Asianet Suvarna News Asianet Suvarna News

'ಬಾಸ್ ಬಾಸ್ ಡಿಬಾಸ್' ಎಂದು ಕಾರಿನಿಂದ ಇಳಿಯುತ್ತಿದ್ದ ಧ್ರುವ ಸರ್ಜಾ ಮುಂದೆ ಕೂಗಾಡಿದ ಜನರು; ವಿಡಿಯೋ ವೈರಲ್!

 ಧ್ರುವ ಸರ್ಜಾ ಕಾರಿನಿಂದ ಇಳಿಯುತ್ತಿದ್ದಂತೆ ಕೂಗಾಡಿದ ಅಭಿಮಾನಿಗಳು. ಮತ್ತೆ ಶುರುವಾಯ್ತಾ ಸ್ಟಾರ್ ವಾರ್?

Fans shout Darshan name in front of actor Dhruva sarja video goes viral vcs
Author
First Published Aug 3, 2024, 10:03 AM IST | Last Updated Aug 3, 2024, 10:03 AM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸಿರುವ ಮಾರ್ಟಿನ್ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗುತ್ತಿದೆ. ಫ್ಯಾನ್ ಇಂಡಿಯಾ ಸಿನಿಮಾದ ಪ್ರಮೋಷನ್‌ ಅದ್ಧೂರಿಯಾಗಿ ಶುರುವಾಗಿದೆ. ಮುಂಬೈ ಕಡೆ ಮುಖ ಮಾಡುವ ಮುನ್ನ ಮಾರ್ಟಿನ್ ಸಿನಿಮಾ ತಂಡ ಮಾರ್ಗಮಧ್ಯೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ತಂಡವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಕಳೆದ ವರ್ಷ ಟೀಸರ್ ರಿಲೀಸ್ ಆಗಿ ಬಿಗ್ ಹಿಟ್ ಆಗಿತ್ತು, ಇದೀಗ ಟ್ರೈಲರ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 

ಸಿದ್ಧಗಂಗಾ ಮಠದ ಬಳಿ ಚಿತ್ರದುರ್ಗದ ಮುರುಘಾ ಮಠಕ್ಕೂ ಧ್ರುವ ಸರ್ಜಾ ಮತ್ತು ತಂಡ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಹಿರಿಯೂರಿನಲ್ಲಿ ಧ್ರುವ ಸರ್ಜಾ ಕಾರು ಏರುವ ವೇಳೆ ಅಲ್ಲಿದ್ದ ಜನರು ಏಕಾ ಏಕಿ ಬಾಸ್ ಬಾಸ್ ಡಿಬಾಸ್ ಎಂದು ದರ್ಶನ್ ಅಭಿಮಾನಿಗಳು ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿ ವಿಚಾರದ ಬಗ್ಗೆ ಧ್ರುವ ಸರ್ಜಾ ಕೂಡ ರಿಯಾಕ್ಟ್ ಮಾಡಿ ಕುಟುಂಬದಕ್ಕೆ ಸಹಾಯ ಮಾಡಿದ್ದರು. 

Fans shout Darshan name in front of actor Dhruva sarja video goes viral vcs

'ಯಾರೋ ಒಬ್ಬರು ನೋವಿನಲ್ಲಿದ್ದಾರೆ ಕುಗ್ಗಿದ್ದಾರೆ ಅಂತ ನಾವು ಏನೇನೋ ಮಾತನಾಡೋಕೆ ಆಗಲ್ಲ. ಗುಂಪಲ್ಲಿ ಗೋವಿಂದ ಅಂತ ನಾನೇನೇನೋ ಮಾತನಡುವುದಿಲ್ಲ. ದರ್ಶನ್ ಸರ್ ಅವರಿಗೂ ಒಬ್ಬ ಮಗನಿದ್ದಾಗೆ ಅವರಿಗೂ ಒಂದು ಫ್ಯಾಮಿಲಿ ಇದೆ. ರೇಣುಕಾಸ್ವಾಮಿ ಅವರಿಗೂ ಒಂದು ಕುಟುಂಬ ಇದೆ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ. ಮೊದಲು ನಿರ್ಧಾರವಾಗಲಿ ನಾವು ಏನೇನೋ ಮಾತನಾಡುವುದು ಬೇಡ. ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕು' ಎಂದು ಧ್ರುವ ಸರ್ಜಾ ಮಾತನಾಡಿದ್ದರು. 

ಪ್ರತಿಯೊಬ್ಬರನ್ನು ಸೇರಿಸುವ ಶಕ್ತಿ ಆ ವ್ಯಕ್ತಿಗೆ ಮಾತ್ರ ಇರುವುದು; ಫೋನ್‌ ನೋಡಿ ಕಣ್ಣೀರಿಟ್ಟ ರಂಗಾಯಣ ರಘು

ಡಿ ಬಾಸ್ ಎಂದು ಬಹುತೇಕರು ದರ್ಶನ್‌ಗೆ ಕರೆಯುತ್ತಾರೆ ಆದರೆ ಧ್ರುವ ಸರ್ಜಾ ಅಪ್ಪಟ ಅಭಿಮಾನಿಗಳು ಕೂಡ ಡಿ ಅಂದ್ರೆ ಧ್ರುವ...ಡಿ ಬಾಸ್ ಎಂದು ಕರೆಯುತ್ತಾರೆ. ಈ ವಿಡಿಯೋಗೆ ಸಾಕಷ್ಟು ಪರ ವಿರೋಧ ಚರ್ಚೆಯಾಗುತ್ತಿದೆ. 

 

Latest Videos
Follow Us:
Download App:
  • android
  • ios