Asianet Suvarna News Asianet Suvarna News

ಮಾಲಾಶ್ರೀ ಜತೆ ಯಾರು ನಟಿಸಿದ್ರೂ ಸ್ಟಾರ್‌, ಆದ್ರೆ ಈ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ! ಈಗೆಲ್ಲಿದ್ದಾರೆ ಗೊತ್ತಾ?

ಕನಸಿನ ರಾಣಿ ಮಾಲಾಶ್ರೀ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನಸು ಕದ್ದಾಕೆ. ಆಕೆ ನಟಿಸಿದ ಎಲ್ಲಾ ನಟರೂ ಸ್ಟಾರ್‌ಗಳೇ, ಜೊತೆಗೆ ಅವರೊಂದಿಗೆ ನಟಿಸಿದವರು ಕೂಡ ಸ್ಟಾರ್ ಆಗಿ ಮೆರೆದವರೇ ಆಗಿದ್ದಾರೆ. ಆದರೆ ಈ ಒಬ್ಬ ನಟನಿಗೆ ಅದೃಷ್ಟ ಕೈಕೊಡಲಿಲ್ಲ.

kannada actress Malashree casting Raja Kempu Roja  with  actor raviraj gow
Author
First Published Aug 4, 2024, 6:33 PM IST | Last Updated Aug 4, 2024, 6:33 PM IST

ಕನಸಿನ ರಾಣಿ ಮಾಲಾಶ್ರೀ ತಮ್ಮ ಅದ್ಭುತ ನಟನೆಯಿಂದ ಎಲ್ಲರ ಮನಸು ಕದ್ದಾಕೆ. ಆಕೆ ನಟಿಸಿದ ಎಲ್ಲಾ ನಟರೂ ಸ್ಟಾರ್‌ಗಳೇ, ಜೊತೆಗೆ ಅವರೊಂದಿಗೆ ನಟಿಸಿದವರು ಕೂಡ ಸ್ಟಾರ್ ಆಗಿ ಮೆರೆದವರೇ ಆಗಿದ್ದಾರೆ. ಅನಂತ್ ನಾಗ್, ಪ್ರಜ್ವಲ್ ದೇವರಾಜ್, ಶಶಿಕುಮಾರ್, ಸುನಿಲ್ ಅವರಂತಹ ನಟರಿಗೆ ಟಕ್ಕರ್ ಕೊಟ್ಟು ನಟಿಸುತ್ತಿದ್ದ ನಟಿ. ಕನ್ನಡ ಚಿತ್ರದಲ್ಲಿ ಲೇಡಿ ಡಾನ್ ಪಟ್ಟ ಪಡೆದುಕೊಂಡಿದ್ದ ನಟಿ ಒಂದೇ ವರ್ಷಕ್ಕೆ 16 ಚಿತ್ರಗಳಲ್ಲಿ ನಟಿಸಿ ದಾಖಲೆ ಕೂಡ ಮಾಡಿದ್ದರು. 

ಅವರಿಗೆ ಎಷ್ಟು ಬೇಡಿಕೆ ಇತ್ತು ಎಂದರೆ ಮಾಲಾಶ್ರೀ ಅವರೊಂದಿಗೆ ನಟಿಸಲು ಸ್ಟಾರ್ ನಟರು ಕೂಡ ಕಾದು ಕುಳಿತಿರುತ್ತಿದ್ದ ಕಾಲವದು. ಹೊಸ ನಟರೇನಾದರು ಇವರ ಜೊತೆಗೆ ನಟಿಸುತ್ತಿದ್ದಾರೆ ಎಂದು ಸ್ಟಾರ್ ಗಿರಿ ತಂದುಕೊಡುತ್ತಿತ್ತು. ಆದರೆ ಕೆಲ ನಟರಿಗೆ  ಅದೃಷ್ಟ ಕೈ ಹಿಡಿಯಲಿಲ್ಲ. ಅಂತವರಲ್ಲಿ ಒಬ್ಬರು ರವಿರಾಜ್.

 ಆ ಒಂದು ಘಟನೆಯಿಂದ ರಾತ್ರಿಪೂರ್ತಿ ನಿದ್ದೆ ಮಾಡದೆ, ಖಿನ್ನತೆಗೆ ಜಾರಿದ ಕನ್ನಡದ ನಟಿ!

