ಲಾಕ್‌ಡೌನ್‌ನಿಂದಾಗಿ ಎಲ್ಲರೂ ಮನೆಯಲ್ಲಿದ್ದಾರೆ. ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಉದ್ಯೋಗಸ್ಥರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ರಜೆ ಇರುವುದರಿಂದ ಮನೆಯಲ್ಲಿ ಮಕ್ಕಳನ್ನು ಎಂಗೇಜ್ ಮಾಡುವುದೇ ಒಂದು ಸವಾಲಾಗಿದೆ. ಒಬ್ಬೊಬ್ಬರು ಒಂದೊಂದು ರೀತಿ ಸಮಯ ಕಳೆಯುತ್ತಿದ್ದಾರೆ. ಪುಸ್ತಕ ಓದುವುದು, ಸಿನಿಮಾಗಳನ್ನು ನೋಡುವುದು, ಪೇಯಿಂಟಿಂಗ್ ಮಾಡುವುದು, ಸಂಗೀತ ಅಭ್ಯಾಸ ಹೀಗೆ ಒಂದೊಂದು ಹವ್ಯಾಸಗಳಲ್ಲಿ ಬ್ಯುಸಿಯಾಗಿದ್ದಾರೆ. 

ನಟಿ ಪ್ರಿಯಾಂಕ ಉಪೇಂದ್ರ ಮಗಳು ಐಶ್ವರ್ಯಾಗೆ ಅಡುಗೆ ಕಲಿಸುತ್ತಿದ್ದಾರೆ. ಐಶ್ವರ್ಯಾಗೂ ರಜೆ ಇರುವುದರಿಂದ ಅಮ್ಮನ ಜೊತೆ ಅಡುಗೆ ಕಲಿಯುತ್ತಿದ್ದಾರೆ. ಅಡುಗೆ ಜೊತೆಗೆ ಪುಸ್ತಕಗಳನ್ನು ಓದುತ್ತಿದ್ದಾರೆ. ಐಶ್ವರ್ಯಾ ಓದಿನಲ್ಲಿಯೂ ಚುರುಕಿರುವ ಹುಡುಗಿ.  ಈಗಾಗಲೇ ಅಮ್ಮನ ಜೊತೆ ದೇವಕಿ ಸಿನಿಮಾದಲ್ಲಿ ನಟಿಸಿದ್ದಾರೆ. 

ಪೋರ್ನ್ ನಟಿ ಎಂದವರಿಗೆ ಪಾಯಲ್ ಕೊಟ್ಟ ಬೋಲ್ಡ್ ಉತ್ತರ

ಅಡುಗೆ ಕೆಲಸವನ್ನು ಹೆಣ್ಣು ಮಕ್ಕಳೇ ಮಾಡಬೇಕೆಂದಿಲ್ಲ. ಈಗ ಗಂಡು ಮಕ್ಕಳು ಅಡುಗೆ ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಿದ್ದಾರೆ. ಮಗ ಆಯುಷ್‌ಗೂ ಕೂಡಾ ಅಡುಗೆ ಕಲಿಸುತ್ತಿದ್ದಾರೆ ಪ್ರಿಯಾಂಕ. ಜೊತೆಗೆ ಮಗನಿಂದ ಪಾತ್ರೆಯನ್ನೂ ತೊಳೆಸುತ್ತಿದ್ದಾರೆ. 

ಇನ್ನು ಉಪೇಂದ್ರ ಕೃಷಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಾ  ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.