'ಸಜನಿ' ಚಿತ್ರದ ಮೂಲಕ ಕನ್ನ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಶರ್ಮಿಳಾ ಮಾಂಡ್ರೆಗೆ ಕೊರೋನಾ ವೈರಸ್‌ ಇರುವುದು ದೃಢವಾಗಿದೆ. ಈ ಬಗ್ಗೆ ಸ್ವತಃ ಶರ್ಮಿಳಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸ್ವಿಮ್ ಸೂಟ್‌ನಲ್ಲಿ ಹಾಟ್ ಆಗಿದ್ದಾರೆ ಶರ್ಮಿಳಾ ಮಾಂಡ್ರೆ!

'ಎಲ್ಲರಿಗೂ ನಮಸ್ಕಾರ. ನಾನು ಹಾಗೂ ನನ್ನ ಕುಟುಂಬದ ಕೆಲವರಿಗೆ ಕೊರೋನಾ ಪಾಸಿಟಿವ್ ಇರುವುದಾಗಿ ತಿಳಿದು ಬಂದಿದೆ. ನಮಗೆ ರೋಗದ ಸಣ್ಣ ಪುಟ್ಟ ಲಕ್ಷಣಗಳು ಕಾಣಿಸಿಕೊಂಡಿತ್ತು. ಈ ಕಾರಣದಿಂದಾಗಿ ನಾವೆಲ್ಲರೂ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದೇವೆ. ವೈದ್ಯರ ಸಲಹೆ ಹಾಗೂ ಸೂಚನೆ ಮೇರೆಗೆ ಔಷಧಿಗಳನ್ನು ತೆಗೆದು ಕೊಳ್ಳುತ್ತಿದ್ದೀವಿ,' ಎಂದು ಬರೆದುಕೊಂಡಿದ್ದಾರೆ.

 

ನಟಿ ಶರ್ಮಿಳಾ ಮಾಂಡ್ರೆ ಒಂದಾದ ಮೇಲೊಂದು ಸಂಕಷ್ಟದಲ್ಲಿ ಸಿಲುಕಿ ಕೊಳ್ಳುತ್ತಿದ್ದಾರೆ. ಮೊದಲು ಕಠಿಣ ಲಾಕ್‌ಡೌನ್‌ ಇರುವಾಗಲೇ ಏಪ್ರಿಲ್‌ 4ರಂದು ನಡೆದ ಕಾರು ಅಪಘಾತದಲ್ಲೂ ಕೈ ಫ್ಯಾಕ್ಚರ್ ಮಾಡಿಕೊಂಡಿದ್ದರು. ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ. ಆನಂತರ ಇಂದ್ರಜಿತ್ ಲಂಕೇಶ್ ಸ್ಯಾಂಡಲ್‌ವುಡ್‌ನಲ್ಲಿ ನೆಡಯುತ್ತಿರುವ ಡ್ರಗ್ಸ್ ಮಾಫಿಯಾದ ವಿಚಾರಣೆಯಲ್ಲಿ 'ಇತ್ತೀಚಿಗೆ ಕಾರು ಅಪಘಾತವಾದ ನಟಿ' ಎಂಬ ಹೇಳಿಕೆ ನೀಡಿದ್ದಾರೆ. ಇದೀಗ ಕೊರೋನಾ ಪಾಸಿಟಿವ್ ಬಂದಿದ್ದು, ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.
 

ಶರ್ಮಿಳಾ ಮಾಂಡ್ರೆ ಖ್ಯಾತ ನಿರ್ಮಾಪಕ ಹಾಗೂ ವಿತರಕ ಅವರ ಪುತ್ರಿ. ಸುಮಾರು 15  ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹಾಗೂ ಸದ್ಯಕ್ಕೆ 'ಮೈಸೂರು ಮಸಾಲ' ಹಾಗೂ 'ಗಾಳಿಪಟ 2' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.