ಭೀಕರ ಅಪಘಾತದಲ್ಲಿ ಕಾಲಿಗೆ ಪೆಟ್ಟು ಮಾಡಿಕೊಂಡ ರಿಷಿಕಾ ಸಿಂಗ್. ಕುಡಿದ ಮತ್ತಿನಲ್ಲಿ ಹೀಗಾಯ್ತು ಎಂದು ಕಾಮೆಂಟ್ ಮಾಡುವವರಿಗೆ ಘಟನೆ ವಿವರಿಸಿದ ರಿಷಿಕಾ ಸಿಂಗ್.... 

ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ನಾಯಕಿ ಎಂದು ಗುರುತಿಸಿಕೊಂಡಿರುವ ರಿಷಿಕಾ ಸಿಂಗ್ ಎರಡು ವರ್ಷಗಳ ನಂತರ ಜನರ ಮುಂದೆ ಕಾಣಿಸಿಕೊಂಡಿದ್ದಾರೆ. ಭೀಕರ ಕಾರು ಅಪಘಾತದಲ್ಲಿ ಬೆನ್ನು ಮೂಲೆಗೆ ಪೆಟ್ಟು ಮಾಡಿಕೊಂಡು ಎರಡು ವರ್ಷಗಳ ಕಾಲ ಬೆಡ್‌ ರೆಸ್ಟ್‌ನಲ್ಲಿದ್ದು ಫಿಸಿಯೋಥೆರಪಿ ಮೂಲಕ ಓಡಾಡಲು ಶುರು ಮಾಡಿದ್ದಾರೆ. ರಿಷಿಕಾ ಚೇತರಿಕೆ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್‌ ಮಾಡಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. 

'ಆಲ್ಕೋಹಾಲ್ ಬಗ್ಗೆ ಜನರಿಗೆ ತಪ್ಪು ಕಲ್ಪನೆ ಈ ಜಗತ್ತಿನಲ್ಲಿದೆ. ಆಲ್ಕೋಹಾಲ್ ತಪ್ಪಲ್ಲ ಅದನ್ನು ಓವರ್ ಆಗಿ ಮಾಡಿದ್ದರೆ ತಪ್ಪು. ಮುಸ್ಲಿಂಗಳಿಗೆ ಅದು ತಪ್ಪು ಅವರ ಜಾತಿಯಲ್ಲಿ ಬಿಡುವುದಿಲ್ಲ ಅವರಿಗೆ ಅದು ಸರಿ ಅಲ್ಲ ಆದರೆ ಹಿಂದುಗಳಿಗೆ ಆಯ್ಕೆಗಳಿದೆ. ವೈನ್ ಮುಟ್ಟಬೇಕು ಬೇಡ ಅನ್ನೋ ಆಯ್ಕೆ ಮಾಡುವ ಅವಕಾಶ ನಮಗಿದೆ. ದೇವರೇ ನಮಗೆ ಆ ಆಯ್ಕೆ ಕೊಟ್ಟಾಗ ಅದನ್ನು ಕಿತ್ತಿಕೊಳ್ಳಲು ಜನರು ಯಾರು? ಸೋಮರಸ ರಾಮರಸ ಅಂತ ದೇವಾನುದೇವತೆಗಳ ಕಾಲದಿಂದ ಇದೆ. ಕ್ರಿಶ್ಚಿಯನ್‌ಗಳು ಕುಡಿಯುತ್ತಾರೆ. ಹೀಗಾಗಿ ಆಲ್ಕೋಹಾಲ್ ತಪ್ಪಲ್ಲ ಆದರೆ ಜವಾಬ್ದಾರಿ ಇಲ್ಲದೆ ಕುಡಿಯುವುದು ತಪ್ಪು. ನನ್ನ ಜೀವನದಲ್ಲಿ ಒಂದು ದಿನವೂ ಕುಡಿದು ಗಾಡಿ ಓಡಿಸಿಲ್ಲ, ನಾನು ಓಡಿಸುವಾಗ ಗಾಡಿ ಮೇಲೆ ಸಣ್ಣ ಸ್ಕ್ರ್ಯಾಚ್‌ ಕೂಡ ಮಾಡಿಸಿಲ್ಲ. ಈ ಅಪಘಾತದಲ್ಲಿ ನಾನು ಗಾಡಿ ಓಡಿಸಿಲ್ಲ ನನ್ನ ಸ್ನೇಹಿತ ಗಾಡಿ ಓಡಿಸುತ್ತಿದ್ದ ಅವನಿಗೆ ಕುಡಿಯುವ ಅಭ್ಯಾಸವಿಲ್ಲ. 6 ಗಂಟೆ ವರೆಗೂ ಅವನು ಎದ್ದಿದ್ದ ಹೀಗಾಗಿ ಗಾಡಿ ಓಡಿಸುವ ನಿದ್ರೆಗೆ ಜಾರಿ ಆಪಘಾತವಾಗಿರುವುದು' ಎಂದು ರಿಷಿಕಾ ಸಿಂಗ್ ಖಾಸಗಿ ವೆಬ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

