Asianet Suvarna News Asianet Suvarna News

Abortion ಆಗಿದ್ದಕ್ಕೆ ಡಿಪ್ರೆಶನ್‌ಗೆ ಜಾರಿದೆ, ಓಶೋ ಆಶ್ರಮ ಸೇರಿಕೊಂಡಿಲ್ಲ: ನಟಿ ಪ್ರೇಮಾ ಸ್ಪಷ್ಟನೆ

ನಾನು ಆಶ್ರಮ ಸೇರಿಲ್ಲ ಧ್ಯಾನ ನನಗೆ ಸಹಾಯ ಮಾಡಿ, ಮನೆಯಲ್ಲಿ ಈಗಲೂ ಯೋಗ ಮಾಡಿವೆ ಎಂದು ನಟಿ ಪ್ರೇಮಾ ಹೇಳಿದ್ದಾರೆ. 
 

Kannada actress Prema talks about Abortion Depression and yoga in life vcs
Author
First Published Sep 7, 2023, 11:57 AM IST

ಕನ್ನಡ ಚಿತ್ರರಂಗದ ಬೋಲ್ಡ್ ಆಂಡ್ ಟಾಲ್ ನಟಿ ಪ್ರೇಮಾ ಆರೋಗ್ಯ ಮತ್ತು ವೈಯಕ್ತಿಕ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಹೀಗಾಗಿ ಸ್ವತ ಪ್ರೇಮಾ ಗಾಳಿ ಮಾತುಗಳಿಗೆ ಬ್ರೇಕ್ ಹಾಕಿದ್ದಾರೆ. 

'ನನ್ನ ಆರೋಗ್ಯದ ಬಗ್ಗೆ ಸಾಕಷ್ಟು ವಿಚಾರಗಳು ಹೊರ ಬಂತು. ನಾನು ನಿರೀಕ್ಷೆ ಮಾಡಿದ್ದು ನನಗೆ ಸಿಕ್ಕಿಲ್ಲ ಅಂದಾಗ ನಾನು ಡಿಪ್ರೆಶನ್‌ಗೆ ಜಾರಿದೆ ಅನ್ಸುತ್ತೆ. ಎಲ್ಲಾ ಹೆಣ್ಣು ಮಕ್ಕಳಿಗೂ ಹಾಗೆ ಆಗುತ್ತದೆ. ನನಗೆ ಅಬಾರ್ಷನ್ ಆಯ್ತು ಆಸ್ಪತ್ರೆಯಲ್ಲಿದ್ದೆ ಇದೇ ಕಾರಣ ಆಯ್ತು ನಾನು ಡಿಪ್ರೆಶನ್‌ಗೆ ಜಾರಲು. ಮಗಳು ಕಳೆದುಕೊಂಡೆ ಅನ್ನೋ ನೋವು ಇತ್ತು ಸೆಂಟಿಮೆಂಟ್ ಅನ್ನೋದು ಎಲ್ಲರಿಗೂ ಇರುತ್ತದೆ ಅದಕ್ಕೆ ಕೊರಗಿ ಕೊರಗಿ ನಾನು ಡಿಪ್ರೆಶನ್‌ಗೆ ಜಾರಿದೆ. ಪ್ರೇಮಾಳಿಗೆ ಕ್ಯಾನ್ಸರ್ ಎಂದು ಹಬ್ಬಿಸಿದ್ದರು ...ತಂದೆ ತಾಯಿ ದೇವರ ಆಶೀರ್ವಾದಿಂದ ನಾನು ಬೇಗ ಅದರಿಂದ ಹೊರ ಬಂದಿರುವೆ. 25 ವರ್ಷಗಳಿಂದ ವೈದ್ಯರು ಪರಿಚಯ ಇದ್ದ ಕಾರಣ ಸಂಪೂರ್ಣವಾಗಿ ಚೇತರಿಸಿಕೊಂಡೆ. ಮನೆಯಲ್ಲಿದ್ದರೆ ಗುಣ ಆಗುವುದಿಲ್ಲ ಅನ್ನೋ ಕಾರಣಕ್ಕೆ ಹೊರ ಬರಲು ಬಂದೆ ಹೀಗಾಗಿ ಹೊರಗೆ ಕಾಣಿಸಿಕೊಳ್ಳಲು ಶುರು ಮಾಡಿದೆ' ಎಂದು ಪ್ರೇಮಾ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ನಾನು ಆತ್ಮಹತ್ಯೆ ಮಾಡ್ಕೊಂಡಿಲ್ಲ, ಕ್ಯಾನ್ಸರ್ ಕೂಡ ಬಂದಿಲ್ಲ; ಎರಡನೇ ಮದುವೆ ಬಗ್ಗೆ ನಟಿ ಪ್ರೇಮಾ ಹೇಳಿಕೆ

