ಲಾಕ್‌ಡೌನ್‌ನಲ್ಲಿ ಸ್ನಾತಕೋತ್ತರ ಪದವಿ; ಎರಡು ಸೆಮಿಸ್ಟರ್ ಮುಗಿಸಿದ ನಟಿ ಮಾನ್ವಿತಾ ಕಾಮತ್
ಲಾಕ್‌ಡೌನ್ ಸಮಯವನ್ನು ಉತ್ತಮವಾಗಿ ಬಳಸಿಕೊಂಡ ನಟಿ ಮಾನ್ವಿತಾ ಕಾಮತ್. ಸಿನಿಮಾ ಮತ್ತು ಅಡುಗೆ ಮಾಡುವುದು ಹೊಸ ಉತ್ಸಾಹ.
ಕೊರೋನಾ ಲಾಕ್‌ಡೌನ್ ಸಮಯವನ್ನು ನಟ-ನಟಿಯರು ವಿಭಿನ್ನವಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಕೆಲವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರೆ ಇನ್ನೂ ಕೆಲವರು ಫಿಟ್ನೆಸ್, ಡಯಟ್, ಇನ್‌ಸ್ಟಾಗ್ರಾಂ ರೀಲ್ಸ್ ಮಾಡುತ್ತಿದ್ದಾರೆ. ಆದರೆ ನಟಿ ಮಾನ್ವಿತಾ ಕಾಮತ್ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ.
ಅಡುಗೆ ಮಾಡುತ್ತಿದ್ದೇನೆ, ಕತೆ ಬರೆಯುತ್ತಿದ್ದೇನೆ; ಮಾನ್ವಿತಾ ಕಾಮತ್ ಲಾಕ್‌ಡೌನ್ ಡೈರಿ
ಹೌದು! ಮಾನ್ವಿತಾ ಈ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಆನ್‌ಲೈನ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದಾರೆ. ಇಂಟರ್‌ನ್ಯಾಷನಲ್ ಕಮ್ಯೂನಿಕೇಶನ್ ಮತ್ತು ಮೀಡಿಯಾ ಸ್ಟಡೀಸ್‌ನಲ್ಲಿ ಈಗಾಗಲೇ ಎರಡು ಸೆಮಿಸ್ಟರ್ ಮುಗಿಸಿದ್ದಾರೆ. ರಿಸರ್ಚ್ ಪೇಪರ್‌ಗಳು ನಮ್ಮ ದಿನವನ್ನು ಬ್ಯುಸಿಯಾಗಿಡುತ್ತದೆ ಎಂದಿದ್ದಾರೆ.
ಈ ಹಿಂದೆಯೇ ಮಾನ್ವಿತಾ ಹೇಳಿದ ಹಾಗೆ ನಟನೆ ಮಾತ್ರವಲ್ಲ ಸಿನಿಮಾರಂಗದ ಅನೇಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಫಿಲ್ಮ್‌ಮೇಕಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಸಿನಿಮಾ ಕಥೆ ಬರೆಯುತ್ತಿದ್ದಾರೆ. 'ಓಟಿಟಿ ತುಂಬಾ ದೊಡ್ಡ ವ್ಯತ್ಯಾಸ ಮಾಡುತ್ತದೆ. ಓಟಿಟಿಯಿಂದ ದೊಡ್ಡ ಪರದೆಗೆ ನಟ, ನಟಿಯರು ಬರುತ್ತಿರುವುದನ್ನು ನೋಡಬಹುದು. ಮುಂಬರುವ ದಿನಗಳಲ್ಲಿ ಡಿಜಿಟಲ್ ವರ್ಲ್ಡ್ ಎಲ್ಲಾ, ಚಿತ್ರಮಂದಿರಕ್ಕೆ ಅಭಿಮಾನಿಗಳು ಬರುವವರಿಗೂ ಆನ್‌ಲೈನ್‌ನಲ್ಲಿ ಮನೋರಂಜನೆ'ಎಂದು ಟೈಮ್ಸ್‌ಗೆ ಹೇಳಿದ್ದಾರೆ.