಿರುವ ಪಾಸ್‌ ಫೋಟೋ ಕೂಡ ವೈರಲ್ ಆಗಿದೆ. ಶರ್ಮಿಳಾ ಮಾಂಡ್ರೆ ಅವರಿಗೆ ಈ ಪಾಸ್‌ ಹೇಗೆ ಸಿಗ್ತು? ಇದು ಪ್ರತೀದಿನ ಸಾಮಾನು ಖರೀದಿ ಮಾಡಲು ನೀಡಿರುವ ಪಾಸ್‌ ಆದರೆ ಶರ್ಮಿಳಾ ಇದನ್ನು ಬಳಸಿಕೊಂಡು ತಡ ರಾತ್ರಿ ಪ್ರಯಾಣ ಮಾಡುವ ಅಗತ್ಯವೇನಿತ್ತು? ಎಂಬ ಹಲವು ಅನುಮಾನಗಳು ಶರ್ಮಿಳಾ ಮಾಂಡ್ರೆ ಸುತ್ತಾ ಸುತ್ತುಕೊಂಡಿದೆ. 

ಶರ್ಮಿಳಾ ಕಾರಿನ ಮೇಲೆ ಪಾಸ್‌ ಇದ್ದರೂ ಚಿಕಿತ್ಸೆ ಪಡೆದು ಪರಾರಿ ಆಗಿರುವುದೇಕೆ?

"