Asianet Suvarna News Asianet Suvarna News

ಆ ಒಂದು ಘಟನೆಯಿಂದ ರಾತ್ರಿಪೂರ್ತಿ ನಿದ್ದೆ ಮಾಡದೆ, ಖಿನ್ನತೆಗೆ ಜಾರಿದ ಕನ್ನಡದ ನಟಿ!

ಆಕೆ  ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನೆಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಕೆ. ಆದರೆ ಆಕೆಯ ಬದುಕಲ್ಲೂ ಖಿನ್ನತೆಯಿಂದ ಬಳಲಿದ್ದರು. ಅದಕ್ಕೆ ಕಾರಣ ಚಿತ್ರರಂಗ.

actress Madhoo Shah alias Madhoobala  open talk about life marriage and career gow
Author
First Published Aug 4, 2024, 5:36 PM IST | Last Updated Aug 4, 2024, 5:36 PM IST

ಆಕೆ  ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಸಿನೆಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಕೆ. ಆದರೆ ಆಕೆಯ ಬದುಕಲ್ಲೂ ಖಿನ್ನತೆಯಿಂದ ಬಳಲಿದ್ದರು. ಚಿತ್ರರಂಗದಲ್ಲಿ ಉತ್ತುಂಗದ ಸ್ಥಾನದಲ್ಲಿದ್ದಾಗಲೇ ಆಕೆ ಮದುವೆಯಾಗಿ ದೂರ ಸರಿದರು. ಬಳಿಕ ಆಕೆಗೆ ಅವಕಾಶಗಳೇ ಸಿಗದಾದವು. ಇದೀಗ ಅನೇಕ ವರ್ಷಗಳ ಬಳಿಕ ಆಕೆ ಮತ್ತೆ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದಾರೆ.

ಅವರ್ಯಾರು ಅಲ್ಲ ನಟಿ ಮಧು ಬಾಲ ಅಲಿಯಾಸ್ ಮಧು ಶಾ, ಅಂದರೆ ಕನ್ನಡದಲ್ಲಿ ರವಿಚಂದ್ರನ್ ಜೊತೆಗೆ ಅಣ್ಣಯ್ಯ ಸಿನೆಮಾದಲ್ಲಿ ನಟಿಸಿದ್ದಾಕೆ. ಅರೆ ಅವರಿಗ್ಯಾಕೆ ಹೀಗಾಯ್ತು ಅಂದಕೊಳ್ಳಬೇಡಿ.  ಈ ಹಿಂದೆ ಸಂದರ್ಶನ ಒಂದರಲ್ಲಿ ನಟಿ ತಾನು ಆ ಒಂದು ಘಟನೆಯಿಂದ ರಾತ್ರಿ ಇಡೀ ಅತ್ತು, ಬೇಸರದಿಂದ ಖಿನ್ನತೆಗೆ ಬಳಲಿದ್ದೆ ಎಂದು ಬಹಿರಂಗಪಡಿಸಿದ್ದಾರೆ.

69th Filmfare Awards South 2024 ಪ್ರಕಟ, ಅತ್ಯುತ್ತಮ ಚಿತ್ರ ಡೇರ್​ಡೆವಿಲ್ ಮುಸ್ತಫಾ, ದರ್ಶನ್​​ಗೆ ಸಿಗಲಿಲ್ಲ ಜಯ

ನಟಿ ಮಧು ಬಾಲ 13 ವಯಸ್ಸಿನಲ್ಲಿ ಕ್ಯಾನ್ಸರ್‌ ನಿಂದ ತನ್ನ ತಾಯಿಯನ್ನು ಕಳೆದುಕೊಂಡರು. ತಂದೆ ಆಶ್ರಯದಲ್ಲಿ ಬೆಳೆದ ಆಕೆ, ವಿದ್ಯಾಭ್ಯಾಸ ಮುಗಿಸಿ, ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಜೊತೆಗೆ ಈಜುವುದು, ವ್ಯಾಯಾಮ ಮಾತ್ರವಲ್ಲ ಹಲ್ಲು, ಚರ್ಮ ಮತ್ತು ಕೂದಲಿನ ಟ್ರೀಟ್‌ಮೆಂಟ್‌ ತೆಗೆದುಕೊಂಡು ಚಿತ್ರರಂಗಕ್ಕೆ ಬರುಲು ತಯಾರಿ ನಡೆಸಿದರು. ಬಾಲಿವುಡ್‌ ಗೆ ಅವಕಾಶ ಪಡೆಯುವ ಸಲುವಾಗಿ ಹಿಂದಿ ಕೂಡ ಕಲಿತಿದ್ದರಂತೆ, 1991ರಲ್ಲಿ ಅಜಯ್ ದೇವಗನ್ ಅವರೊಂದಿಗೆ ಫೂಲ್ ಔರ್ ಕಾಂತೆ ಎಂಬ ಸಿನೆಮಾದಲ್ಲಿ ನಟಿಸಿ ಹೆಸರು ಪಡೆದರು.

