ಸಣ್ಣಪುಟ್ಟ ಜಗಳ, ನಿನ್ನ ನಗು, ಬಾಗಿಲಲ್ಲಿ ನಿಂತು ಕಾಯುತ್ತಿದ್ದ ದಿನವೇ ನೆನಪು: ಪನ್ನಗ ಭರಣ
ದಿವಂಗತ ನಟ ಚಿರಂಜೀವಿ ಸರ್ಜಾ ಆಪ್ತ ಸ್ನೇಹಿತ ಪನ್ನಗ ಭರಣ ಅಗಲಿದ ಗೆಳೆಯನ ಜೊತೆ ಕಳೆದ ಸಂತೋಷದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾರೆ. ಕವನವೊಂದನ್ನು ಬರೆದು ಶೇರ್ ಮಾಡಿಕೊಂಡಿದ್ದಾರೆ.
ಚಿರಂಜೀವಿ ಸರ್ಜಾ ಅಂದ್ರೆ ಮೊದಲು ಜ್ಞಾಪಕ ಬರುವುದೇ ಆ ನಗು ಮುಖ. ಸಿನಿಮಾದಲ್ಲಿ ಕೋಪ ಮಾಡಿಕೊಂಡಿದ್ದನ್ನು ನೋಡಿದ್ದೀವಿ ಬಿಟ್ಟರೆ, ಆ ವ್ಯಕ್ತಿಗೆ ಕೋಪ ಎಂಬ ಪದದ ಅರ್ಥವೇ ಗೊತ್ತಿರಲಿಲ್ಲ. ಎಲ್ಲರೂ ನಮ್ಮವರು, ಎಲ್ಲರೂ ಒಟ್ಟಾಗಿರಬೇಕು ಎಂಬುವುದು ಚಿರು ಜೀವನದ ಪಾಲಿಸಿಯೂ ಹೌದು! ಚಿರಂಜೀವಿ ಬಾಲ್ಯದ ಗೆಳೆಯ ಪನ್ನಗ ಇನ್‌ಸ್ಟಾಗ್ರಾಂನಲ್ಲಿ ಬರೆದಿರುವ ಸಾಲುಗಳಿವು....
ಮೇಘನಾ ರಾಜ್ ಭೇಟಿ ಮಾಡಲು ಬರೋದಾ ಎಂದ ಪನ್ನಗಾಭರಣ ಪುತ್ರ; ವಿಡಿಯೋ ವೈರಲ್!
'ಚಿರು.. ನಿನ್ನ ಜೊತೆ ಕಳೆಯುತ್ತಿದ್ದ Never ending ರಾತ್ರಿಗಳು, ನಮ್ಮ ಸಣ್ಣಪುಟ್ಟ ಜಗಳ, ನಿನ್ನ ಸದಾ ನಗುವ ಮುಖ. ನಮ್ಮ ಆ ದಿನಗಳನ್ನು ನಾನು ನೆನಪಿಸಿಕೊಳ್ಳುತ್ತಿರುವೆ. ನಮ್ಮ ಸ್ನೇಹದ ಆರಂಭದ ದಿನಗಳು ನನಗೆ ಮತ್ತೆ ಬೇಕು. ನೀನು ಹೇಳಿದ ಅದೆಷ್ಟೋ ವಿಚಾರಗಳಿಗೆ ನಾನು ಗಮನ ಕೊಟ್ಟಿಲ್ಲ. ಆದರೀಗ ಅದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕಿದೆ, ಈಗ ಬೆಲೆ ಕೊಡುತ್ತಿರುವೆ. ನಿನ್ನನ್ನು ನೋಡಲು ಬಯಸುತ್ತಿರುವೆ, ಮನೆ ಬಾಗಿಲಲ್ಲಿ ಚಡ್ಡಿ ಧರಿಸಿ ನಿಂತು 'ಇಷ್ಟು ಬೇಗ ಹೋಗ ಬೇಡ್ರೋ' ಅಂತ ಹೇಳುತ್ತಿದ್ದೆ. ಮಿಸ್ ಮಾಡಿಕೊಳ್ಳುತ್ತಿರುವೆ,' ಎಂದು ಬರೆದಿರುವ ಪನ್ನಗ, ಮೇಘನಾ ಹಾಗೂ ಚಿರು ಜೊತೆಗೆರುವ ಸೆಲ್ಫಿ ಶೇರ್ ಮಾಡಿಕೊಂಡಿದ್ದಾರೆ.
