ಸ್ಯಾಂಡಲ್‌ವುಡ್‌ ಸಿಂಡ್ರೆಲಾ, ರಾಕಿ ಬಾಯ್‌ ಲವ್ಲಿ ಪತ್ನಿ ರಾಧಿಕಾ ಪಂಡಿತ್ ಈಗ ಇಬ್ಬರು ಮುದ್ದಾದ ಮಕ್ಕಳ ತಾಯಿ. ಇತ್ತೀಚಿನ ವರ್ಷಗಳಿಂದ ರಾಧಿಕಾ ಮದರ್ಸ್‌ ಡೇಗೆ ಏನಾದರೂ ಒಂದು  ವಿಶೇಷ ವಿಚಾರ ಅಥವಾ ಫೋಟೋವನ್ನು ರಿವೀಲ್ ಮಾಡುತ್ತಾರೆ.  ತಾಯಿ ಆಗುವ ಮೊದಲು ತನ್ನ ತಾಯಿಗೆ ವಿಶ್‌ ಮಾಡುತ್ತಿದ್ದರು,ಕಳೆದ ವರ್ಷ ಐರಾ ಕುಟುಂಬಕ್ಕೆ ಆಗಮಿಸಿ ರಾಧಿಕಾಳಿಗೂ ಮದರ್‌ವುಡ್‌ಗೆ ಪ್ರಮೋಷನ್‌ ನೀಡಿದ್ದಾರೆ. ಈ ವರ್ಷ ಜೂನಿಯರ್‌ ಯಶ್‌ ಸೇರಿಕೊಂಡು ಇನ್ನೂ  ಸ್ಪೆಷಲ್‌ ಮಾಡಿದ್ದಾರೆ.  

ಮದರ್‌ವುಡ್‌ ಬಗ್ಗೆ ರಾಧಿಕಾ ಮಾತು:

'ನಾವು ಮಾಡುತ್ತಿರುವುದು ಸುಲಭದ ಕೆಲಸವಲ್ಲ.ನಾನು ಅನುಭವಿಸುತ್ತಿರುವ ಕಾರಣದಿಂದ ಇದನ್ನು ಹೇಳುತ್ತಿರುವೆ. ಸ್ಟ್ರೇಚ್‌ ಮಾರ್ಕ್‌, ಟಮ್ಮಿ ಫ್ಯಾಟ್‌, ಡಾರ್ಕ್‌ ಸರ್ಕಲ್‌, ನಿದ್ರಾ ಹೀನತೆ, ಸುಸ್ತು, ಮಲ್ಟಿ ಟಾಸ್ಕಿಂಗ್ ಮಾಡುವುದು, ಮೂಡ್ ಸ್ವಿಂಗ್ ಆಗುವುದು ಹಾಗೂ ಇನ್ನೇನು ಉಳಿದಿಲ್ಲ ಹೇಳಿ? ಆದರೆ ಇದೆಲ್ಲವೂ ನಮಗೆ ತಾಯಿ ಆಗುವುದರಿಂದ ಸಿಗುವ ಬೆಲೆ ಕಟ್ಟಲಾಗದ ಅನುಭವ. ನಮ್ಮ ತಾಯಿಯಂದಿರು ಅನುಭವಿಸಿದ ಹಾಗೆ.  ನನ್ನ ತಾಯಿಯ ಅರ್ಧದಷ್ಟಾದರೂ ಒಳ್ಳೆಯವಳಾಗಿರಲು ನಾನು ಪ್ರಯತ್ನ ಪಡುತ್ತಿದ್ದೇನೆ. ನಾನು ಈ ಕೆಲಸಗಳನ್ನು ಮಾಡುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತೇನೆ ಆದರೂ ಪರ್ವಾಗಿಲ್ಲ ಅದರಿಂದ ಪಾಠ ಕಲಿತು ತಿದ್ದಿಕೊಳ್ಳುವೆ. ನಾನು ಈಗಷ್ಟೇ ತಾಯಿತನಕ್ಕೆ ಕಾಲಿಟ್ಟವಳು.  ಎಲ್ಲಾ ಅಮ್ಮಂದಿರಿಗೂ ನಾನು ಹೇಳುವುದು ಇಷ್ಟ 'You are doing great dont let anyone tell you otherwise!!' ( ನೀವೂ ಶ್ರೇಷ್ಠವಾದ ಕೆಲಸ ಮಾಡುತ್ತಿದ್ದೀರಿ ) ಎಂದು ರಾಧಿಕಾ ಬರೆದುಕೊಂಡಿದ್ದಾರೆ.

 

ರಾಧಿಕಾ ಶೇರ್ ಮಾಡಿದ ಫೋಟೋ:

ರಾಧಿಕಾ ಮೊದಲು ಫೋಟೋದಲ್ಲಿ ಲಿಟಲ್‌ ಐರಾಗೆ ಬೀಚ್‌ ಪರಿಚಯ ಮಾಡಿಸುತ್ತಿದ್ದಾರೆ. ಬಿಸಿಲಿನಲ್ಲಿ ಮಗಳನ್ನು ಏರೋಪ್ಲೇನ್‌ ರೀತಿಯಲ್ಲಿ ಎತ್ತಾಡಿಸುತ್ತಿದ್ದಾರೆ. ಎರಡನೇ ಫೋಟೋದಲ್ಲಿ  ಜೂನಿಯರ್‌ ಯಶ್‌ ಜೊತೆ ಇತ್ತೀಚಿಗೆ ಮಾಡಿಸಿದ ಫೋಟೋ ಶೋಟ್‌ರದ್ದು. ಮೂರನೇ ಫೋಟೋದಲ್ಲಿ ರಾಧಿಕಾ ತಾಯಿ ಇಬ್ಬರು ಮೊಮ್ಮಕ್ಕಳನ್ನು ಮುದ್ದಾಡುತ್ತಿರುವುದು . ಐರಾ ರೆಡ್‌ ಫ್ರಾಕ್‌ನಲ್ಲಿ ಅಜ್ಜಿಯ ಜೊತೆ ಪೋಸ್‌ ಕೊಡುತ್ತಿದ್ದಾಳೆ.

