ಸ್ಯಾಂಡಲ್‌ವುಡ್‌ ಬ್ಯೂಟಿಫುಲ್ ಹಾರ್ಟ್‌ ಚೆಲುವೆ ಮೇಘನಾ ರಾಜ್‌ ಅಕ್ಟೋಬರ್ 22,2020ರಲ್ಲಿ ಪುತ್ರ ಜೂನಿಯರ್ ಚಿರುನ ಬರ ಮಾಡಿಕೊಂಡ ದಿನದಿಂದಲೂ, ಪತಿಯನ್ನು ಕಳೆದುಕೊಂಡು ನೋವಿದ್ದರೂ ಲೈಫ್‌ ಈಸ್‌ ಬ್ಯೂಟಿಫುಲ್‌ ಎನ್ನುತ್ತಿದ್ದಾರೆ. ಇದಕ್ಕೆ ಸಾಕ್ಷಿ ಮೇಘನಾ ಎಂಜಾಯ್ ಮಾಡುತ್ತಿರುವ ಮದರ್‌ವುಡ್‌ ದಿನಗಳು. ಪುತ್ರನ ಬೆಳವಣಿಗೆಯ ಪ್ರತಿ ಕ್ಷಣವನ್ನೂ ರೆಕಾರ್ಡ್‌ ಮಾಡುತ್ತಾ, ತಮ್ಮ ನೋವನ್ನು ಮರೆಯುತ್ತಿದ್ದಾರೆ. 

ಕಿಶೋರ್‌ ಸರ್ಜಾ ಪುತ್ರ ಸೂರಜ್‌ ಮಡಿಲಲ್ಲಿ ಚಿರಂಜೀವಿ ಪುತ್ರ ಜೂನಿಯರ್; ಫೋಟೋ ವೈರಲ್! 

ಮೇಘನಾ ರಾಜ್‌ ಎಷ್ಟು ಸ್ಟ್ರಾಂಗ್ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ಆದರೆ ಮೇಘನಾ ಅಷ್ಟೊಂದು ಸ್ಟ್ರಾಂಗ್ ಆಗಲು ಕಾರಣ ಯಾರು? ನ್ಯೂ ಮಮ್ಮೀಸ್‌ಗೆ ಸ್ಪೂರ್ತಿಯಾಗಿರುವ ಮೇಘನಾಗೆ ಸ್ಪೂರ್ತಿ ಯಾರು? ಈ ಪ್ರಶ್ನೆಗೆಲ್ಲಾ ಒಂದು ಮೀನಿಂಗ್‌ಫುಲ್‌ ಸ್ಟೋರಿ ಮೂಲಕ ಉತ್ತರ ನೀಡಿದ್ದಾರೆ. 

'ನಾನು ನನ್ನ ತಾಯಿಯಾಗಿ ಬದಲಾದರೆ ಅಥವಾ ಆಕೆಗೆ ಇರುವ ಗುಣಗಳ ಅರ್ಧದಷ್ಟು ನಾನಾದರೆ ನಿಜಕ್ಕೂ ನನ್ನ ಜೀವನ ಸಾರ್ಥಕ ಎಂದು ಭಾವಿಸುವೆ,' ಎಂದು ಕೋಟ್ ಇರುವ ಫೋಟೋವನ್ನು ಮೇಘನಾ ಶೇರ್ ಮಾಡಿಕೊಂಡಿದ್ದಾರೆ. ಪುಟ್ಟ ಕಂದಮ್ಮಗಳ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು, ಯಾವ ವಸ್ತು ಅವರ ಆರೈಕೆಗೆ ಬೆಸ್ಟ್‌ ಎಂದು  ಹಂಚಿಕೊಳ್ಳುತ್ತಾರೆ.

ಸಣ್ಣಪುಟ್ಟ ಜಗಳ, ನಿನ್ನ ನಗು, ಬಾಗಿಲಲ್ಲಿ ನಿಂತು ಕಾಯುತ್ತಿದ್ದ ದಿನವೇ ನೆನಪು: ಪನ್ನಗ ಭರಣ 

ಸದ್ಯ ಬೆಂಗಳೂರಿನ ಜಯನಗರದಲ್ಲಿರುವ ಪೋಷಕರ ಮನೆಯಲ್ಲಿ ಮೇಘನಾ ರಾಜ್‌ ಬಾಣಂತನ ಎಂಜಾಯ್ ಮಾಡುತ್ತಿದ್ದಾರೆ.  ಕುಟುಂಬಸ್ಥರು ಹಾಗೂ ಸ್ನೇಹಿತರು ಮೇಘನಾಗೆ ಜೊತೆಯಾಗಿ ಜೂನಿಯರ್‌ಗೆ ಜೀವನದಲ್ಲಿ ಸಿಗಬೇಕಾದ 'Best Moments'ಗಳನ್ನು ನೀಡುತ್ತಿದ್ದಾರೆ.