ಹಿಂದಿಯ ’ಕ್ವೀನ್’ ಚಿತ್ರ ಕನ್ನಡದಲ್ಲಿ ಬಟರ್ ಫ್ಲೈ ಆಗಿ ಬರಲಿದೆ | ಬಟರ್ ಫ್ಲೈ ಆದ ಪಾರುಲ್ ಯಾದವ್ | ರಮೇಶ್ ಅರವಿಂದ್ ಈ ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ 

ಬೆಂಗಳೂರು (ಏ. 15): ಪ್ಯಾರ್ ಗೆ ಆಗ್ಬುಟೈತೆ ಹುಡುಗಿ ಪಾರುಲ್ ಯಾದವ್ ಬಟರ್ ಫ್ಲೈ ಆಗಿ ತೆರೆ ಮೇ ಹಾರಾಡಲಿದ್ದಾರೆ. ಸೇಮ್ ಟು ಸೇಮ್ ಬಟರ್ ಫ್ಲೈ ರೀತಿ ಕಲರ್ ಕಲರ್ರಾಗಿರೋ ಬಟ್ಟೆ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಟ್ ಮಾಡಿದ್ದಾರೆ. ಇದ್ಯಾಕೆ ಈ ಗೆಟಪ್ಪು ಅಂತೀರಾ? ಅವರೇ ನಟಿಸಿ ಸಹ ನಿರ್ಮಾಣವನ್ನು ಮಾಡಿರುವ ಬಟರ್ ಫ್ಲೈ ಚಿತ್ರದ ಪ್ರಚಾರಕ್ಕಾಗಿ ಅವರೇ ಬಟರ್ ಫ್ಲೈ ಆಗಿದ್ದಾರೆ. 

View post on Instagram

ಹಿಂದಿಯಲ್ಲಿ ಸೂಪರ್ ಡೂಪರ್ ಹಿಟ್ ಆದ ಕಂಗನಾ ರಾಣಾವತ್ ಅವರ ’ಕ್ವೀನ್’ ಸಿನಿಮಾವನ್ನು ರಮೇಶ್ ಅರವಿಂದ್ ನಾಲ್ಕು ಭಾಷೆಗಳಲ್ಲಿ ರಿಮೇಕ್ ಮಾಡಿದ್ದಾರೆ. ಕನ್ನಡದಲ್ಲಿ 'ಬಟರ್ ಫ್ಲೈ’ ಆಗಿ ಮೂಡಿ ಬರಲಿದೆ. ಪಾರುಲ್ ಯಾದವ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯದಲ್ಲೇ ಈ ಚಿತ್ರ ತೆರೆ ಮೇಲೆ ಬರಲಿದೆ.