ಆದರೆ ನಟಿ ಮಧು ಬಾಲ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸಲು ಮುಂದಾದಾಗ ಆ ಚಿತ್ರ ನಾಲ್ಕು ದಿನ ಶೂಟಿಂಗ್ ನಡೆಸಿ ಇದ್ದಕ್ಕಿದ್ದಂತೆ ಆ ಚಿತ್ರದಿಂದ ಒಂದು ಮಾತೂ ಹೇಳದೆ ಹೊರಹಾಕಿದ್ದರು. ಇದರಿಂದ ಬೇಸರಗೊಂಡ ನಟಿ ಮಧುಬಾಲ  ನನ್ನ ಮೊದಲ ಹೆಜ್ಜೆಯಲ್ಲೇ ಹಿನ್ನಡೆಯಾಯಿತಲ್ಲವಾ? ಇಷ್ಟೆಲ್ಲ ತಯಾರಿ ಮಾಡಿ ಸಿನಿ ಪಯಣದ ಬದುಕು ನಿಂತು ಹೋಗುತ್ತಲ್ಲ ಎಂದು ರಾತ್ರಿ ಪೂರ್ತಿ ಅತ್ತು ಅತ್ತು, ಹಲವು ದಿನಗಳ ಕಾಲ ಖಿನ್ನತೆಗೆ ಜಾರಿದ್ದರಂತೆ. ಜೊತೆಗೆ ಯಾರೊಂದಿಗೂ ಮಾತನಾಡುತ್ತಿರಲಿಲ್ಲವಂತೆ.

ನಾನು ಬದುಕಬೇಕು ದಯವಿಟ್ಟು ನನ್ನನ್ನು ಉಳಿಸಿಕೋ, ಕೊನೆ ಕ್ಷಣ ಆ ನಟನ ಬಳಿ ಆಂಗಲಾಚಿ ಬೇಡಿಕೊಂಡಿದ್ದ ನಟಿ ಮಂಜುಳಾ!

ಸುರಸುಂದರರಾಗಿರುವ ನಟರನ್ನು ಬಿಟ್ಟು ತಲೆಗೂದಲು ಇಲ್ಲದ ಉದ್ಯಮಿಯನ್ನು ಮದ್ವೆಯಾಗಿದ್ದೇಕೆ ಮಧುಬಾಲ?:
1993ರಲ್ಲಿ ಅಣ್ಣಯ್ಯ, ನಂತರ ರನ್ನ ಚಿತ್ರದಲ್ಲಿ ಕಿಚ್ಚ ಸುದೀಪ್​ ಅವರ ಅತ್ತೆಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ ಮಧುಬಾಲ ವೈಯಕ್ತಿಕ ಜೀವನದ ಕೆಲವೊಂದಿಷ್ಟು ಆಸಕ್ತಿಕರ ಸಂಗತಿಗಳನ್ನು ತಿಳಿಸಿದ್ದಾರೆ. ಒಂದೇ ಸಮಯದಲ್ಲಿ ಮೂರ್ನಾಲ್ಕು ಭಾಷೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅದೆಷ್ಟೋ ಸೂಪರ್ ಹಿಟ್‌ ಆಫರ್‌ಗಳನ್ನೂ ಕೈಬಿಟ್ಟವರು. ಆದರೆ   ಸಿನಿಮಾ ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಆನಂದ್​ ಎಂಬುವರನ್ನು ಮದುವೆಯಾಗಿದ್ದು, ಈಗ ಸುಖ ಸಂಸಾರ ನಡೆಸುತ್ತಿದ್ದಾರೆ. ಕೆಲಕಾಲ ಚಿತ್ರರಂಗದಿಂದ ದೂರ ಉಳಿದು ಇದೀಗ ಮತ್ತೆ  ಸಿನಿಮಾ ರಂಗಕ್ಕೆ ಕಂಬ್ಯಾಕ್​ ಮಾಡಿದ್ದಾರೆ.  

