ಈ ಹಿಂದೆ ‘8 ಎಂಎಂ ’ಚಿತ್ರ ನಿರ್ಮಾಣ ಮಾಡಿದ್ದ ನಾರಾಯಣ ಬಾಬು ಇದೀಗ ‘ಏಪ್ರಿಲ…’ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು 8 ಎಂಎಂ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸತ್ಯ ರಾಯಲ ಇದರ ನಿರ್ದೇಶಕರು.

ಕೋಟಿ ಮೌಲ್ಯದ ದುಬಾರಿ ಕಾರು ಖರೀದಿಸಿದ ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ!

ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ ಹಾಗೂ ಚಿರಂಜೀವಿ ಸರ್ಜಾ ಇದರ ಕೇಂದ್ರ ಬಿಂದು. ಮಹಿಳಾ ಪ್ರಧಾನ ಚಿತ್ರವಾಗಿದ್ದರಿಂದ ರಚಿತಾಗೆ ಹೆಚ್ಚು ಸ್ಕ್ರೀನ್‌ ಪ್ರೆಸೆನ್ಸ್‌ ಇದೆಯಂತೆ. ಚಿರಂಜೀವಿ ಸರ್ಜಾ ಕಾಪ್‌ ಆಗಿ ಕಾಣಿಸಿಕೊಳ್ಳುತ್ತಿದ್ದು ಮತ್ತೊಮ್ಮೆ ಮಾಸ್‌ ಲುಕ್‌ನಲ್ಲಿ ಎಂಟ್ರಿಕೊಡುತ್ತಿದ್ದಾರೆ. ‘ಚಿತ್ರದಲ್ಲಿ ನಾನು ರಚಿತಾ ಅವರನ್ನು ಹುಡುಕ ಹೊರಟರೆ, ಮತ್ತೊಂದೆಡೆ ರಚಿತಾ ಇನ್ನೊಬ್ಬರ ಹುಡುಕಾಟದಲ್ಲಿರುತ್ತಾರೆ. ಈ ಹುಡುಕಾಟದ ಕತೆಯೇ ತುಂಬಾ ಇಂಟರೆಸ್ಟಿಂಗ್‌ ಆಗಿದೆ. ಇಂದೊಂದು ಪಕ್ಕಾ ಮಾಸ್‌ ಸಿನಿಮಾ’ ಎನ್ನುವುದು ಚಿರು ಅಭಿಪ್ರಾಯ.

ಚಿತ್ರದ ಟೈಟಲ… ‘ಏಪ್ರಿಲ…’ಎಂದು ಇರುವುದಕ್ಕೆ ಕಾರಣ ರಚಿತಾ ಇಲ್ಲಿ ಏಪ್ರಿಲ್‌ ಡಿಸೋಜಾ ಎನ್ನುವ ಪಾತ್ರ ಮಾಡುತ್ತಿರುವುದು. ಸತ್ಯ ರಾಯಲಗೆ ಇದು ಇಂಡಿಪೆಂಡೆಂಟ್‌ ಆಗಿ ಮೊದಲ ಚಿತ್ರ. ಪ್ರಾರಂಭದಲ್ಲಿ ಎರಡು ಮೂರು ವರ್ಷನ್‌ ಕತೆ ಮಾಡಿಕೊಂಡು ಇದೀಗ ಬಜೆಟ್‌ಗೆ ತಕ್ಕಂತೆ ಒಂದು ವರ್ಷನ್‌ ಆಯ್ಕೆ ಮಾಡಿಕೊಂಡಿದ್ದಾರಂತೆ. ತುಂಬಾ ಹಿಂದೆಯೇ ಕತೆ ಫೈನಲ… ಆಗಿದ್ದರೂ ಚಿರು ಅವರ ಡೇಟ್ಸ್‌ಗಾಗಿ ಕಾದು ಇದೀಗ ಮಹೂರ್ತ ನೆರವೇರಿಸಿಕೊಂಡಿದೆ ಚಿತ್ರತಂಡ.

ಸಿನಿಮಾ ಒಪ್ಪಿಕೊಳ್ಳುತ್ತಿರುವುದು ಸಂಖ್ಯೆಗೋಸ್ಕರ ಅಲ್ಲ: ರಚಿತಾ

ರವಿ ಬಸ್ರೂರು ಸಹೋದರ ಸಚಿನ್‌ ಬಸ್ರೂರು ಮೊದಲ ಬಾರಿಗೆ ಸಂಗೀತ ನಿರ್ದೇಶಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ಪ್ರತೀಕ್‌್ಷ ಶೆಟ್ಟಿಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ರಂಗಾಯಣ ರಘು ಸೇರಿದಂತೆ ಮಿಕ್ಕುಳಿದ ಪಾತ್ರಗಳಲ್ಲಿ ಹೊಸಬರಿಗೆ ಚಾನ್ಸ್‌ ಕೊಡಲಾಗಿದೆ. ನಾರಾಯಣ ಬಾಬು ಜೊತೆಗೆ ಎಲ…. ಎಸ್‌. ರೆಡ್ಡಿಯವರೂ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

ಜನವರಿ 24ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