ನಟಿ ರಾಗಿಣಿ ಮತ್ತೊಮ್ಮೆ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಚಿತ್ರಗಳಲ್ಲಿ ಖಾಕಿ ತೊಟ್ಟಿರುವ ರಾಗಿಣಿ, ಈಗ ‘ಮಿಸ್ಟರ್‌ ಜಾನಿ ವಾಕರ್‌’ ಚಿತ್ರದಲ್ಲಿ ಪೊಲೀಸ್‌ ವೇಷದಲ್ಲಿ ದರ್ಶನ ಕೊಡಲು ಹೊರಟಿದ್ದಾರೆ. 

ನಿರ್ದೇಶಕ ಮಫ್ತಿ ನರ್ತನ್‌ ಜತೆ ಕೆಲಸ ಮಾಡಿರುವ ವೇದಿಕ್‌ ವೀರ್‌ ನಿರ್ದೇಶನದ ಈ ಚಿತ್ರವನ್ನು ರಂಜನ್‌ ಹಾಸನ್‌ ನಿರ್ಮಿಸುತ್ತಿದ್ದಾರೆ. ಇದೊಂದು ಕ್ರೈಮ್‌ ಥ್ರಿಲ್ಲರ್‌ ಚಿತ್ರವಾಗಿದೆ. ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಅಭಯ್‌, ಜಾನಿ ವಾಕರ್‌ ಪಾತ್ರ ಮಾಡುತ್ತಿದ್ದಾರೆ. ಇದ್ದಕ್ಕಿದ್ದಂತೆ ನಗರದಲ್ಲಿ ಕೆಲವು ಸರಣಿ ಕೊಲೆಗಳು ನಡೆಯುತ್ತವೆ. ಕೊಲೆಯಾದವನು ಯಾರು, ಯಾವ ಕಾರಣಕ್ಕಾಗಿ ಕೊಲೆ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಒಬ್ಬರು ಖಡಕ್‌ ಪೊಲೀಸ್‌ ಅಧಿಕಾರಿ ಆಗಮಿಸುತ್ತಾರೆ. ಆ ಪೊಲೀಸ್‌ ಪಾತ್ರವನ್ನೇ ನಟಿ ರಾಗಿಣಿ ನಿಭಾಯಿಸುತ್ತಿದ್ದಾರೆ.

'ಜಾನಿ ವಾಕರ್' ಚಿತ್ರದ ತನಿಖಾಧಿಕಾರಿ ಪಾತ್ರದಲ್ಲಿ ರಾಗಿಣಿ ದ್ವಿವೇದಿ; ಇದು ಹೊಸ ಸಿನಿಮಾ? 

ರಾಗಿಣಿಯ ಕೆನ್ನೆ ಕಚ್ಚಿದ ತುಂಟ..! ಮುದ್ದಾದ ವಿಡಿಯೋ ಪೋಸ್ಟ್ ಮಾಡಿದ ನಟಿ 

ಈಗಷ್ಟೆನಿರ್ದೇಶಕ ನರ್ತನ್‌ ಅವರೇ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಇದೊಂದು ವಿಶೇಷವಾದ ಕತೆ. ನನ್ನ ಪಾತ್ರ ಕೂಡ ಕುತೂಹರಕಾರಿಯಾಗಿದೆ. ಕೊಲೆಗಳನ್ನು ಪತ್ತೆ ಹಚ್ಚಲು ಬರುವ ನನ್ನ ಪಾತ್ರಕ್ಕೂ, ಕೊಲೆ ಮಾಡುತ್ತ ಹೋಗುವ ಆರೋಪಿ ಪಾತ್ರದ ನಡುವೆ ಇರುವ ಸಂಬಂಧವನ್ನು ತುಂಬಾ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ ನಟಿ ರಾಗಿಣಿ. ವಿನುಮನಸು ಸಂಗೀತ, ಕೃಷ್ಣ ನಾಯ್ಕರ್‌ ಕ್ಯಾಮೆರಾ ಚಿತ್ರಕ್ಕಿದೆ.