Asianet Suvarna News Asianet Suvarna News

ನಮ್ಮಪ್ಪಗೆ ಮೆಸೇಜ್‌ ಬಗ್ಗೆ ಹೇಳಿದ್ರೂ ಇದೇ ತರ ಮಾಡುತ್ತಿದ್ದರು; ದರ್ಶನ್ ಪರ ನಿಂತ ಕಿರುತೆರೆ ನಟಿ ಪ್ರಗತಿ

ನನ್ನ ತಂದೆ ಪ್ರಭಾವಿ ವ್ಯಕ್ತಿ ಆಗಿದ್ರೆ ದರ್ಶನ್ ತರನೇ ಮಾಡುತ್ತಿದ್ದರು ಎಂದು 'ಮನೆಯೇ ಮಂತ್ರಾಲಯ' ನಟಿ ....

Kannada actress Pragathi stands for actor Darshan in Renukaswamy case vcs
Author
First Published Aug 3, 2024, 1:32 PM IST | Last Updated Aug 3, 2024, 2:07 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ನಟ ದರ್ಶನ್ ಸೇರಿದಂತೆ 17 ಮಂದಿ ಜೈಲಿಗೆ ಸೇರಿ 50 ದಿನಗಳು ಕಳೆದಿದೆ. ಈ ಘಟನೆ ಬಗ್ಗೆ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ತಪ್ಪೇ ಮಾಡಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಸಿಗಲಿ, ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕು ಹೀಗೆ ಒಬ್ಬೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಕೆಲವು ಸೆಲೆಬ್ರಿಟಿಗಳು ಜೈಲಿನಲ್ಲಿ ದರ್ಶನ್‌ನ ಭೇಟಿ ಮಾಡಿದ್ದಾರೆ. ಈ ನಡುವೆ ಕಿರುತೆರೆ ನಟಿ ಪ್ರಗತಿ ಹೇಳಿಕೆ ವೈರಲ್ ಆಗುತ್ತಿದೆ. 

'ನಟ ದರ್ಶನ್ ಮಾಡಿದ್ದು ನನಗೆ ಸರಿ ಅನಿಸುತ್ತಿದೆ. ಅಂತಹ ಮೆಸೇಜ್ ಯಾರಿಗಾದರೂ ಕಳುಹಿಸಿದರೆ ಎಂಥವರೂ ಟ್ರಿಗರ್ ಆಗುತ್ತಾರೆ. ನನಗೂ ಅಂತಹ ಮೆಸೇಜ್‌ಗಳು ಬಂದಿತ್ತು. ನನಗೆ ಆಗ 17 ವರ್ಷ ವಯಸ್ಸು. ಸೋಶಿಯಲ್ ಮೀಡಿಯಾ ಬಳಸುತ್ತಿದ್ದಾಗ ನನಗೂ ಅಂಥದ್ದೇ ಮೆಸೇಜ್‌ಗಳು ಬಂದಿತ್ತು. ಕೆಲಸ ಸ್ಟ್ರಾಂಗ್ ಹೆಣ್ಣು ಮಕ್ಕಳು ಇರುತ್ತಾರೆ. ಇವರು ಹೋಗ್ಲಿ ಎಂದು ಸುಮ್ಮನಾಗುತ್ತಾರೆ. ಕೆಲವರು ಹೆಣ್ಣು ಮಕ್ಕಳು ಮೆಂಟಲಿ ಡಿಸ್ಟರ್ಬ್‌ ಆಗ್ತಾರೆ. ಮಾಧ್ಯಮಗಳು ಸಹ ದರ್ಶನ್ ಮಾಡಿದ್ದಾರೆ ಎನ್ನುವ ಅರ್ಥದಲ್ಲಿ ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ.  ಇನ್ನು ತೀರ್ಪು ಬಂದಿಲ್ಲ. ಹಾಗಿರುವಾಗ ಅಪರಾಧಿ ಹೇಗಾಗುತ್ತಾರೆ?' ಎಂದು ಮನೆಯೇ ಮಂತ್ರಾಲಯ ನಟಿ ಪ್ರಗತಿ ಹೇಳಿದ್ದಾರೆ.

ವಯನಾಡಿಗೆ 10 ಲಕ್ಷ ರೂ. ನೀಡಿದ ರಶ್ಮಿಕಾ ; ತಾಯ್ನಾಡಿಗೆ ಕರಗದ ಮನಸ್ಸು ಬೇರೆ ನಾಡಿಗೆ ಮರುಗುತ್ತಿದೆ ಎಂದ ನೆಟ್ಟಿಗರು

'ಒಂದು ವೇಳೆ ನಟ ದರ್ಶನ್ ಆ ರೀತಿ ಮಾಡಿದ್ದರೂ ಅವರು ಮಾಡಿದ್ದು ಸರಿಯಿದೆ. ಏನು ಮಾಡಿದರೋ ಅದು ಸರಿಯಾಗಿದೆ. ನನಗೆ ಅಂತಹ ಮೆಸೇಜ್ ಬಂದು ನಾನು ನಮ್ಮ ತಂದೆಗೆ ಹೇಳಿದ್ದರೆ ಅವರು ಅದೇ ರೀತಿ ಪ್ರಭಾವಿ ಆಗಿದ್ದರೆ ಇದನ್ನೇ ಮಾಡುತ್ತಿದ್ದರು. ಹಾಗಾಗಿ ದರ್ಶನ್ ಮಾಡಿದ್ದರಲ್ಲಿ ತಪ್ಪೇನು ಇಲ್ಲ' ಎಂದಿದ್ದಾರೆ ಪ್ರಗತಿ. 

'ಬಾಸ್ ಬಾಸ್ ಡಿಬಾಸ್' ಎಂದು ಕಾರಿನಿಂದ ಇಳಿಯುತ್ತಿದ್ದ ಧ್ರುವ ಸರ್ಜಾ ಮುಂದೆ ಕೂಗಾಡಿದ ಜನರು; ವಿಡಿಯೋ ವೈರಲ್!

Latest Videos
Follow Us:
Download App:
  • android
  • ios