'ನಿನ್ನ ನೇತೃತ್ವದಲ್ಲಿ ಏನಾದರೂ ಕೆಲಸ ನೆಡೆಯಬೇಕು ಅಂದ್ರೆ ಅದು ನೀನು ಹೇಳಿದ್ದ ರೀತಿಯಲ್ಲೇ ಆಗಬೇಕಿತ್ತು. ನಾನು ನಿನಗೆ ಹೇಳುತ್ತಿದ್ದದ್ದನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೀಗ ಅದನ್ನು ಒಪ್ಪಿಕೊಳ್ಳದೇ ಬೇರೆ ದಾರಿಯೇ ಇಲ್ಲ. ನಿನ್ನಿನ್ನೂ ಇರಬೇಕಿತ್ತು...ನಮ್ಮನ್ನು ತಬ್ಬಿಕೊಂಡು ಗುಡ್ ಬೈ ಹೇಳಬೇಕಿತ್ತು. ನೀನು ಒಬ್ಬನೇ ಹೋಗಿದ್ದು ಸರಿ ಅಲ್ಲ. 'I will see you soon' ಅಂತ ಹೇಳದೇ ಹೋದೆ. ಆದದ್ದೆಲ್ಲಾ ಸುಳ್ಳಾಗಬೇಕು. ನಕ್ಷತ್ರ ತುಂಬಿರುವ ಆಕಾಶವನ್ನು ನೋಡಿ ಸದಾ ಚಿಂತಿಸುವೆ, ಇನ್ನು ಮುಂದೆ ನೀನು 'ಮಚ್ಚಾ ಮನೆಗೆ ಬಾ' , 'ಇರ್ಲಿ ಎಲ್ಲಾ ಮುಗ್ಸಿ ಬಾ ಮನೆಗೆ' ಅಂತ ಹೇಳೋಕೆ ಇರಲ್ಲ ಎಂದು.'
ಚಿರು ಅಗಲಿ 1 ತಿಂಗಳು; ಸ್ನೇಹಿತರೆಲ್ಲಾ ಗೆಳೆಯನನ್ನು ಸ್ಮರಿಸಿದ್ದು ಹೀಗೆ!
'ಸಾವು ಅಷ್ಟು ಸುಲಭವಲ್ಲ ಗೆಳೆಯ. ಈ ನೋವನ್ನು ತಡೆಯುವ ಶಕ್ತಿ ನನಗೆ ನೀಡಿರುವೆ. ನನ್ನ ಸಹೋದರನಿಗಿಂತ ಹೆಚ್ಚಾಗಿ ಪ್ರೀತಿಸುತ್ತೆನೆ. ನಮ್ಮ ಸ್ನೇಹದಲ್ಲೇ ಕುಟುಂಬ ಕಂಡು ಕೊಂಡೆವು. ಜೀವನ ಅವಕಾಶ ಕೊಟ್ಟರೆ, ನಾನು ಮತ್ತೆ ನಿನ್ನ ಸ್ನೇಹಿತನಾಗಿ ಅದೇ ಅಧ್ಯಾಯ ಆರಂಭಿಸಲು ಇಷ್ಟ ಪಡುತ್ತೇನೆ. ಆಗ ನಾನು ಮೊದಲು ಬಿಟ್ಟು ಹೋಗುತ್ತೇನೆ, ಒಬ್ಬನೇ ನೀನು ಹೇಗಿದ್ಯಾ ಎಂದು ತಿಳಿದುಕೊಳ್ಳಲು,' ಎಂದು ಬೆರದ ಪನ್ನಗ ಭಾವುಕರಾಗಿದ್ದಾರೆ.