ಕಳೆದ ವರ್ಷ ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸರಳವಾಗಿ ಹುಟ್ಟಿದಬ್ಬವನ್ನು ಆಚರಿಸಿಕೊಂಡಿದ್ದರು. ಆದರೆ, ಈ ವರ್ಷ ಈ ಸ್ಟಾರ್ ನಟರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಿಕೊಂಡರು. ಆದರೆ, ರಾಧಿಕಾ ಪಂಡಿತ್ ಹುಟ್ಟಿದಬ್ಬವನ್ನು ಮಾತ್ರ ಸರಳವಾಗಿ ಆಚರಿಸುವಂತೆ ಅಭಿಮಾನಿಗಳಿಗೆ ಯಶ್ ಕರೆ ನೀಡಿದ್ದಾರೆ. ಎರಡು ಮುದ್ದಾದ ಮಕ್ಕಳು ಹಾಗೂ ಪೋಷಕರೊಂದಿಗೆ ಅವರು ಹುಟ್ಟಿದಬ್ಬವನ್ನು ಆಚರಿಸಿಕೊಳ್ಳುತ್ತಾರೆ ಎಂದಿದ್ದೇಕೆ?

10 ವರ್ಷದ ಲವ್ವಲ್ಲಿ ಈ ಎರಡನ್ನೂ ಕಳೆದು ಕೊಂಡ್ರಂತೆ ರಾಧಿಕಾ ಯಶ್!

ಸ್ಯಾಂಡಲ್‌ವುಡ್‌ 'ಮೊಗ್ಗಿನ ಮನಸ್ಸಿ'ನ ಹುಡುಗಿ, 'ಗಜ ಕೇಸರಿ' ಹೃದಯ ಕದ್ದ ಸಿಂಡ್ರೆಲಾ ರಾಧಿಕಾ ಪಂಡಿತ್ ಮಾರ್ಚ್‌ 7ರಂದು 35ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ನಂತರದಿಂದ ರಾಧಿಕಾ ಪ್ರತಿ ವರ್ಷವೂ ಹುಟ್ಟು ಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರೆ. ಆದರೆ ಈ ವರ್ಷ ಮನೆಯಲ್ಲಿ ಇಬ್ಬರು ಮಕ್ಕಳು (ಐರಾ ಮತ್ತು ಜೂನಿಯರ್ ಯಶ್) ಹಾಗೂ ಕೊರೋನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ಯಶ್ ಹೇಳಿದ್ದು, ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

'ಓಬೆರಾಯನ' ಸಿನಿಮಾ ಪೋಸ್ಟರ್‌ ಬಿಡುಗಡೆ ಮಾಡಿದ ರಾಕಿ ಬಾಯ್‌, ಸಂಜೆ ನಾನು, ರಾಧಿಕಾ ಎಲ್ಲಿಯಾದರೂ ಹೋಗಿ, ಒಟ್ಟಿಗೆ ಕಾಲ ಕಳೆಯುತ್ತೇವೆ' ಎಂದೂ ಹೇಳಿದ್ದಾರೆ.

ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ

'ಕೊರೋನಾ ವೈರಸ್‌' ಹರಡುತ್ತಿರುವುದರಿಂದ ಎಲ್ಲರಿಗೂ ಹ್ಯಾಂಡ್‌ ಶೇಕ್‌ ಮಾಡೋ ಬದಲು ಭಾರತೀಯ ಸಂಸ್ಕೃತಿ ಪ್ರತೀಕವಾದ ನಮಸ್ತೇ ಮಾಡಿ, ನಿಮ್ಮ ಆರೋಗ್ಯ ಸರಿಯಿಲ್ಲವೆಂದರೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ, ತುಂಬಾ ಜನರು ಇರುವೆಡೆ ಸೇರಬೇಡಿ, ಎಂದು ಯಶ್ ಎಲ್ಲರಿಗೂ ಸಲಹೆ ನೀಡಿದ್ದಾರೆ.

ಅತ್ತ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಹ ಕರೋನಾ ಹರಡದಂತೆ, ಮತ್ತೊಬ್ಬರನ್ನು ಗ್ರೀಟ್ ಮಾಡಲು ನಮಸ್ತೇ ಮಾಡಿ ಎಂದು ಹೇಳಿ ಪೋಸ್ಟ್ ಮಾಡಿರುವ ಇನ್‌ಸ್ಟಾಗ್ರಾಂ ಪೋಸ್ಟ್ ವೈರಲ್ ಆಗುತ್ತಿದೆ. 

"

ಮಾರ್ಚ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