'ಕೊರೋನಾ ಸಮಯದಲ್ಲಿ ಈ ರೀತಿ ಸಣ್ಣ ಪಾರ್ಟಿ ಇದ್ದರೂ ಬೋನ್‌ನಿಂದ ಹೊರ ಬಿಟ್ಟಂತೆ ಆಗುತ್ತದೆ. ಇಡೀ ಫ್ಯಾಮಿಲಿ ಪಾರ್ಟಿ ಮಾಡುತ್ತಿದ್ದರು. 3 ಗಂಟೆಗೆ ಎಲ್ಲರೂ ಹೊರಟರು ನನಗೆ ಬೆಳಗ್ಗೆ ಬರಲು ಹೇಳಿದ್ದರು ಅಷ್ಟರಲ್ಲಿ ಆನ್‌ಲೈನ್‌ ಶೂಟ್‌ ಇದೆ ಎಂದು ಕರೆ ಬಂತು ಅದಿಕ್ಕೆ ನಾನು ರಾತ್ರಿನೇ ಅಲ್ಲಿಂದ ಹೊರಟೆ. ನನ್ನ ಫ್ರೆಂಡ್‌ಗೆ ಒತ್ತಾಯ ಮಾಡಿ ಕಾರಿನಲ್ಲಿ ಕರೆದುಕೊಂಡು ಹೊರಟೆ, ಅರ್ಪಿತಾ ಅಲ್ಲಿ ಊಟ ಮಾಡುತ್ತಿದ್ದಳು ನಾವು ಹೊರಡುತ್ತಿರುವುದನ್ನು ನೋಡಿ ತಟ್ಟೆ ಎತ್ತುಕೊಂಡು ಕಾರಿನಲ್ಲಿ ತಿನ್ನುತ್ತಿದ್ದರು. ನನ್ನ ಸ್ನೇಹಿತರನಿಗೆ ನಿದ್ರೆ ಕಣ್ಣು ಅದು ಆಟೋಮ್ಯಾಟಿಕ್ ಕಾರು ಆಗಿದ್ದ ಕಾರಣ ಬ್ರೇಕ್ ಮೇಲೆ ಕಾಲು ಇಡುವ ಬದಲು ಆಕ್ಸಿಲೇಟರ್ ಮೇಲೆ ಕಾಲಿಟ್ಟ ಫುಲ್ ಸ್ಪೀಡ್‌ನಲ್ಲಿ 180 ದಾಟಿ ಈ ಅಪಘಾತವಾಗಿದ್ದು. ಸಾಮಾನ್ಯವಾಗಿ ನಾನು ಸೀಟ್‌ ಬೆಲ್ಟ್‌ ಇಲ್ಲದೆ ಕಾರು ಓಡಿಸುವುದಿಲ್ಲ ಆದರೆ ಅವತ್ತು ಸೀಟ್‌ ಬೆಲ್ಟ್‌ ಹಾಕಿಕೊಳ್ಳದೆ ಕಾರಿನಲ್ಲಿ ಕುಳಿತುಕೊಂಡ ತಕ್ಷಣ ನಿದ್ರೆ ಮಾಡಿಬಿಟ್ಟೆ. ಅಪಘಾತ ಆಗಿದ್ದು ನನಗೆ ಗೊತ್ತಿಲ್ಲ ನಾನು ಕಣ್ಣು ಬಿಟ್ಟಾಗ ಆಂಬ್ಯುಲೆನ್ಸ್ನ್‌ನಲ್ಲಿದ್ದೆ. ಈ ಘಟನೆ ಆಕಸ್ಮಿಕವಾಗಿ ಆಗಿದ್ದು. ಇದರಿಂದ ಆಯ್ತು ಅದರಿಂದ ಆಯ್ತು ಅನ್ನೋದು ಕೇವಲ ಮಾತುಗಳು. ನಾವು ರಜ್‌ಪುತ್‌ ಒಂದು ಬಾಟಲ್ ಓಪನ್ ಆಗಿಲ್ಲ ಅಂದ್ರೆ ಅದು ಪಾರ್ಟಿನೇ ಅಲ್ಲ. ಕುಡಿದು ಗಾಡಿ ಓಡಿಸುವುದು ಅಂದ್ರೆ ಎರಡು ಸಲ ಓಡಿಸಿರುವೆ ಆದರೆ ಆಗ ಗಾಡಿಗೆ ಏನೂ ಆಗಿಲ್ಲ. ಆಗಬೇಕು ಅಂತ ಇದ್ರೆ ಕುಡಿದು ಆಗಬೇಕು ಅಂತೇನು ಇಲ್ಲ. ವಿಧಿ ಸರಿ ಇಲ್ಲ ಅಂದ್ರೆ ಕುಡಿದಿಲ್ಲ ನೀವು ಜಪಾ ಮಾಡುತ್ತಿದ್ದರೂ ಭೂಕಂಪ ಆಗಿ ಕೆಳಗೆ ಹೋಗಿಬಿಡುತ್ತೀರಿ' ಎಂದು ರಿಷಿಕಾ ಹೇಳಿದ್ದಾರೆ. 