ಅವಳೇ ನನ್ನ ಹೆಂಡತಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಾನು ಸ್ಟಾರ್ ನಟನಾಗಿ ಬೆಳೆಯಬೇಕು ಎಂದು ಕನಸು ಕಂಡುಕೊಂಡಿದ್ದರು ರವಿರಾಜ್. ಅದಕ್ಕಾಗಿ ಅವರೇ ನಿರ್ಮಾಣ ಮಾಡಿ ನಾಯಕನಾಗಿ  "ರಾಜ ಕೆಂಪು ರೋಜಾ" ಸಿನೆಮಾ ತೆಗೆದರು. ಈ ಸಿನೆಮಾಕ್ಕೆ ಆಗಿನ ಲಕ್ಕಿ ಹಿರೋಯಿನ್ ಮಾಲಾಶ್ರೀ ಅವರನ್ನು ಆಯ್ಕೆ ಮಾಡಿದರು. 

ಆ ಸಮಯದಲ್ಲೇ ತೆರೆಗೆ ಬಂದು ಇತಿಹಾಸ ಸೃಷ್ಟಿಸಿದ್ದ ನಂಜುಂಡಿ ಕಲ್ಯಾಣ ಮತ್ತು ಗಜಪತಿ ಗೌರ್ವ ಭಂಗ ನಡೆದಿತ್ತು. ಮಾಲಾಶ್ರೀ ಅವರಿಗೆ ಅತ್ಯಂತ ಬೇಡಿಕೆ ಇದ್ದ ಸಮಯವರು. ಹೀಗಾಗಿ ರವಿರಾಜ್  "ರಾಜ ಕೆಂಪು ರೋಜಾ"  ಸಿನೆಮಾ ತೆರೆಗೆ ತರಲು ಸಿದ್ಧ ಮಾಡಿ, ಮಾಲಾಶ್ರೀ ಅವರನ್ನು ನಾಯಕಿಯಾಗಿ ಮಾಡಿದರು.

69th Filmfare Awards South 2024 ಪ್ರಕಟ, ಅತ್ಯುತ್ತಮ ಚಿತ್ರ ಡೇರ್​ಡೆವಿಲ್ ಮುಸ್ತಫಾ, ದರ್ಶನ್​​ಗೆ ಸಿಗಲಿಲ್ಲ ಜಯ

ಈ ಚಿತ್ರದಲ್ಲಿ ಟೈಗರ್ ಪ್ರಭಾಕರ್, ವಜ್ರಮುನಿ ಸೇರಿದಂತೆ ಆಗಿನ ಕಾಲದ ಘಟಾನುಘಟಿ ನಟರು ಇದ್ದರು. ದೊಡ್ಡ ಸ್ಟಾರ್ ದಂಡೇ ಇದ್ದ ಈ ಸಿನೆಮಾ ಹಿಟ್‌ ಆಗಲಿಲ್ಲ. ಸಿನೆಮಾ ಹೀನಾಯ ಸೋಲು ಕಂಡಿತು. ನಿರ್ಮಾಪಕ ಕಂ ನಾಯಕ ನಟ ರವಿರಾಜ್ ಕೂಡ ಆರ್ಥಿಕವಾಗಿ ಕುಗ್ಗಿಸಿತು. 1990 ರಲ್ಲಿ ಬಂದ ಈ ಸಿನೆಮಾವನ್ನು ಎಸ್. ಉಮೇಶ್ ನಿರ್ದೇಶಿಸಿದ್ದರು.

90 ರ ದಶಕದಲ್ಲಿ ಚಿತ್ರರಂಗದಲ್ಲಿ ಇದ್ದ ರವಿರಾಜ್‌ ನಂತರ ತಮ್ಮ ಪಾರಂಪರಿಕ ಚಿನ್ನದ ಉದ್ಯಮಕ್ಕೆ ಮರಳಿ, ದಾವಣಗೆರೆಯಲ್ಲಿ ಉಳಿದಿದ್ದಾರೆ.  ಚಿತ್ರರಂಗದಲ್ಲಿ ರವಿರಾಜ್‌ ಎಂದು ಗುರುತಿಸಿಕೊಂಡಿದ್ದ ಅವರು ಈಗ ಉದ್ಯಮದಲ್ಲಿ ಮಂಜುನಾಥ ರೇವಣ್ಕರ್‌. ಈಗ ಅವರಿಗೆ 63 ವರ್ಷವಾಗಿದೆ.

Latest Videos
Follow Us:
Download App:
  • android
  • ios