Asianet Suvarna News Asianet Suvarna News

ಮುಖ ಕೆಂಪಾಗುವವರೆಗೂ ಮುದ್ದಾಡುವೆ: #Happybirthday ರಾಯನ್‌ ರಾಜ್‌ ಸರ್ಜಾ!

ಪುತ್ರನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿರುವ ಮೇಘನಾ ರಾಜ್‌ ಸೋಷಿಯಲ್ ಮೀಡಿಯಾದಲ್ಲಿ ಸ್ಪೆಷಲ್‌ ಪೋಸ್ಟ್ ಹಾಕಿದ್ದಾರೆ. 

Kannada actress Meghana Raj special birthday wishes to son Rayaan Raj Sarja  vcs
Author
Bangalore, First Published Oct 22, 2021, 1:30 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದ (Sandalwood) ಮುದ್ದು ಮುಖದ ಚೆಲುವೆ ಮೇಘನಾ ರಾಜ್ (Meghana Raj) ಇಂದು ಪುತ್ರನ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಅಮ್ಮ-ಮಗ ಒಂದೇ ಡಿಸೈನ್ ಮತ್ತು ಬಣ್ಣದ ಬಟ್ಟೆಯನ್ನು ಧರಿಸಿ, ಫೋಟೋ ಶೂಟ್ ಮಾಡಿದ್ದಾರೆ. ಇಬ್ಬರೂ ಮುದ್ದಾಡಿ, ಗೊಂಬೆ (Toys) ಜತೆ ಆಟ ಆಡುತ್ತಿರುವ ಫೋಟೋ ನೋಡಬಹುದು. 

Act ಮಾಡ್ತೀಯಾ ಅಂತ ಕೇಳ್ದಾಗ ಕಣ್ಣೀರು ಬಂತು, ಚಿರುಗೆ ಈ ಸಿನಿಮಾ ಇಷ್ಟ ಆಗುತ್ತದೆ: ಮೇಘನಾ ರಾಜ್

'ನಮ್ಮ ಬೇಬಿ, ನಮ್ಮ ಪ್ರಪಂಚ , ನನ್ನ ಯೂನಿವರ್ಸ್ (Universe), ನನ್ನ ಸರ್ವಸ್ವ. ಚಿರು (Chiru)..ನಮ್ಮ ಪುಟ್ಟ ಪ್ರಿನ್ಸ್‌ಗೆ ಇಂದು ಒಂದು ವರ್ಷ. ಸಾಕು ಅಮ್ಮ  ಎನ್ನುವವರೆಗೂ ಮುದ್ದಾಡುವೆ. ಎಷ್ಟರ ಮಟ್ಟಕ್ಕೆ ಮುದ್ದಾಡುವೆ ಅಂದ್ರೆ ಆತನ ಮುಖ ಕೆಂಪಾಗಿ embarrassment ಆಗೋ ತನಕ. ಅವನಿಗೆ ಮೃದುವಾಗಿ ಮುತ್ತಿಡುವೆ, ಕಣ್ಣು ತಿರುಗಿಸಿಕೊಂಡು ಅಮ್ಮ ಅಂತ ಹೇಳುವವರೆಗೂ ಮುತ್ತು (Kiss) ಕೊಡುತ್ತಲೇ ಇರುತ್ತೇನೆ. ನಾನು ವಿಶ್ ಮಾಡುವುದು ಒಂದೇ, ಒಬ್ಬರ ತೋಳಲ್ಲಿ ಮತ್ತೊಬ್ಬರು ಮುದ್ದಾಡಿಕೊಂಡು, ಜೀವನ ಪೂರ್ತಿ ಹೀಗೆ ಇರಬೇಕು. ಹ್ಯಾಪಿ ಬರ್ತಡೇ ರಾಯನ್. ಅಪ್ಪ ಅಮ್ಮ ಲವ್ ಯು,' ಎಂದು ಬರೆದುಕೊಂಡಿದ್ದಾರೆ. 

