ವಯನಾಡಿಗೆ 10 ಲಕ್ಷ ರೂ. ನೀಡಿದ ರಶ್ಮಿಕಾ ; ತಾಯ್ನಾಡಿಗೆ ಕರಗದ ಮನಸ್ಸು ಬೇರೆ ನಾಡಿಗೆ ಮರುಗುತ್ತಿದೆ ಎಂದ ನೆಟ್ಟಿಗರು
ದೇವರ ನಾಡಿಗೆ ಪರಿಹಾರ ನಿಧಿ ನೀಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಒಳ್ಳೆ ಕೆಲಸ ಮಾಡಿದರೂ ಕಾಲೆಳೆದ ನೆಟ್ಟಿಗರು.....
ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ನೂರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ರಕ್ಷಣಾ ಕಾರ್ಯಚರಣೆಯಲ್ಲಿ ಕೇರಳ ಸರಕಾರ ನಿರಂತವಾಗಿದೆ. ಅಲ್ಲಿನ ಜನರಿಗೆ ಸಹಾಯ ಆಗಬೇಕು ಎಂದು ಕೇರಳ ಸಿಎಂ ಪರಿಹಾರ ನಿಧಿ ಸಂಗ್ರಹಿಸುತ್ತಿದ್ದಾರೆ, ಇದನ್ನು ಸೆಲೆಬ್ರಿಟಿಗಳು ಕೈ ಜೋಡಿಸುತ್ತಿದ್ದಾರೆ. ಜ್ಯೋತಿಕಾ, ಸೂರ್ಯಾ, ಕಾರ್ತಿ ಮತ್ತು ವಿಕ್ರಂ ಪರಿಹಾರ ನಿಧಿ ನೀಡಿದ್ದಾರೆ ಅದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ರಶ್ಮಿಕಾ ಮಂದಣ್ಣ 10 ಲಕ್ಷ ರೂಪಾಯಿ ನೀಡಿ ದೇವರ ನಾಡಿನಲ್ಲಿ ಒಳ್ಳೆ ಹುಡುಗಿ ಆಗಿ ತಯ್ನಾಡಿನಲ್ಲಿ ಟ್ರೋಲ್ ಆಗುತ್ತಿದ್ದಾರೆ.
ವಯನಾಡಿನ ಮಹಾ ದುರಂತ ಪ್ರತಿಯೊಬ್ಬರಿಗೂ ನೋವು ತಂದಿದೆ ಮಣಿನೊಳಗೆ ಹುದುಗಿರುವ ಮೃತ ದೇಹಗಳನ್ನು ಹೊರ ತೆಗೆಯುವ ಕೆಲಸ ಇನ್ನೂ ಕರೆಯುತ್ತಿದೆ. ವಯನಾಡಿನ ಭೂಕುಸಿರ ಪೀಡಿತ ಪ್ರದೇಶದ ಪುನರ್ನಿಮಾಣ ಮತ್ತು ಬದುಕುಳಿದವರ ಪುನರ್ವಸತಿಗಾಗಿ ಕೇರಳ ಸರ್ಕಾರದ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ 20 ಲಕ್ಷ ರೂಪಾಯಿ ನೀಡಿದ್ದಾರೆ. ತಮಿಳು ನಟ ಫಹಾದ್ ಫಾಸಿಲ್ ಮತ್ತು ಪತ್ನಿ ನಸ್ರಿಯಾ ಒಟ್ಟು 25 ಲಕ್ಷ ನೀಡಿದ್ದಾರೆ. ಸೂರ್ಯ, ಜ್ಯೋತಿಕಾ ಮತ್ತು ಕಾರ್ತಿ ಒಟ್ಟು 50 ಲಕ್ಷ ರೂಪಾಯಿ ನೀಡಿದ್ದಾರೆ. ಮಮ್ಮುಟ್ಟಿ 15 ಲಕ್ಷ ಮತ್ತು ದುಲ್ಖರ್ ಸಲ್ಮಾನ್ 10 ಲಕ್ಷ ರೂಪಾಯಿ ನೀಡಿದ್ದಾರೆ.
'ಬಾಸ್ ಬಾಸ್ ಡಿಬಾಸ್' ಎಂದು ಕಾರಿನಿಂದ ಇಳಿಯುತ್ತಿದ್ದ ಧ್ರುವ ಸರ್ಜಾ ಮುಂದೆ ಕೂಗಾಡಿದ ಜನರು; ವಿಡಿಯೋ ವೈರಲ್!
ಇನ್ನು ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ 10 ಲಕ್ಷ ರೂಪಾಯಿ ಹಣವನ್ನು ಕೇರಳ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇದನ್ನು ನೋಡಿ ಖುಷಿ ಪಟ್ಟವರಿಗಿಂತ ಆಕ್ರೋಶ ವ್ಯಕ್ತ ಪಡಿಸುತ್ತಿರುವವರು ಹೆಚ್ಚಿದ್ದಾರೆ. ನಮ್ಮ ಕೊಡಗು, ಗಾಟ್ ಸೆಷನ್‌ಗಳಲ್ಲಿ ಭೂಮಿ ಕುಸಿತ ಆಗುತ್ತಿದೆ ಅದಕ್ಕೆ ಸಹಾಯ ಮಾಡುವ ಮನಸ್ಸು ನಿಮಗೆ ಬಂದಿಲ್ಲ ಆದರೆ ವಯನಾಡಿಗೆ ಮನಸ್ಸು ಕರಗಿದೆ. ತಾಯ್ನಾಡಿನಲ್ಲಿ ಭೂಕುಸಿತಕ್ಕೂ ಜನರು ಸತ್ತಿದ್ದಾರೆ, ಮನೆ ಕಳೆದುಕೊಂಡಿದ್ದಾರೆ ಅದರ ಕಡೆಗೂ ಗಮನ ಇರಲಿ. ನಿಮ್ಮ ಊರಿನ ಬಗ್ಗೆ ನಿಮಗೆ ಗೌರವ ಇಲ್ಲವಾದರೆ ಜಾಗ ಕಾಲಿ ಮಾಡಿ ಎಂದು ಕನ್ನಡಿಗರು ಗರಂ ಆಗಿದ್ದಾರೆ.
ಎರಡು ತಿಂಗಳ ಕಾಲ ಹಾಸಿಗೆ ಹಿಡಿದ 'ಶಾಸ್ತ್ರಿ' ಸುಂದರಿ; paralysis ಎಂದು ಹಬ್ಬಿಸಿದವರಿಗೆ ಸ್ಪಷ್ಟನೆ!