'ನನಗೆ ಧ್ಯಾನ ತುಂಬಾ ಸಹಾಯ ಮಾಡಿತ್ತು. ನನ್ನ ಸ್ನೇಹಿತರು Osho ಸಂಸ್ಥೆಗೆ ಕರೆದುಕೊಂಡು ಹೋದರು ಆ ಸಮಯದಲ್ಲಿ ನಾನು ಆಶ್ರಮ ಸೇರಿಕೊಂಡೆ ಎಂದು ಅನೇಕರು ಹೇಳಲು ಶುರು ಮಾಡಿದ್ದರು. ನಾಲ್ಕು ದಿನ ಕ್ಯಾಂಪ್ ಮುಗಿಸಿಕೊಂಡು ಬಂದೆ ಈಗ ಮನೆಯಲ್ಲಿ ಯೋಗ ಮಾಡುವೆ' ಎಂದು ಪ್ರೇಮಾ ಹೇಳಿದ್ದಾರೆ. 

ಹುಡುಗ ನೋಡಿದ್ದೇನೆ, ಮದುವೆ ಮಾಡಿಸು ಎಂದು ಕೊರಗಜ್ಜನಿಗೆ ಪ್ರಾರ್ಥಿಸಿದ ನಟಿ ಪ್ರೇಮಾ

'ಈ ಕಾಲದ ಕಲಾವಿದರನ್ನು ನೋಡಿದರೆ ಕೊಂಚ ಬೇಸರವಾಗುತ್ತದೆ ನಮಗೆ ಸಿಗುತ್ತಿದ್ದ ಪಾತ್ರ ಅವರಿಗೆ ಸಿಕ್ಕಿಲ್ಲ ಸಿಗುತ್ತಿಲ್ಲ ಎಂದು. ನಮಗೆ ತುಂಬಾ ಜಾಲೆಂಜಿಂಗ್ ಪಾತ್ರಗಳು ಸಿಗುತ್ತಿತ್ತು ಆದರೆ ಈಗ ನಿರ್ದೇಶಕರು ಕೂಡ ಹೀಗೆ ಇಲ್ಲ. ನಾನು ಸಿನಿಮಾ ರಂಗಕ್ಕೆ ಕಾಲಿಟ್ಟಗ ನಾನು ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ ನಾನು ಸೀರಿಯಲ್‌ಗೆ ಬರಬಾರದು ಈ ರೀತಿ ಪಾತ್ರಗಳನ್ನು ಮಾಡಬಾರದು. ಬೇರೆ ರೀತಿಯಲ್ಲಿ ನಾನು ಲೈಫ್‌ ನೋಡಬೇಕು ಎಂದು ತೀರ್ಮಾನ ಮಾಡಿರುವೆ. ಒಂದು ವೇಳೆ ತುಂಬಾ ಒಳ್ಳೆ ಪಾತ್ರ ಸಿಕ್ಕರೆ ಖಂಡಿತ ನಟಿಸುವೆ. ಈಗಾಗಲೆ ಸಾಕಷ್ಟು ಸ್ಕ್ರಿಪ್ಟ್‌ಗಳನ್ನು ಓದುತ್ತಿರುವೆ ತೆಲುಗು ಭಾಷೆಯಿಂದ ತುಂಬಾ ಆಫರ್‌ಗಳು ಬರುತ್ತಿದೆ. ಈಗಾಗಲೆ ಸಾಕಷ್ಟು ಪಾತ್ರಗಳನ್ನು ಮಾಡಿರುವ ಕಾರಣ ಚಾಲೆಂಜಿಂಗ್ ಆಗಿರುವುದನ್ನು ಹುಡುಕುತ್ತಿರುವೆ. ಇಷ್ಟು ವರ್ಷಗಳಿಂದ ನಾನು ಕ್ಯಾಮೆರಾ ಎದುರಿಸುತ್ತಿರುವೆ ಈಗಲೂ ಕ್ಯಾಮೆರಾ ನೋಡಿದಾಗ ಭಯ ಆಗುತ್ತದೆ' ಎಂದಿದ್ದಾರೆ ಪ್ರೇಮಾ. 
 

Follow Us:
Download App:
  • android
  • ios