ಸ್ಯಾಂಡಲ್‌ವುಡ್ ರಾಕಿಂಗ್‌ ಕಪಲ್ ಅಂದ್ರೆ ರಾಧಿಕಾ ಪಂಡಿತ್‌ ಮತ್ತು ಯಶ್‌. ಈ ಜೋಡಿ ಎಷ್ಟೋ ಅಭಿಮಾನಿಗಳಿಗೆ ಸ್ಪೂರ್ತಿ. ಇವರಿಬ್ಬರೂ ಶೇರ್‌ ಮಾಡುವ ಫೋಟೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ. 

'ಇದು ನಮ್ಮ 10ನೇ ವ್ಯಾಲೆಂಟೈನ್ಸ್‌ ಡೇ. ಮೊದಲೆರೆಡು ವರ್ಷದ ಫೋಟೋ ಮಿಸ್ ಆಗಿವೆ. ಹಾಗಾಗಿ ಇದು ನಮ್ಮ 8 ವರ್ಷಗಳ ಸೆಲೆಬ್ರೇಷನ್‌ ಫೋಟೋಗಳು ಮಾತ್ರ ಇಲ್ಲಿವೆ. ನಮ್ಮ ಫೇವರೆಟ್‌ ಫೋಟೋ ಯಾವುದು ಎಂದು ಹೇಳಲು ಈ ಸಲ ಕಷ್ಟವಾಗುವುದಿಲ್ಲ. ಅದೇ ನಮ್ಮ ಕೈ ಹಿಡಿದು ನಿಂತಿರುವ ಪುಟ್ಟ ಕಂದಮ್ಮ. ಹ್ಯಾಪಿ ವ್ಯಾಲೆಂಟೈನ್ಸ್‌ ಡೇ. ಜೂನಿಯರ್‌ ಯಶ್‌ ಕೂಡ ಈ ವರ್ಷದ ಸೆಲೆಬ್ರೇಶನ್‌ನಲ್ಲಿದ್ದಾನೆ. ಆದರೆ ಫೋಟೋದಲ್ಲಿಲ್ಲ ' ಎಂದು ರಾಧಿಕಾ ಪಂಡಿತ್‌ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖುಷಿಯನ್ನು, ಸವಿ ಸವಿ ನೆನಪನ್ನು ಹಂಚಿಕೊಂಡಿದ್ದಾರೆ. 

ಡಿಸೆಂಬರ್‌ 9,2016ರಂದು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯಶ್-ರಾಧಿಕಾ ಪಂಡಿತ್‌ ತಮ್ಮ ಕುಟುಂಬಕ್ಕೆ ಲಿಟಲ್‌ ಪ್ರಿನ್ಸೆಸ್‌ನನ್ನು ಡಿಸೆಂಬರ್‌ 2,2018ರಂದು ಬರ ಮಾಡಿಕೊಂಡರು. ಹಾಗೂ ಅಕ್ಟೋಬರ್‌ 30,2019ರಂದು ಜೂನಿಯರ್‌ ಯಶ್‌ರನ್ನೂ ಬರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಐರಾ ತಮ್ಮನನ್ನು ನೋಡಲು ಚಾತಕ ಪಕ್ಷಿಯಂತೆ ಕಾತುರದಿಂದ ಕಾಯುತ್ತಿದ್ದು, ಶೀಘ್ರದಲ್ಲಿಯೇ ಫೋಟೋ ರಿವೀಲ್ ಮಾಡಬಹುದೆಂಬ ಕುತೂಹಲದಲ್ಲಿದ್ದಾರೆ.

ಐರಾ ಉಗುರು ಕತ್ತರಿಸಿದ ರಾಧಿಕಾ ಪಂಡಿತ್, ಮುದ್ದಾದ ವಿಡಿಯೋ ನೋಡಿ

ಇತ್ತೀಚಿಗೆ ಐರಾಗೆ ರಾಧಿಕಾ ನೇಲ್‌ ಕಟ್ಟಿಂಗ್‌ ವಿಡಿಯೋ ವೈರಲ್‌ ಅಗಿತ್ತು. 'ತುಂಬಾ ದಿನಗಳಿಂದ ಎಲ್ಲರೂ ಐರಾ ಫೋಟೋ ಅಥವಾ ವಿಡಿಯೋ ಶೇರ್ ಮಾಡಿ ಎಂದು ಕೇಳುತ್ತಿದ್ದೀರಿ. ಅದಕ್ಕೆ ಐರಾ ನೇಲ್‌ ಕಟ್ಟಿಂಗ್‌ನೂ ಎಷ್ಟು ಎಂಜಾಯ್‌ ಮಾಡುತ್ತಾಳೆ ನೋಡಿ... '. ಉಗುರು ಕಟ್ ಮಾಡುವುದಕ್ಕೆ ಕಿಲ ಕಿಲ ನಗುವ ಮುದ್ದು ಮುಖದ ಐರಾಳ ಹಳೇ ವೀಡಿಯೋವೊಂದನ್ನು ಶೇರ್ ಮಾಡಿ ಕೊಂಡಿದ್ದರು.