Asianet Suvarna News Asianet Suvarna News

ಈಗಷ್ಟೇ ನಿರ್ದೇಶಕಿಯಾದ ದರ್ಶನ್‌ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ?

'ಲವ್ ಮಾಕ್‌ಟೇಲ್‌' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮಿಂಚಲು ಸಜ್ಜಾಗುತ್ತಿರುವ ಮಿಲನಾ ನಾಗರಾಜ್‌ ಯಾರಿಗೂ ತಿಳಿಸದಂತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂದು ಹರಿದಾಡುತ್ತಿರುವ ಗಾಳಿ ಮಾತಿಗೆ ಅವರೇ ಕೊಟ್ಟ ಕ್ಲಾರಿಟಿ ಇಲ್ಲಿದೆ ನೋಡಿ....
 

Kannada actress Milana Nagraj clarifies rumours about marriage
Author
Bangalore, First Published Jan 30, 2020, 10:19 AM IST
  • Facebook
  • Twitter
  • Whatsapp

'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮಿಲನಾ ನಾಗರಾಜ್‌ ನಾಯಕಿಯಾಗಿ ಮಾತ್ರವಲ್ಲದೆ ನಿರ್ದೇಶಕಿಯಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಜೊತೆ 2013ರಲ್ಲಿ 'ಬೃಂದಾವನ' ಚಿತ್ರದಲ್ಲಿ ಮಿಂಚಿದ್ದಾರೆ. ಸದ್ಯಕ್ಕೆ 'ಲವ್‌ ಮಾಕ್‌ಟೇಲ್‌'ಚಿತ್ರದಲ್ಲಿ ಡಾರ್ಲಿಂಗ್‌ ಕೃಷ್ಣ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಜನವರಿ 31ರಂದು ರಾಜ್ಯಾದ್ಯಂತ ಈ ಚಿತ್ರ ತೆರೆ ಕಾಣುತ್ತಿದೆ. 

ನಿರ್ಮಾಪಕಿಯಾದ ದರ್ಶನ್ 'ಬೃಂದಾವನ' ನಟಿಗೆ; ಕಿಚ್ಚ ಸುದೀಪ್‌ ಬೆಂಬಲ!

ಈಗಷ್ಟೇ ನಿರ್ದೇಶಕಿ ಆದ ಮಿಲನ ಮದುವೆ ಆಗಲು ರೆಡಿಯಾದ್ರಾ? 

ತಮ್ಮ ಮೊದಲ ಚಿತ್ರ 'ನಮ್ ದುನಿಯಾ ನಮ್ ಸ್ಟೈಲ್‌'ನಲ್ಲಿ ಡಾರ್ಲಿಂಗ್‌ ಕೃಷ್ಣಗೆ ಜೋಡಿಯಾಗಿದ್ದ ಮಿಲನಾ ತಾವು ಲಾಂಚ್‌ ಮಾಡುತ್ತಿರುವ ಚಿತ್ರಕ್ಕೂ ಕೃಷ್ಣ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇವರಿಬ್ಬರ ನಡುವೇ ಏನೋ ನಡೆಯುತ್ತಿದೆ. ಸದ್ದಿಲ್ಲದೆ ಇಬ್ಬರು ಮದುವೆ ಆಗುತ್ತಿದ್ದಾರೆ ಎಂಬ ಮಾತಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ವತಃ ಮಿಲನಾ ನಾಗರಾಜ್‌ ಖಾಸಗಿ ವೆಬ್ಸೈಟ್‌ಗೆ ಕ್ಲಾರಿಟಿ  ನೀಡಿದ್ದಾರೆ. 

'ಲವ್ ಮಾಕ್‌ಟೈಲ್‌' ನಲ್ಲಿ ಕಿಚ್ಚ ಸುದೀಪ್

''ಸಿನಿಮಾ ವಿಚಾರದಲ್ಲಿ ತುಂಬಾ ಬ್ಯುಸಿಯಾಗಿರುವೆ. ಪ್ರೀತಿ ಮದುವೆ ಎಂದು ಯಾವುದೂ ಇಲ್ಲ. ಇದೆಲ್ಲ ಸುಳ್ಳು ಸುದ್ದಿ. ಯಾಕೆ ಹೀಗೆ ಹಬ್ಬುತ್ತಿದೆಯೋ ತಿಳಿಯುತ್ತಿಲ್ಲ' ಎಂದು ಮಾತನಾಡಿದ್ದಾರೆ.

Follow Us:
Download App:
  • android
  • ios