ರಾಧಿಕಾ - ಯಶ್‌ ಪೇರೆಂಟಿಂಗ್:

ಕೊರೋನಾ ಲಾಕ್‌ಡೌನ್‌ ಇರುವ ಕಾರಣ  ರಾಕಿಂಗ್ ಸ್ಟಾರ್ ಯಶ್‌ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ರಾಧಿಕಾಳಿಗೆ ಇಬ್ಬರು ಮಕ್ಕಳನ್ನು ಮ್ಯಾನೇಜ್‌ ಮಾಡಲು ಸಹಾಯ ಮಾಡುತ್ತಿದ್ದಾರೆ. ತಂದೆಯ ಫೇವರೆಟ್‌ ಮಗಳಾದ ಕಾರಣ ಐರಾ ಸದಾ ಅಪ್ಪನ ಜೊತೆ ಇರುತ್ತಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ ಯಶ್‌ 'ಐರಾ ನನ್ನ ಮಗಳಲ್ಲ ನನ್ನ ತಾಯಿ . ದಿನವೂ ನನಗೆ ಊಟ ಮಾಡಿಸಲೇಬೇಕು' ಎಂದು ಹೇಳಿಕೊಂಡಿದ್ದರು . 

ಮಿಸ್‌ ಮಾಡದೇ ದಿನಾ ಯಶ್‌ಗೆ ಊಟ ಮಾಡಿಸೋ ಐರಾ, ಅಪ್ಪ -ಅಮ್ಮ ಇಲ್ಲದೇ ಜೂನಿಯರ್ ಮಲಗೋದೇ ಇಲ್ವಂತೆ!

ಇನ್ನು ಜೂನಿಯರ್‌ ಸ್ಟಾರ್‌ ಚಿಕ್ಕ ವಯಸ್ಸಿನಲ್ಲೇ ಸಿಕ್ಕಾಪಟ್ಟೆ ಡಿಮ್ಯಾಂಡ್‌ ಮಾಡುತ್ತಿದ್ದಾನೆ. ತಾನು ಮಲಗುವ ಟೈಂ ಆಗಿದ್ದರೂ ಪಕ್ಕದಲ್ಲಿ ತಂದೆ-ತಾಯಿ ಇದ್ದರೆ ಮಾತ್ರ ಅವನು ಮಲಗುವುದಂತೆ. ಒಟ್ಟಾರೆ ಮನೆಯಲ್ಲಿ ಯಶ್‌ ಇರುವ ಕಾರಣ ರಾಧಿಕಾರಿಗೆ  ರೆಸ್ಟ್‌ ಮಾಡಲು ಕೊಂಚ ಬ್ರೇಕ್‌ ಸಿಕ್ಕಿದೆ.

ರಾಕಿಂಗ್‌ ಜೋಡಿ ಮಕ್ಕಳು ಈಗ ಸ್ಟಾರ್ಸ್‌:

ಮಿಸ್ಟರ್‌ ಆಂಡ್‌ ಮಿಸಸ್ ರಾಮಚಾರಿ ಇಬ್ಬರು ಮಕ್ಕಳು ಈಗ ಸ್ಯಾಂಡಲ್‌ವುಡ್‌ ಸ್ಟಾರ್ ಕಿಡ್ಸ್‌.  2019ರ ಅಕ್ಷಯ ತೃತೀಯ  ದಿನದಂದು ಲಿಟಲ್‌ ಸಿಂಡ್ರೆಲಾ ಐರಾ ಫೋಟೋ ರಿವೀಲ್‌ ಮಾಡಲಾಗಿತ್ತು. ಮುಖ ನೋಡಿದ್ದೇ ತಡ ಅಭಿಮಾನಿಗಳು ಸಾಕಷ್ಟು ಹೆಸರುಗಳನ್ನು ಗೆಸ್‌ ಮಾಡುತ್ತಿದ್ದರು ಆದರೆ ನಾಮಕರಣದ ಮೂಲಕ ಹೆಸರು ರಿವೀಲ್ ಮಾಡಿದ್ದರು. 

ಜೂನಿಯರ್‌ ರಾಕಿ ಬಾಯ್‌; ರಾಧಿಕಾ ಪಂಡಿತ್ ಬೇಬಿ ಶವರ್‌ ಫೋಟೋ ಶೂಟ್!

ಹೆಸರು ಕೇಳಿ ಅಭಿಮಾನಿಗಳು ಸುಮ್ಮನೆ ಇರುತ್ತಾರಾ? ಐರಾ ಹೆಸರಿನಲ್ಲಿ ಈಗಾಗಲೇ  ಸಾಕಷ್ಟು ಫ್ಯಾನ್‌ ಪೇಜ್‌ಗಳಿವೆ. ಅದೇ ಫ್ಯಾನ್‌ ಪೇಜ್‌ನಲ್ಲಿ ಈಗ ಜೂನಿಯರ್‌ ಯಶ್‌ ಫೋಟೋಗಳು ಸೇರಿಕೊಳ್ಳುತ್ತಿದೆ. ನಮ್ಮ ಮುಂದಿನ ಪೀಳಿಗೆಯ ನಟ ಜೂನಿಯರ್ ರಾಜಾಹುಲಿ ಎಂದು ಟ್ರೋಲ್‌ ಪೇಜ್‌ಗಳಲ್ಲಿ ನೋಡಬಹುದು.