ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್‌ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ ಎಂದು ಗಾಂಧಿ ನಗರದಲ್ಲಿ ಕೇಳಿ ಬರುತ್ತದೆ. ಅರೇ! ಕೈ ತುಂಬಾ ಸಿನಿಮಾ ಹಾಗೂ ರಿಯಾಲಿಟಿ ಶೋ ಇಟ್ಟುಕೊಂಡು ರಚಿತಾ ರಾಮ್ ಮದುವೆ ಆಗ್ತಿದ್ದಾರಾ? ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ ಬಗ್ಗೆ ಇಲ್ಲಿದೆ ಕ್ಲಾರಿಟಿ.

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ಈ ಕಿರುತೆರೆ ನಟಿ!

 

ರಚಿತಾ ರಾಮ್ ಮುದ್ದಿನ ಅಕ್ಕ ನಿತ್ಯ ರಾಮ್ ಡಿಸೆಂಬರ್ 5-6 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆ ದಿನಾಂಕ ಹೊರತುಪಡಿಸಿ ಮತ್ಯಾವ ವಿಚಾರವೂ ಬಹಿರಂಗವಾಗಿಲ್ಲ ಆದರೆ ಕೆಲ ಮೂಲಗಳ ಪ್ರಕಾರ ಹುಡುಗ ಆಸ್ಟ್ರೇಲಿಯಾದಲ್ಲಿ ಉದ್ಯಮಿ ಆಗಿದ್ದು ಅಲ್ಲೇ ಸೆಟಲ್ ಆಗಿದ್ದಾರೆ.

ಅಬ್ಬಾ...! 25 ದಿನದಲ್ಲಿ 7ಕೆಜಿ ಇಳಿಸಿಕೊಂಡ ರಚ್ಚು ಸೀರೆಲೂ ಹಾಟ್‌ .

'ನಂದಿನಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚುತ್ತಿರುವ ನಿತ್ಯ ಈ ಹಿಂದೆ 'ಬೆಂಕಿಯಲ್ಲಿ ಅರಳಿದ ಹೂವು', 'ಕರ್ಪುರದ ಗೊಂಬೆ', 'ರಾಜಕುಮಾರಿ' ಹಾಗೂ 'ಎರಡು ಕನಸು' ಧಾರಾವಾಹಿ ಹಾಗೂ 'ಮುದ್ದು ಮನಸು' ಚಿತ್ರದಲ್ಲಿ ಅಭಿನಯಿಸಿದ್ದಾರೆ.

ನವೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: