ಚಂದನವನದ ಸುಂದರ ಚೆಲುವೆ 'ಪ್ಯಾರ್‌ಗೆ ಆಗ್ಬಿಟ್ಟೈತಿ' ಪರೋಲ್‌ ಯಾದವ್‌ ತಮ್ಮ ಮುದ್ದು ನಾಯಿ ಮರಿ ಜೊತೆ ಕಬ್ಬನ್ ಪಾರ್ಕ್‌ನಲ್ಲಿ ಸೈಕಲ್‌ ಸವಾರಿ ಮಾಡಿದ್ದಾರೆ. 

'ಗೊಂವಿದಾಯ ನಮಃ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪರೋಲ್‌ ಯಾದವ್‌ ಇತ್ತೀಚಿಗೆ ಕಬ್ಬನ್ ಪಾರ್ಕ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಫ್ರೆಂಡ್ಸ್‌ ಜೊತೆಯಲ್ಲ. ಚಿತ್ರಕ್ಕಾಗಿಯೂ ಅಲ್ಲ, ಬದಲಿಗೆ ಅವರ ಮುದ್ದು ಶ್ವಾನ Pluto ಜೊತೆಗೆ. 

'ಬಟರ್‌ಫ್ಲೈ' ಆಗಿ ಹಾರಲು ಸಿದ್ಧರಾಗಿದ್ದಾರೆ ಪಾರುಲ್ ಯಾದವ್!

ಹೌದು! ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಪರೋಲ್‌ ತಮ್ಮ ಪ್ಲೂಟೋ ಜೊತೆ ಸಮಯ ಕಳೆಯುವುದನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಕೆಲವು ದಿನಗಳ ಹಿಂದೆ ಕಬ್ಬನ್ ಪಾರ್ಕ್‌ನಲ್ಲಿ ಪ್ಲೂಟೋ ಜೊತೆ ಟೈಂ ಕಳೆದಿದ್ದಾರೆ. ಅಷ್ಟೇ ಅಲ್ಲದೆ ಟ್ರಿಣ್ ಟ್ರಿಣ್ ಸೈಕಲ್‌ ಬಾಡಿಗೆ ಪಡೆದು ಸೈಕ್ಲಿಂಗ್ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಾಗೂ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 

ಡಿಸೆಂಬರ್‌ 27,2019ರಂದು ಚೆನ್ನೈಗೆ ಸೋಲೋ ಟ್ರಿಪ್‌ ಹೋದಾಗಲೂ ಪ್ಲೂಟೋವನ್ನು ಜೊತೆಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಬೀಚ್‌ ಬಳಿ ಪ್ಲೂಟೋ ಜೊತೆಗೆ ಫೋಟೋ ಅಪ್ಲೋಡ್‌ ಮಾಡಿ #MyBundleofJoy, #Pluto, #Dogsofinstagram ಎಂದು ಬರೆದುಕೊಂಡಿದ್ದಾರೆ. 

View post on Instagram

ಈ ಹಿಂದೆ ಮುಂಬೈನಲ್ಲಿ ಪ್ಲೂಟೋ ಜೊತೆ ವಾಕ್‌ ಮಾಡುವಾಗ ಬೀದಿ ನಾಯಿಗಳು ಇವರ ಮೇಲೆ ಅಟ್ಯಾಕ್ ಮಾಡಿ, ಆಸ್ಪತ್ರಗೂ ದಾಖಲಾಗಿದ್ದರು. ವಿಡಿಯೋ