ಕ್ರಿಕೆಟ್‌ ದ್ವೇಷಿಯಾಗಿದ್ದೆ, ಸಿನಿಮಾ ನನ್ನನ್ನು ಬದಲಿಸಿತು: ನಟಿ ಸಾರಿಕಾ ರಾವ್

ಮಂಡ್ಯದ ಹುಡುಗಿಯೊಬ್ಬಳು ಜನಪ್ರಿಯ ಕ್ರಿಕೆಟ್‌ ಆಟಗಾರ್ತಿಯಾಗುವ ಕಥಾಹಂದರದ ‘ಸಹರಾ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಜೂ.7ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ನಾಯಕಿ ಸಾರಿಕಾ ರಾವ್, ‘ಈ ಸಿನಿಮಾ ಮಾಡುವ ಮೊದಲು ನನಗೆ ಕ್ರಿಕೆಟ್‌ ಬಗ್ಗೆ ದ್ವೇಷ ಇತ್ತು. 

Kannada Actress Sarika Rao Starrer New Movie Titled Sahara Based On Women Cricket gvd

ಮಂಡ್ಯದ ಹುಡುಗಿಯೊಬ್ಬಳು ಜನಪ್ರಿಯ ಕ್ರಿಕೆಟ್‌ ಆಟಗಾರ್ತಿಯಾಗುವ ಕಥಾಹಂದರದ ‘ಸಹರಾ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಜೂ.7ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ. ನಾಯಕಿ ಸಾರಿಕಾ ರಾವ್, ‘ಈ ಸಿನಿಮಾ ಮಾಡುವ ಮೊದಲು ನನಗೆ ಕ್ರಿಕೆಟ್‌ ಬಗ್ಗೆ ದ್ವೇಷ ಇತ್ತು. ಅದಕ್ಕೆ ಕಾರಣ ನನ್ನ ಅಣ್ಣ. ಆತ ಯಾವತ್ತೂ ನಂಗೆ ಬ್ಯಾಟಿಂಗ್‌, ಬೌಲಿಂಗ್‌ಗೆ ಅವಕಾಶ ಕೊಡದೇ ಫೀಲ್ಡಿಂಗ್‌ ಮಾತ್ರ ಮಾಡಿಸುತ್ತಿದ್ದ. ನಾನು ಬಾಲ್‌ ಹೆಕ್ಕಿ ತರಬೇಕಿತ್ತು. ಅದಕ್ಕೆ ನಂಗೆ ಕ್ರಿಕೆಟ್‌ ಬಗ್ಗೆ ದ್ವೇಷ ಬಂತು. ಆದರೆ ಈ ಸಿನಿಮಾದಲ್ಲಿ ಅವಕಾಶ ಸಿಕ್ಕ ಬಳಿಕ ಒಂದು ತಿಂಗಳ ಕಾಲ ಕ್ರಿಕೆಟ್‌ ತರಬೇತಿ ಪಡೆದೆ. ಆಗ ಕ್ರಿಕೆಟ್‌ ಮೇಲೆ ಪ್ರೀತಿ ಬೆಳೆಯಿತು’ ಎಂದರು.

ಸಿಂಪಲ್‌ ಸುನಿ, ‘ಈಗ ಹೆಣ್ಮಕ್ಕಳ ಕ್ರಿಕೆಟ್‌ಗೇ ಬೆಲೆ. ನಮಗೆ ಕಪ್‌ ತಂದುಕೊಟ್ಟೋರೆ ಅವರು. ಈ ಸಿನಿಮಾ ಟ್ರೇಲರ್‌ ಭರವಸೆ ಮೂಡಿಸುವಂತಿದೆ. ಈ ಸಿನಿಮಾಕ್ಕೆ ಒಂದು ಹಾಡನ್ನೂ ಬರೆದಿದ್ದೇನೆ’ ಎಂದರು. ಕ್ರಿಕೆಟಿಗ ಕೆ ಗೌತಮ್‌, ‘ರಿಯಲಿಸ್ಟಿಕ್‌ ಅಪ್ರೋಚ್‌ ಸಿನಿಮಾದಲ್ಲಿದೆ. ಚಾಲೆಂಜ್‌ಗಳು ಪ್ರತಿಯೊಬ್ಬರಿಗೂ ಇರುತ್ತದೆ. ನಾನು ಚಾಲೆಂಜ್‌ಗಳನ್ನು ಎನ್‌ಜಾಯ್‌ ಮಾಡ್ತೀನಿ’ ಎಂದರು. ನಿರ್ದೇಶಕ ಮಂಜೇಶ್‌ ಭಾಗವತ್‌, ಕಲಾವಿದ ಅಂಕುಶ್‌ ರಜತ್ ಹಾಗೂ ಚಿತ್ರತಂಡದವರಿದ್ದರು.