ಎರಡೂವರೆ ವರ್ಷದ ಬಳಿಕ ಹಾಸಿಗೆಯಿಂದ ಎದ್ದು ಬಂದ ನಟಿ ರಿಷಿಕಾ; ವಿಡಿಯೋ ವೈರಲ್

'ಇಂಸ್ಟ್ರಿಯಲ್ಲಿ ನನಗೆ ಜಾಸ್ತಿ ಫ್ರೆಂಡ್ಸ್‌ ಇಲ್ಲ ಏಕೆಂದರೆ ದಿನ ಬೆಳಗ್ಗೆ ನಿಜ ಜೀವನದಲೂ ನಾಟನ ಮಾಡಿದ್ದರೆ ಸಿಟ್ಟು ಬರುತ್ತದೆ. ನನಗೆ ಕೆಲವು ಸ್ನೇಹಿತರು ಸಂಪರ್ಕ ಮಾಡಿದ್ದರು. 6 ತಿಂಗಳುಗಳ ಕಾಲ ಫೋನ್‌ ಆಫ್‌ ಮಾಡಿಟ್ಟು ಆರೋಗ್ಯದ ಕಡೆ ಗಮನ ಕೊಟ್ಟೆ. ನನ್ನ ಅಣ್ಣ ಆದಿತ್ಯ, ತಂದೆ- ತಾಯಿಗೆ ಜನರು ಕರೆ ಮಾಡಿ ವಿಚಾರಿಸಿದ್ದಾರೆ. ರಕ್ಷಿತಾ ಅವರು ಮೊದಲು ಕರೆ ಮಾಡಿ ಹೇಗಾದರೂ ಮಾಡಿ ರಿಷಿಕಾ ಓಡಾಡುವಂತೆ ಮಾಡು ಎನ್ನುತ್ತಿದ್ದರು. ನನ್ನ ಇಡೀ ಕುಟುಂಬ ನನಗೆ ಸ್ಪೇಸ್‌ ಕೊಟ್ಟರು. ಯಾರು ಯಾರು ಕರೆ ಮಾಡಿದ್ದರು ಎಂದು 8 ತಿಂಗಳು ನಂತರ ತಿಳಿಯಿತ್ತು. ನನಗೆ ನಾನೇ ಮುಖ್ಯ ಆರೋಗ್ಯ ಮುಖ್ಯ ಎಂದು ಅರ್ಥ ಮಾಡಿಕೊಂಡು ಫೋನ್‌ನಿಂದ ದೂರ ಉಳಿದುಬಿಟ್ಟೆ' ಎಂದಿದ್ದಾರೆ ರಿಷಿಕಾ.