ಲಾಕ್‌ಡೌನ್‌ ನಡುವೆಯೂ ಸ್ನೇಹಿತರ ಜೊತೆ ಜಾಲಿ ರೈಡ್‌ ತೆರಳಿದ ನಟಿ ಶ್ರರ್ಮಿಳಾ ಮಾಂಡ್ರೆಯ ಜಾಗ್ವಾರ್‌ ಕಾರು ಅಪಘಾತಕ್ಕೀಡಾಗಿದೆ.

ದೇಶಾದ್ಯಂತ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಜನರು ಮನೆಯಲ್ಲೇ ಲಾಕ್‌ಡೌನ್‌ ಆಗಿದ್ದರೆ, ಇತ್ತ ಕೆಲವು ಸೆಲೆಬ್ರಿಟಿಗಳು ಮೋಜು ಮಸ್ತಿ ಮಾಡುತ್ತಿದ್ದಾರೆ. ಭಾರತ ಸರ್ಕಾರ ಕರೆ ನೀಡಿರುವ ಪ್ರಕಾರ ತುರ್ತು ಹಾಗೂ ಅಗತ್ಯ ಪರಿಸ್ಥಿತಿ ಇದ್ದರೆ ಮಾತ್ರ ಜನರು ಮನೆಯಿಂದ ಹೊರ ಬರಬೇಕು. ವಾಹನಗಳನ್ನು ಹೆಚ್ಚಾಗಿ ಬಳಸಬಾರದು. ಇದ ಸರಕಾರ ಜನರ ಆರೋಗ್ಯದ ದೃಷ್ಟಿಯಿಂದ ಮಾಡಿದ್ದೇ ಹೊರತು, ಯಾರ ವೈಯಕ್ತಿಕ ಲಾಭಕ್ಕೂ ಅಲ್ಲವೆಂಬುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇಂಥ ಸಂದರ್ಭದಲ್ಲಿ ತೆಪ್ಪಗೆ ಮನೆಯಲ್ಲಿದ್ದು, ಜನರಲ್ಲಿಯೂ ಈ ಬಗ್ಗೆ ಬಹುತೇಕ ನಟ, ನಟಿಯರು ಜಾಗೃತಿ ಮೂಡಿಸುವುದ ಬಿಟ್ಟು, ಈ ನಟಿ ಮಾಡಿದ್ದು ನೋಡಿ. ನಟಿ ಶರ್ಮಿಳಾ ಪಾರ್ಟಿ ಮೂಡ್‌ನಲ್ಲಿದ್ದಾರೆ. ಸ್ನೇಹಿತರೊಟ್ಟಿಗೆ ರಾತ್ರೋ ರಾತ್ರಿ ಜಾಲಿ ರೈಡ್ ಬೇರೆ ಹೋಗಿದ್ದಾರೆ. 

"

ಕ್ಯಾನ್ಸರ್ ರೋಗಿಗಳ ನೆರವಿಗೆ ನಿಂತ ‘ಸಜನಿ’ ನಟಿ!

ರಾತ್ರಿ ಸ್ನೇಹಿತ ಲೋಕೇಶ್‌ ಜೊತೆ ಕಾರಿನಲ್ಲಿ ಜಾಲಿ ರೈಡ್ ತೆರಳಿದ್ದಾರೆ. ವೇಗವಾಗಿ ಕಾರು ಚಲಾಯಿಸುತ್ತಿದ್ದ ಕಾರಣ ವಸಂತ್‌ ನಗರದ ಫ್ಲೈ ಓವರ್‌ ಕೆಳಗಿರುವ ಪಿಲ್ಲರ್‌ಗೆ ಶರ್ಮಿಳಾ ಜಾಗ್ವಾರ್‌ ಕಾರು ಡಿಕ್ಕಿ ಹೊಡೆದಿದೆ. ಶರ್ಮಿಳಾ ಹಾಗೂ ಲೋಕೇಶ್‌ ಸೀಟ್‌ ಬೆಲ್ಟ್‌ ಹಾಕದ ಕಾರಣ ಏರ್‌ಬ್ಯಾಗ್‌ ಓಪನ್‌ ಆಗಲಿಲ್ಲ ಎನ್ನಲಾಗಿದೆ. 

ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿದ್ದಾರೆ ಶರ್ಮಿಳಾ ಮಾಂಡ್ರೆ!

ಆಪಘಾತದಿಂದ ಶರ್ಮಿಳಾ ಮಾಂಡ್ರೆ ಮುಖಕ್ಕೆ ಪೆಟ್ಟಾಗಿದೆ ಹಾಗೂ ಲೋಕೇಶ್‌ ಅವರ ಬಲಗೈ ಫ್ಯಾಕ್ಚರ್‌ ಆಗಿದೆ. ತಕ್ಷಣವೇ ಚಿಕಿತ್ಸೆ ಪಡೆಯಲು ಪೋರ್ಟಿಸ್‌ ಆಸ್ಪತ್ರೆ ತೆರಳಿದ್ದಾರೆ. ಪ್ರಥಮ ಚಿಕಿತ್ಸೆ ನಂತರ ಇಬ್ಬರೂ ಅಲ್ಲಿಂದ ಪರಾರಿಯೂ ಆಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಆದೇಶ ಉಲ್ಲಂಘಿಸಿ ಮನೆಯಿಂದ ಹೊರ ಹೋಗಿದ್ದೂ ಅಲ್ಲದೇ, ಆಸ್ಪತ್ರೆಯಿಂದ ತಪ್ಪಿಸಿಕೊಂಡ ಈ ಜೋಡಿಯ ಪ್ರಕರಣವನ್ನು ಹೈಗ್ರೌಂಡ್‌ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಶರ್ಮಿಳಾ ಹಾಗೂ ಲೋಕೇಶ್ ಅವರನ್ನು ಹುಡುಕುತ್ತಿದ್ದಾರೆ.

"

ಧ್ಯಾನ್ ಜೊತೆ ಸಜನಿ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟ ಶರ್ಮಿಳಾ, ನಿರ್ಮಾಪಕರೂ ಹೌದು. ಗಣೇಶ್ ಅವರೊಂದಿಗೆ ನಟಿಸಿದ ಕೃಷ್ಣ ಹಿಟ್ ಆದ ಮೂವಿ.