Asianet Suvarna News Asianet Suvarna News

ಎಲ್ಲರಿಗೀಗ ಕಷ್ಟ, ಜಡ್ಜ್‌ಮೆಂಟಲ್ ಆಗೋದು ಬೇಡ: ರಾಧಿಕಾ ನಾರಾಯಣ್!

ಕೊರೋನಾ ಪ್ಯಾಂಡಮಿಕ್‌ ಲೈಫ್‌ ಬಗ್ಗೆ ಹಂಚಿಕೊಂಡ ರಾಧಿಕಾ ನಾರಾಯಣ್. ಹೇಗಿತ್ತು ಗೊತ್ತಾ ಲಾಕ್‌ಡೌನ್‌ ದಿನಗಳು?
 

Kannada actress Radhika Narayan shares about pandemic days vcs
Author
Bangalore, First Published Jul 11, 2021, 12:55 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್‌ ನಟಿ ರಾಧಿಕಾ ನಾರಾಯಣ್‌ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಆ್ಯಕ್ಟಿವ್ ಆಗಿದ್ದಾರೆ. ಯೋಗ ಮತ್ತು ಡ್ಯಾನ್ಸ್‌  ವಿಡಿಯೋ ಹಂಚಿಕೊಳ್ಳುತ್ತಿರುವ ರಾಧಿಕಾ, ಪ್ಯಾಂಡಮಿಕ್‌ ಹೇಗೆ ಎದುರಿಸಿದ್ದರು ಹಾಗೂ ಮನೆಯಲ್ಲಿಯೇ ಇದ್ದು ಏನೆಲ್ಲಾ ಮಾಡಿದ್ದರು ಎಂದು ಹೇಳಿ ಕೊಂಡಿದ್ದಾರೆ.

'ಮೊದಲ ಲಾಕ್‌ಡೌನ್‌ಗಿಂತ ನಾನು ಎರಡನೇ ಲಾಕ್‌ಡೌನ್‌ ಎದುರಿಸಲು ಮಾನಸಿಕವಾಗಿ ತಯಾರಾಗಿದ್ದೆ. ಮೊದಲ ಸಲ ಗೊಂದಲವಿತ್ತು. ಆದರೆ ಈ ಬಾರಿ ನಮ್ಮ ದಿನವನ್ನು ಅತ್ಯುತ್ತಮವಾಗಿ ಹೇಗೆ ಕಳೆಯಬೇಕೆಂಬ ಪಕ್ಕಾ ಸ್ಪಷ್ಟತೆ ಇತ್ತು. ನಾನು ತುಂಬಾ ಬ್ಯುಸಿ ಆಗಿರುತ್ತಿದ್ದೆ. ಅಡುಗೆ ಮಾಡುವ ಪ್ರಯತ್ನ ಮಾಡಿದೆ. ಓದುವುದಕ್ಕೆ ಹಾಗೂ ಹೆಚ್ಚಾಗಿ ಆಡಿಯೋ ಬುಕ್ ಕೇಳುವುದಕ್ಕೆ ಶುರು ಮಾಡಿರುವೆ. ತುಂಬಾ ತುಂಬಾ ಡ್ಯಾನ್ಸ್ ಮಾಡಿದೆ. ಬೆಲ್ಲಿ ಡ್ಯಾನ್ಸ್ ಸೇರಿ, ಬೇರೆ ಬೇರೆ ಸ್ಟೈಲ್‌ಗಳ ಕಲಿಯುವುದಕ್ಕೆ ಪ್ರಯತ್ನಿಸಿರುವೆ,' ಎಂದು ರಾಧಿಕಾ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅರೇ! ರಂಗಿತರಂಗ ಒಂದೇ ಅಲ್ಲ ರಾಧಿಕಾ ನಾರಾಯಣ್ ಈ ಸಿನಿಮಾಗಳನ್ನೂ ನೋಡಲೇ ಬೇಕು!

'ಈ ಪರಿಸ್ಥಿತಿಯಲ್ಲಿ ಎಲ್ಲರೂ ಕಷ್ಟ ಎದುರಿಸುತ್ತಿದ್ದಾರೆ. ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಜಡ್ಜ್‌ಮೆಂಟಲ್ ಆಗುವುದಿಲ್ಲ. ಮುಂಚೆಗಿಂತ ಈಗ ತಾಳ್ಮೆ ಹೆಚ್ಚಾಗಿದೆ. ನಾನು ಯಾವುದಕ್ಕೂ ರಿಯಾಕ್ಟ್‌ ಮಾಡುವುದಿಲ್ಲ. ಬದಲಿಗೆ ರೆಸ್ಪಾಂಡ್ ಮಾಡುವೆ.  ಆದಷ್ಟು ಪಾಸಿಟಿವ್ ಆಗಿರಬೇಕು ಎಂದು ಕೊಂಡಿರುವೆ.  ನಮ್ಮ ಬುದ್ಧಿ ಹೇಗೆ ಕೆಲಸ ಮಾಡುತ್ತದೆ ಎಂದು ನಾನು ಬುಕ್‌ಗಳ ಮೂಲಕ ತಿಳಿದುಕೊಂಡಿರುವೆ. ಇದರಿಂದ ನಾನು ಆಯ್ಕೆ ಮಾಡಿಕೊಳ್ಳುವ ಪಾತ್ರಕ್ಕೆ ಎಷ್ಟು ಸೆನ್ಸಿಟಿವ್ ಆಗಿರಬೇಕು ಎಂದು ತಿಳಿದುಕೊಂಡಿರುವೆ. ಮನಸ್ಸು ಶಾಂತಿಯಿಂದ ಇಟ್ಟು ಕೊಳ್ಳಲು ಧ್ಯಾನ ಮಾಡುತ್ತಿರುವೆ,' ಎಂದಿದ್ದಾರೆ ರಾಧಿಕಾ.

 

Follow Us:
Download App:
  • android
  • ios