Kannada actress Meghana Raj special birthday wishes to son Rayaan Raj Sarja  vcs

ರಾಯನ್ ಬರ್ತ್‌ಡೇ ತಯಾರಿ ತಡವಾಗಿ ಶುರು ಮಾಡಿಕೊಂಡರೂ ಮೇಘನಾ ಬರುವ ಪ್ರತಿಯೊಬ್ಬ ಅತಿಥಿಗೂ ರಿಟರ್ನ್‌ ಗಿಫ್ಟ್‌ (Return Gifts) ರೆಡಿ ಮಾಡಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ (Instagram) ಸ್ಟೋರಿಯಲ್ಲಿ ಸಣ್ಣ ಸುಳಿವು ನೀಡಿದ್ದಾರೆ, ಹ್ಯಾಂಡ್‌ ಮೇಡ್‌ ಸೋಪ್‌ (Handmade soap) ಇರುವುದಂತೂ ಕನ್ಫರ್ಮ್ ಎನ್ನಬಹುದು.  ಇನ್ನು ಪಾರ್ಟಿಗೆ ರಾಯನ್ ರೆಡಿ ಆಗುತ್ತಿರುವಂತೆ, ಫಿಲ್ಟರ್ ಬಳಸಿ ವಿಡಿಯೋ ಹಾಕಿದ್ದರು. ಮೇಘನಾ ರಾಜ್‌ ಮತ್ತು ಚಿರಂಜೀವಿ ಸರ್ಜಾ ಆಪ್ತ ಗೆಳೆಯ ಪ್ರನ್ನಗಾಭರಣ ಪುತ್ರ ವೇದ್ (Ved) ಮನೆಯಲ್ಲಿ ರಾಯನ್‌ಗೆ ಕೇಕ್ (Cake) ತಯಾರಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 'ಹಾಯ್ ಮೇಘಿ, ನಾನು ರಾಯನ್ ರಾಜ್ ಸರ್ಜಾಗೆ ಕೇಕ್ ತಯಾರಿಸುತ್ತಿರುವೆ,' ಎಂದು ತೊದಲು ಮಾತನಾಡಿದ್ದಾನೆ. 'ನಮ್ಮ ಪುಟ್ಟ ಹುಡುಗನಿಗೆ ಒಂದು ವರ್ಷ. ನನ್ನ ಸಂಪೂರ್ಣ ಪ್ರೀತಿ ನಿನಗೆ,' ಎಂದು ಪನ್ನಗಾ (Pannagha Bharana) ಬರೆದುಕೊಂಡಿದ್ದಾರೆ.  ಸೋಷಿಯಲ್ ಮೀಡಿಯಾದಲ್ಲಿ ರಾಯನ್‌ಗೆ ಶುಭಾಶಯಗಳು ಹರಿದು ಬರುತ್ತಿದೆ. 

ಮಹಾರಾಣಿ ರೀತಿ ಅಲಂಕರಿಸಿ ಚಿರು ಪೋಟೋ ಪೇಂಟಿಂಗ್ ಮಾಡಿದ ಮೇಘನಾ ರಾಜ್!

ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನ ಮೇಘನಾ ರಾಜ್‌ ಕನ್ನಡ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಸುದ್ದಿಗೋಷ್ಠಿ ನಡೆಸಿದ್ದರು. ಸ್ನೇಹಿತ ಪನ್ನಗಾಭರಣ ನಿರ್ಮಾಣ (PB productions), ವಿಶಾಲ್ (Vishal) ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಹೆಸರಿಡಬೇಕಿದೆ. ವಿಶೇಷ ದಿನದಂದು ಅನೌನ್ಸ್ ಮಾಡುವುದಾಗಿ ತಂಡ ತಿಳಿಸಿದೆ.

 

 
 
 
 
 
 
 
 
 
 
 
 
 
 
 

A post shared by Meghana Raj Sarja (@megsraj)

Follow Us:
Download App:
  • android
  • ios