ಆದರೆ ಸುರಸುಂದರಿಯಾಗಿದ್ದ ಮಧುಬಾಲಾ ಅವರನ್ನು ವಿವಾಹವಾಗಲು ತುದಿಕಾಲಲ್ಲಿ ನಿಂತಿದ್ದಾಗ ಉದ್ಯಮಿಯನ್ನು ಆಯ್ಕೆ ಮಾಡಿಕೊಂಡರು. ಮದುವೆಯ ಸಂದರ್ಭದಲ್ಲಿ ಆನಂದ್​ ಅವರಿಗೆ ತಲೆಗೂದಲು ಇರಲಿಲ್ಲ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ ನಟನನ್ನೇ ಮದುವೆಯಾಗಬೇಕೆಂದು ಬಯಸಿದವಳು. ಆದರೆ ಸಿನಿಮಾದಲ್ಲಿ ತಳವೂರಿದ ಮೇಲೆ ನಟರ ಬಗ್ಗೆ ಚೆನ್ನಾಗಿ ಅರಿತುಬಿಟ್ಟೆ. ನಟರ ಬಗ್ಗೆ ಸಾಕಷ್ಟು ಅನುಭವವೂ ಆಯಿತು.  ಇಂದು ಒಬ್ಬಳು, ನಾಳೆ ಇನ್ನೊಬ್ಬಳು, ಮತ್ತೊಂದು ದಿನ ಮತ್ತೊಬ್ಬಳು... ಇದು ಬಹುತೇಕ ನಟರ ಪ್ರವೃತ್ತಿ. ಇದನ್ನು ನೋಡಿ ಅಸಹ್ಯ ಹುಟ್ಟಿತು. ಆಗಲೇ ನಾನು ಯಾವುದೇ ಕಾರಣಕ್ಕೂ ನಟರನ್ನು ಮದುವೆಯಾಗಬಾರದು ಎಂದು ಡಿಸೈಡ್​ ಮಾಡಿಬಿಟ್ಟೆ  ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ಜಾಹೀರಾತು ಶೂಟಿಂಗ್​ಗೆಂದು ತೆರಳಿದ್ದೆ. ಅದು ಆನಂದ್​ ಅವರ ಕಂಪೆನಿಯಾಗಿತ್ತು. ಅಲ್ಲಿ ಅವರ ಭೇಟಿಯಾಯಿತು. ಆಗಲೇ ಅವರಿಗೆ ನನ್ನ ಮೇಲೆ ಮನಸ್ಸಾಗಿತ್ತು.  ಅನೇಕ ಸಂದರ್ಭಗಳಲ್ಲಿ ಪ್ರೀತಿಯ ವಿಚಾರವನ್ನು ಪ್ರಸ್ತಾಪ ಮಾಡಿದರು. ಆದರೆ ಅವರು ಒಂದು ಘಟನೆಯಲ್ಲಿ ಅವರು ತಮ್ಮ ಕೂದಲನ್ನು ಕಳೆದುಕೊಂಡಿದ್ದರು. ಆತ್ಮವಿಶ್ವಾಸ ಕಡಿಮೆಯಾಗಿತ್ತು. ಪ್ರೀತಿಯ ಬಗ್ಗೆ ಹೇಳುವಾಗಲೂ ಅವರು ಇದೇ ಕುಗ್ಗಿನಿಂದಲೇ ಇದ್ದರು. ಆದರೆ ಸುಂದರವಾದ ನಟರು ಹೇಗಿದ್ದಾರೆ ಎಂದು ಚೆನ್ನಾಗಿ ತಿಳಿದುಬಿಟ್ಟಿದ್ದೆ. ಆದ್ದರಿಂದ ಆಂತರಿಕ ಸೌಂದರ್ಯವೇ ಮೇಲೆಂದು ತಿಳಿದ ನಾನು ಆನಂದ್​​ ಅವರನ್ನು ಆಯ್ಕೆ ಮಾಡಿಕೊಂಡೆ. ಅವರ ಪ್ರೀತಿಯ ಪ್ರಸ್ತಾವ ಒಪ್ಪಿದೆ. ಮದುವೆಯಾಗಿ ಸುಖವಾಗಿದ್ದೇವೆ ಎಂದಿದ್ದಾರೆ.

Latest Videos
Follow Us:
Download App:
  • android
  • ios