ಕುತೂಹಲ ಹೆಚ್ಚಿಸಿದ ನಟಿ ರಾಧಿಕಾ ಪಂಡಿತ್ ಪೋಸ್ಟ್‌. ಜೂನಿಯರ್ ಯಶ್‌ ನಾಮಕರಣ ಯಾವಾಗ? ನೀವು ಗೆಸ್‌ ಮಾಡಿದ ಹೆಸರು ಇದೇನಾ?

ಸ್ಯಾಂಡಲ್‌ವುಡ್‌ ಮಿಸ್ಟರ್‌ ಆಂಡ್‌ ಮಿಸಸ್ ರಾಮಚಾರಿ ತಮ್ಮ ಮುದ್ದು ಜೂನಿಯರ್ Yಗೆ ನಾಮಕರಣ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪುತ್ರನ ಫೋಟೋ ಶೇರ್ ಮಾಡುವ ಮೂಲಕ ಸಂಭ್ರಮದ ಬಗ್ಗೆ ಅಪ್ಡೇಟ್ ನೀಡಿದ್ದಾರೆ ರಾಧಿಕಾ ಪಂಡಿತ್. 

ಬಾಲ ಗಣೇಶನ ಅವತಾರಲ್ಲಿ ಯಶ್‌-ರಾಧಿಕಾ ಪುತ್ರ!

'ನಮ್ಮ ದಿನ ಸಂತೋಷದಿಂದ ಆರಂಭವಾಗಲು ಕಾರಣವೇ ಈ ನಗೆ. ನೀವೆಲ್ಲರೂ ಕೇಳುತ್ತಿದ್ದ ಪ್ರಶ್ನೆಗೆ ಈಗ ಉತ್ತರಿಸುತ್ತಿರುವೆ. ಅತಿ ಶೀಘ್ರದಲ್ಲಿ ಜೂನಿಯರ್‌ಗೆ ಹೆಸರಿಡಲಾಗುತ್ತದೆ. ಇದರ ಬಗ್ಗೆ ಅಪ್ಡೇಟ್‌ ನೀಡುತ್ತಲೇ ಇರುತ್ತೇನೆ. ಆದರೆ ಅವನ ಹೆಸರು ಮಾತ್ರ ಆಯುಷ್‌ ಅಲ್ಲ' ಎಂದು ಬರೆದುಕೊಂಡಿದ್ದಾರೆ. 

View post on Instagram

ರಾಧಿಕಾ ಪಂಡಿತ್ ತಮ್ಮ ಮಕ್ಕಳ ಹೆಸರು ಆಯ್ಕೆ ಮಾಡುವುದರಲ್ಲಿ ತುಂಬಾನೇ ಡಿಫರೆಂಟ್. ಈ ಹಿಂದೆಯೂ ಲಿಟಲ್‌ ಸಿಂಡ್ರೆಲಾ ಹೆಸರು ಏನೆಂದು ಅಭಿಮಾನಿಗಳು ಗೆಸ್ ಮಾಡುತ್ತಲೇ, ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು ಆದರೆ ನಾಮಕರಣ ಮಾಡುವ ಮೂಲಕ 'ಐರಾ ಯಶ್' ಎಂದು ರಿವೀಲ್ ಮಾಡಿದ್ದರು. ಐರಾ ಹೆಸರು ಆಯ್ಕೆ ಮಾಡಿದ್ದು ಹೇಗೆ ಎಂದು ತಿಳಿದುಕೊಂಡ ನೆಟ್ಟಿಗರು ಅದೇ ರೀತಿಯಲ್ಲಿ ಜೂನಿಯರ್‌ಗೆ ಹೆಸರು ಹುಡುಕುತ್ತಿದ್ದಾರೆ. 

ಸೆಲೆಬ್ರಿಟಿ ಕಿಡ್ ಐರಾ ಮತ್ತು ಜೂನಿಯರ್ ವೈ ಬಗ್ಗೆ ಅಪ್ಡೇಟ್‌ ಬೇಕೆಂದು ಅಭಿಮಾನಿಗಳು ರಾಧಿಕಾ ಅವರಿಗೆ ಮೆಸೇಜ್ ಮಾಡುತ್ತಲೇ ಇರುತ್ತಾರಂತೆ. ಅಭಿಮಾನಿಗಳಿಗೊಸ್ಕರ ರಾಧಿಕಾ ಮಕ್ಕಳ ಫೋಟೋ ಶೇರ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. 

ಯಶ್ ಮನೆಯಲ್ಲಿ ಹಬ್ಬ, ಪುಟ್ಟ ತಮ್ಮನಿಗೆ ಐರಾ ರಕ್ಷಾ ಬಂಧನ

ಬೆಂಗಳೂರಿನ ತಾಜ್‌ ಹೊಟೇಲ್‌ನಲ್ಲಿ ಐರಾಳ ನಾಮಕರಣ ಅದ್ಧೂರಿಯಾಗಿ ನಡೆದಿತ್ತು. ನಂತರ ಹುಟ್ಟುಹಬ್ಬವನ್ನೂ ಯಶ್ ದಂಪತಿ ಸಂಭ್ರಮದಿಂದ ಆಚರಿಸಿದ್ದರು. ಹಾಗೆಯೇ ಜೂನಿಯರ್‌ ನಾಮಕರಣವೂ ಅದ್ಧೂರಿಯಾಗಿ ನಡೆಸಲು ಕೊರೋನಾ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಹೇಗೆ ಈ ಸಂಭ್ರಮವನ್ನು ಸೆಲೆಬ್ರೇಟ್ ಮಾಡುತ್ತಾರೋ ಕಾದು ನೋಡಬೇಕು.