ಸಹಾರಾ ಸಿನಿಮಾ ಒಂದು ಕ್ರಿಕೆಟ್ ಕಥೆ ಇರೋ ಚಿತ್ರ ಅಂತ ಗೊತ್ತೇ ಆಗುತ್ತದೆ. ಆದರೆ ಅದರ ಒಳಗೆ ಇನ್ನೂ ಒಂದು ಅಪ್ಪಟ ಕ್ರಿಕೆಟ್ ಅಭಿಮಾನಿಯ ಕಥೆ ಇದೆ. ಈ ಕ್ರಿಕೆಟ್ ಅಭಿಮಾನಿಗೆ ಗಂಡು ಮಗು ಹುಟ್ಟಿದರೆ, ಕ್ರಿಕೆಟ್ ಆಟಗಾರನಾಗಿಸಬೇಕು ಅನ್ನುವ ಮನಸು ಇದೆ. ಆದರೆ ಅಲ್ಲಿ ಗಂಡು ಮಗು ಹುಟ್ಟೋದಿಲ್ಲ. ಬದಲಾಗಿ ಹೆಣ್ಣು ಮಗು ಹುಟ್ಟುತ್ತದೆ. ಈ ಒಂದೇ ಒಂದು ಕಾರಣಕ್ಕೆ ಅಪ್ಪನ ಆಸೆ ನುಚ್ಚು ನೂರು ಆಗುತ್ತದೆ. ಆದರೆ ಆ ಹುಡುಗಿ ಮುಂದೆ ಏನ್ ಮಾಡುತ್ತಾಳೆ. ಕ್ರಿಕೆಟರ್ ಆಗ್ತಾಳಾ..? ಇಲ್ವೇ ಅಪ್ಪನ ಏಟಿಗೆ ನಲುಗಿ ಹೋಗುತ್ತಾಳಾ..? ಎಲ್ಲದರ ಝಲಕ್ ಟ್ರೈಲರ್‌ನಲ್ಲಿ ರಿವೀಲ್ ಆಗಿದೆ. 

ಕತೆಯೇ ಮುಖ್ಯ, ಕತೆ ಇಲ್ಲದೆ ಸ್ಟಾರ್‌ ಸಿನಿಮಾ ಆಗಲ್ಲ: ರವಿಚಂದ್ರನ್‌, ಧ್ರುವ ಸರ್ಜಾ ಹೇಳಿದ್ಧೇನು?

ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆ ಇಲ್ಲಿದೆ. ಈ ಒಂದು ಮಂಡ್ಯ ಹುಡುಗಿಯ ಪಾತ್ರದಲ್ಲಿ ಸಾರಿಕಾ ರಾವ್ ಅಭಿನಯಿಸಿದ್ದಾರೆ. ಈ ಒಂದು ಪಾತ್ರಕ್ಕಾಗಿ ಕ್ರಿಕೆಟ್ ಅನ್ನ ಸೀರಿಯೆಸ್ ಆಗಿಯೇ ಕಲಿತುಕೊಂಡಿದ್ದಾರೆ. ರಿಯಲ್ ಕ್ರಿಕೆಟರ್ ರೀತಿಯಲ್ಲಿಯೇ ಕ್ರಿಕೆಟ್ ಕೂಡ ಆಡಿದ್ದಾರೆ. ಮಹಿಳಾ ಕ್ರಿಕೆಟ್ ಆಧರಿಸಿದ ಈ ಚಿತ್ರಕ್ಕೆ ಪಿ.ಆರ್.ಸಂಸ್ಥೆ ಸಪೋರ್ಟ್ ಮಾಡಿದೆ. ಆಡಿಯೋ ಹಕ್ಕನ್ನು ಕೂಡ ಪಡೆದುಕೊಂಡಿದೆ. ಕೆ.ಆರ್.ಜಿ.ಸಂಸ್ಥೆಯ ಈ ಚಿತ್ರವನ್ನ ವಿತರಿಸೋಕೆ ಮುಂದೆ ಬಂದಿದೆ. ನಿರ್ದೇಶಕ ಮಂಜೇಶ್ ಭಗವತ್ ಈ ಚಿತ್ರವನ್ನ ತುಂಬಾನೆ ಪ್ರೀತಿಯಿಂದಲೇ ಮಾಡಿದ್ದಾರೆ. ಅಷ್ಟೆ ತೊಂದರೆಗಳನ್ನೂ ಕೂಡ ಎದುರಿಸಿದ್ದಾರೆ.

Latest Videos
Follow Us:
Download App:
  • android
  • ios