ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಪರ್ವ ಶುರುವಾಗಿದೆ. ಕಳೆದ ವಾರ ಧ್ರುವಾ ಸರ್ಜಾ- ಪ್ರೇರಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಿನ್ನೆ ಹಿತಾ ಚಂದ್ರಶೇಖರ್ ಸಪ್ತಪದಿ ತುಳಿದಿದ್ದಾರೆ. ಈ ಸಾಲಿಗೆ ಇನ್ನೊಂದೆರಡು ದಿನದಲ್ಲಿ ನಿತ್ಯಾ ರಾಮ್ ಸೇರ್ಪಡೆಯಾಗಲಿದ್ದಾರೆ. 

ಡಿಂಪಲ್ ಕ್ವೀನ್ ರಚಿತಾ ರಾಮ್ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ತಂಗಿ ನಿತ್ಯಾ ರಾಮ್ ವಿವಾಹ ಡಿಸಂಬರ್ 5-6 ರಂದು ಜರುಗಲಿದೆ.  ಇದೀಗ ನಿಶ್ಚಿತಾರ್ಥ ಶಾಸ್ತ್ರ ಮುಗಿದಿದೆ. 

ರಾಧಿಕಾ - ಯಶ್‌ ಲಿಟಲ್‌ ಪ್ರಿನ್ಸಸ್‌ಗೆ ಹ್ಯಾಪಿ ಬರ್ತಡೇ!

ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಬ್ಯುಸಿನೆಸ್ ಮ್ಯಾನ್‌ರನ್ನು ನಿತ್ಯಾ ರಾಮ್ ವರಿಸಲಿದ್ದಾರೆ.  ಉಂಗುರ ಬದಲಾಯಿಸಿರುವ ಫೋಟೋವನ್ನು ನಿತ್ಯಾ ರಾಮ್ ಶೇರ್ ಮಾಡಿಕೊಂಡಿದ್ದಾರೆ. 

 

ರಚಿತಾ ರಾಮ್ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದರೆ ನಿತ್ಯಾ ರಾಮ್ ಕಿರುತೆರೆಯಲ್ಲಿ ಹೆಸರು ಮಾಡಿದ್ದಾರೆ. 'ಬೆಂಕಿಯಲ್ಲಿ ಅರಳಿದ ಹೂ', 'ಕರ್ಪೂರದ ಗೊಂಬೆ',  'ಎರಡು ಕನಸು', ನಂದಿನಿ ದಾರಾವಾಹಿಯಲ್ಲಿ ನಟಿಸಿದ್ದಾರೆ.  'ಮುದ್ದು ಮನಸು' ಎನ್ನುವ ಸಿನಿಮಾದಲ್ಲಿಯೂ ನಟಿಸಿದ್ದಾರೆ.